ಈ ಪುಟವನ್ನು ಪರಿಶೀಲಿಸಲಾಗಿದೆ
೨೧೨
ರಾಮಚಂದ್ರಚರಿತಪುರಾಣಂ

ಕಂ || ತ್ರಿದಶೋಪಸರ್ಗಮಂ ಬಗೆ
ಯದೆ ಕುಲನಗದಂತೆ ದೇಶಭೂಷಣ ಮುನಿಪರ್|
ಸದಮಲ ಶುಕ್ಲ ಧ್ಯಾನದೊ
ಳುದಾತ್ತರಿರೆ ಘಾತಿಗಾಯ್ತು ಕದಳೀಘಾತಂ ||೪೯||
ಅಂತು ವಿಗತ ಘಾತಿ ಚತುಷ್ಟಯರನಂತ ಜ್ಞಾನಾದಿ ನವ ಕೇವಲಲಬ್ಲಿ ವಡೆ
ವುದುಂ__

ಕಂ|| ದುಂದುಭಿ ನಿನಾದ ಮುಖರಂ
ಮಂದಾರ ನವರು ವಿಕಚ ಕುಸುಮಾಸಾರಂ||
ಸಂದಿಸೆ ಕೇವಲಿ ಪೂಜೆಗೆ
ಬ೦ದತ್ತು ಚತುರ್ನಿಕಾಯ ದೇವನಿಕಾಯಂ||೫೦||

ಅಂತು ಬಂದು ಪೂಜಿಸುವುದುಮುದಾತ್ತ ರಾಘವಂ ಕಿಂಚಿದುನ್ನಮಿತ ಕಂಧರಂ
ಮುಕುಲಿತಾಂಜಲಿ ಪುಟಂ ನಿಮಗುಪಸರ್ಗವಾದ ಮಾರ್ಗವಂ ಬೆಸಸಿಮೆನೆ ದೇಶ
ಭೂಷಣ ಕೇವಲಿಗಳಿಂತೆಂದು ಬೆಸಸಿದರ್:- ಪದ್ಮಪುರಮನಾಳ್ವ ವಿಜಯಪರ್ವತ
ಕ್ಷಿತಿಪತಿಯ ಚರನನ್ನತಸ್ವರನೆಂಬನಾತನ ಕುಲಾಂಗನೆಗೆ ತನಯರುದಿತನುಮನುದಿ
ತನುಮೆಂಬರಾದರಾಕೆಯೊಡನಾಪುರದ ವಸುಭೂತಿವೆಸರ ವಸುಧಾಮರಂ ಮತಿ
ವಾಯಿತ್ತು ಮಿರಲುಪಭೋಗ ರಾಗ ವೇಗದಿಂ ವಿವೇಕ ವಿಕಲೆಯಾಗಿ ಮುಂದಯ
ದೊಂದುದಿವಸಂ ತನ್ನವರನಮ್ಮ ತಸ್ವರನಿರೆ ನಮಗೆ ಮೆಚ್ಚದಂತೆ ನೆಗುಲ್ಬಾರದೆಂಬು
ದುಮಾಪಾನಮೃತಸ್ವರನಂ ದುರಿತ ಭೀರುವಾಗ ದಾರುಮಆಶಯದಂತೆ ಕೊಲ್ವು
ದುಂ__

ಕಂ || ಅಪವಾದಕ್ಕಗಿಯದೆ ನರ
ಕ ಪಾತಮಂ ಬಗೆಯದಾ ಮಹಾಪಾತಕಿ ಮು ||
ನ್ನು ಪಪತಿಯಿಂ ಪತಿಯಂ ಕೊಲಿ
ಸಿ ಪುತ್ರವಧೆಗಂ ಬಳಿಕ್ಕೆ ಬಗೆಯಂ ತಂದಳ್||೫೧||

ಸೈರಿಣಿ ಬಗೆಬಂದಾಗಳೆ
ಮಾರಕ್ರೀಡೆಯನೊಡರ್ಚಲೆ೦ದುಸಪತಿಯಂ
ದಾರಕನಂ ಕೊಲವೇ
ದಾರುಣ ಕರ್ಮಕ್ಕೆ ಕಾಮುಕರ್ ಪೇಸುವರೇ|| ೫೨||
. _____________________________________
1.ಜ್ಞಾನದಿಂ ನವ ಕೇವಲಬ್ಬಿಗಳc ಪಡೆವುದು೦. ಗ. ಘ.
2. ನಮೃತೇಶ್ವರ.ಚ.