೨೬೪ ರಾಮಚಂದ್ರ ಚರಿತ ಪುರಾಣಂ ಕ೦! ಈ ದೊರೆಯನುಮಂ ಕಾಡಿದ ನಾ ದೊರೆಯಂ ಹನುಮನಳ್ಳಿ ಕಾದದ ನೆವದಿಂ || ಪೋದನವನಧಿಕನೆನ್ನದೆ ಕಾದಿ ಕೊಲಲ್ ಬಗೆದನೇನುದಾತ್ತನೆ ರಘುಜಂ ಎನೆ ರಾಮಚಂದ್ರನನುಗ್ರಹಕ್ಕೆ ಸುಗ್ರೀವಂ ಸಮಾಹಿತ ಚಿತ್ತನಾಗಿ ವಿರಾಧಿ ತನ ಮೊಗಮಂ ನೋಡಿ || ೧೫ || ಮ | ವಿರಹ ವ್ಯಾಕುಲರಂತೆ ದೇವರುಸಿರ್ದಿ ವೃತ್ತಾಂತವೇನೆಂದು ನಾ | ನರ ಚಿಹ್ನ೦ಗೆ ವಿರಾಧಿತಂ ತಿಳಿಸಿದಂ ಕಾಂತಾರದೊಳ್ ಜಾನಕೀ ! ಹರಣಂ ವಂಚನೆಯಿಂದಮಾದತೆ ಅನಂ ಸಂಗ್ರಾಮವಾದಂದನಂ | ಖರನುಂ ದೂಷಣನುಂ ಜನಾರ್ದನನ ಕೈಯೊಳ್ ಕಾದಿ ಸತ್ತಂದನಂ ||೧೬|| || ೧೭ || ಕಂ|| ಆರುಯ್ದರೆಂದುಮಜಯದೆ ನಾರಾಯಣನಿರ್ದನದೊಡುಯ ನ ಕರುಳಿ೦ || ವೀರತ್ರೀಗೆ ಭುಜಾಸಿಯ ಧಾರಾ ಗೃಹದಲ್ಲಿ ತೋರಣಂಗಟ್ಟದಿರಂ ಎನೆ ಸುಗ್ರೀವನವಸರಂಬಡೆದು ಸಪ್ತ ದಿವಸಕ್ಕೆ ದೇವಿಯರ ಸುದ್ದಿಯಂ ತರ್ಪೆನೆಂದತಿ ಪ್ರತಿಜ್ಞೆಗೆಯು ಬಿನ್ನವಿಸಿ ಮೆಚ್ಚೆ ನಿಚ್ಚ ಪಯಣದಿಂ ಬಲನುಮಚ್ಚು ತನುಂ ವಿರಾಧಿತನುಂ ಬೆರಸು ಕಿಷ್ಕಂಧ ಪುರಮನೆಯೀ ದೂತನನಟ್ಟುವುದುಮಾತಂ ಯಮದೂತನಂತೆ ಬಂದು ಸಾಹಸ ಗತಿಯ೦ ಕಂಡು ಶಾ !! ದೇವರ್ ಕಾವೊಡಮಿಂದು ನಿನ್ನ ನಗೆಯಂ ಸುಗ್ರೀವ ಕೊಂದೀವೆನೆಂ ! ದಾ ವೀರಾಗ್ರಣಿ ವಿಗ್ರಹ ವ್ಯಸನದಿಂದೇಂದನಿಂ ಪ್ರಾಣಮಂ || ಕಾವುದ್ಯೋಗಖದೊಂದೆ ಮತ್ಪತಿಯ ಪಾದಾಂ ಭೋಜನಂ ಬಂದು ಕಾಣ್ | ಜೀವಾಕರ್ಷಣ ವಿದ್ಯೆಯಂ ಮೆಳತೆಯದನ್ನು ರಾಮ ರೌದ್ರೇಷುಗಳ || ೧೮ || ಎಂದು ಗಜ ಗರ್ಜಿಸಿದ ದೂತನ ಮಾತಿಂಗೆ ಮುಳTು ಮುಳಿಸಂ ಮೊಗ ಕ್ಕೆ ತಾರದೆ Y ಕಂ || ಸೆರಗ ಬೆರಗ೦ ಬಗೆಯದೆ ಪುರಮಂ ಪೊಯಮಟ್ಟು ಕೃತಕ ಸುಗ್ರೀವಂ ಕೇ ! ಸರಿಯಂತೆ ಗರ್ಜಿಸುತ್ತು ನಿರಂಕುಶ೦ ಮುಟ್ಟೆವಂದನಿದಿರೊಡ್ಡಣಮಂ || ೧೯ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.