ಈ ಪುಟವನ್ನು ಪ್ರಕಟಿಸಲಾಗಿದೆ
ಪಂಪರಾಮಾಯಣದ ಕಥೆ
19

ಬೇಕೆ೦ಬ ರಾಜಾಜ್ಞೆಯನ್ನು ತಂದಿರುವೆನೆಂದೂ ತಿಳಿಸಿದನು. ಇದನ್ನು ಕೇಳಿ ಲಕ್ಷಣನು ಬಹಳ ಕೋಪಗೊಂಡು ಭರತನ ವೃತ್ತಾಂತವೇನೆಂದು ಕೇಳಲು, ಆತನು ಚತುರಂಗಬಲ ಸಮೇತನಾಗಿ ನಂದ್ಯಾವರ್ತಪುರಕ್ಕೆ ಹೊರಟಿರುವನೆಂದೂ ಕನಕನೂ ಸಿ೦ಹೋದರನೂ ಸೇನಾಸಮೇತರಾಗಿ ಅವನನ್ನು ಸೇರಿರುವರೆಂದೂ ಹೇಳಿದನು. ಇದನ್ನು ಕೇಳಿ ಪೃಥಿಧರನು ಅತಿವೀರನ ದೂತನನ್ನು ಮತ್ಯಾದೆ ಮಾಡಿ ಕಳುಹಿಸಿ ತಾನೂ ರಾಮಲಕ್ಷ್ಮಣರೂ ರಥವನ್ನೇರಿ ನಂದ್ಯಾವರ್ತ ನಗರ ವನ್ನು ಸೇರಿದರು. ಲಕ್ಷ್ಮಣನು ಅತಿವೀರನ ಅರಮನೆಯ ಬಾಗಿಲಿಗೆ ಹೋಗಿ ದೊರೆಗೆ ಹೇಳಿ ಕಳುಹಿಸಿ ಅವನ ಅನುಮತಿಯ ಮೇರೆಗೆ ಒಳಹೊಕ್ಕು ಅವನಿಗೆ ನಮಸ್ಕರಿಸದೆ ನಿಂತಿರಲು, ದೊರೆಯು ಕೋಪಗೊಂಡು ಭರತನನ್ನು ಹಿಯ್ಯಾಳಿಸಿ ಮಾತನಾಡಿದನು. ಅದಕ್ಕೆ ಲಕ್ಷ್ಮಣನು ಕಿಡಿಕಿಡಿಯಾಗಿ ದೊರೆಯಮೇಲೆ ಬಿದ್ದು ಅವನನ್ನು ಚೆನ್ನಾಗಿ ಹೊಡೆದನು. ಅವನಿಗೆ ಸಹಾಯವಾಗಿ ಬಂದಿದ್ದ ಇತರ ರಾಜರು ಲಕ್ಷಣನ ಪರಾಕ್ರಮವನ್ನು ನೋಡಿ ಭೀತರಾದರು. ಲಕ್ಷ್ಮಣನು ಅತಿವೀರನ «ಳೆದುಕೊಂಡು ಬಂದು ಭರತನಿಗೊಪ್ಪಿಸಿದನು. ಅತಿವೀರನು ತನ್ನ ರಾಜ್ಯವನ್ನು ರಾಮ ಲಕ್ಷ್ಮಣರಿಗೊಪ್ಪಿಸಿ ಜಿನದೀಕ್ಷೆಗೊಂಡನು. ರಾಮನು ಅತಿವೀರನ ಮಗ ನಾದ ವಿಜಯರಥನಿಗೆ ಆ ರಾಜ್ಯದ ಪಟ್ಟವನ್ನು ಕಟ್ಟಲು ಆತನು ತನ್ನ ತಂಗಿಯನ್ನು ಲಕ್ಷ್ಮಣನಿಗೆ ಕೊಟ್ಟು ಮದುವೆ ಮಾಡಿದನು.
ಅನಂತರ ಅವರು ಅಲ್ಲಿಂದ ಹೊರಟು ಕ್ಷೇಮಾಂಜಲಿ ಪುರಕ್ಕೆ ಬಂದು ಊರ ಹೊರಗಣ ಉದ್ಯಾನವನದಲ್ಲಿ ರಾಮನೂ ಸೀತೆಯೂ ವಿಶ್ರಮಿಸಿಕೊಂಡಿರುವಲ್ಲಿ ಲಕ್ಷ ಣನು ಪಟ್ಟಣವನ್ನು ನೋಡುವುದಕ್ಕಾಗಿ ರಾಜಬೀದಿಯಲ್ಲಿ ಹೊರಟನು. ಒಂದೆಡೆಯಲ್ಲಿ ಜನರು ಗುಂಪು ಕೂಡಿ, ಜಿತಪದ್ಮಯ ವಿಷಯವಾಗಿ ಮಾತನಾಡುತ್ತಿದ್ದರು. ಆಕೆಯು ಯಾರೆಂದು ತಕ್ಷಣನು ಅವರನ್ನು ಕೇಳಲು, ಆಕೆಯು ಅಲ್ಲಿಯ ದೊರೆ ಯಾದ ಶತ್ರು೦ದಮನ ಮಗಳೆಂದೂ ಆಕೆಯು ಹುಟ್ಟಿದಾಗ ಶಸ್ತ್ರಶಾಲೆಯಲ್ಲಿ ಒ೦ದು ಶಕ್ತಿ ಹುಟ್ಟಿತೆಂದೂ, ಆಗ ಆಕಾಶವಾಣಿಯು “ ಶತ್ರುಂದವನು ಈ ಶಕ್ತಿ ಯಿಂದಿಟ್ಟರೆ ಸ೦ಚಲಿಸದೆ ಅದನ್ನು ನಿರ್ಭಯದಿಂದ ಹಿಡಿದ ಮಹಾಸತ್ವನು ಈ ಕನೈಗೂ ದಕ್ಷಿಣ ಭರತ ದೇಶಕ್ಕೂ ರಮಣನಾಗುವನು” ಎಂದು ನುಡಿಯಿತೆಂದೂ, ದೊರೆಯು ಈ ರೀತಿಯಿಂದಲ್ಲದೆ ಮಗಳಿಗೆ ಮದುವೆಮಾಡೆನೆಂದು ನಿಶ್ಚಯಿಸಲು ಅನೇಕ ರಾಜಕುಮಾರರು ಬ೦ದು ಶಕ್ತಿ ಪ್ರಹಾರದಿಂದ ಯಮಪುರವನ್ನು ಸೇರಿದ ರೆಂದೂ ಒಬ್ಬ ಮುದುಕನು ಹೇಳಿದನು. ಲಕ್ಷ್ಮಣನು ಇದನ್ನು ಕೇಳಿ ಅರಮನೆಯ ಬಳಿಗೆ ಬಂದು ಕನ್ಯಾ ರ್ಥಿಯಾಗಿ ರಾಜಕುಮಾರನೊಬ್ಬನು ಬಂದಿರುವನೆಂದು ಹೇಳಿಕಳುಹಿಸಿ ಅಪ್ಪಣೆ ಪಡೆದು ರಾಜಸಭೆಯನ್ನು ಹೊಕ್ಕು, ಕನ್ಯಾಮಣಿಗೆ ಮನಸೋತು ರಾಜನಿಗೆರಗದೆ ಮಣಿಪೀಠದ ಮೇಲೆ ಕುಳಿತುಕೊಂಡನು. ದೊರೆಯು