ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨re ರಾಮಚಂದ್ರಚರಿತಪುರಾಣಂ ಸೃದ್ಧಿ ಘನಂ ಕರಗೆ ಕಂಡು ಕಂಡಶನಿವೇಗ ವಿದ್ಯಾಧರಂ | ಘನೋಪಲದ ಮಾತ್ರೆಯಿಂ ಕರಗೆ ತೃಷ್ಣ ಸಾಮ್ರಾಜ್ಯದೊಳ್ || ಮನಸ್ವಿ ನಿಲವನ್ನು ತನ್ನ ಸುತನಂ ಸಹಸ್ರಾರನಂ | ಜಿನೇಂದ್ರ ಮುನಿರೂಪಮಂ ತಳೆದನಸ್ತ್ರ ಸಂತಾಪಮಂ || ೧೨೭ || ಅ೦ತಾತಂ ಜಾತರೂಪಧರನಪ್ಪುದುವಿತ್ತ ಕಿಷ್ಠಿ೦ಧನುಂ ಮಧುಪರ್ವತದ ಮೇಲೆ ಪುರಮಂ ಮಾಡಿ ಶ್ರೀಮಾಲೆಯೊಳ್ ಕೂಡಿ ಸುಖಮಿರ್ಪುದುಂ--- ಕಂ|| ಆ ಕೋಟೇಶ್ವರ ವಲ್ಲಭೆ ಋಕ್ಷಜ ಸೂರ್ಯ ತನೂಜರಂ ಪಡೆದು ಸರೋ | ಜಾಕ್ಷಿಯನನಂತರಂ ಶುಭ ಲಕ್ಷಣೆಯಂ ಸರಮಾಲೆಯ೦ ಸತಿ ಪಡೆದ || ೧೨೮ || ಆಕೆಯಂ ಮೇಘಪುರವನಾಳ್ವ ಮೇರುಸುತನಘ್ನ ಸಿಂಹಮರ್ದನಂಗೆ ಕೊಟ್ರೆ ಡಾತಂ ಕರ್ಣಪರ್ವತದೊಳ್ ಕರ್ಣಕುಂಡಲವೆಂಬ ಪುರಮುಂ ಮಾಡಿ ಮನೋ ರಾಗದಿನಿರ್ಪುದುಮಿತ್ತಲ್‌ ಕ| ಗಗನೇಚರ ಕೈರವ ಕುಲ ಮೃಗಧರನೆನಿಸಿದ ಸುಕೇಶನ೦ಗನೆಗಾದರ್ || ಪಗೆಯನಗೆಯೆತ್ತಲಿಂದ್ರಾ ಣಿಗೆ ಮಾಲಿ ಸುಮಾಲಿ ಮಾಲ್ಯವಂತ ಸುತರ್ಕಳ್ 1! ೧೨೯ || ಅಂತವರ್ ನವ ಯೌವನ ಪ್ರಾಪ್ತರುಂ ಸಾಧಿತ ಸಕಲ ವಿದ್ಯರುನುವಾರ ವೀರ್ಯರುಮಪ್ಪ ದ೨೦ ಮೆಚ್ಚಿದ ದೆಸೆಯೊಳ್ ಮೆಚ್ಚಿದಂತೆ ಬಿಚ್ಚತಂ ಕ್ರೀಡಿಸುತ್ತು ಮಿರೆ ಸುಕೇಶನವರ೦ ಕರೆದು ದಕ್ಷಿಣ ಸಮುದ್ರಕ್ಕೆ ಪೋಗದಿರಿಮೆಂಬುದುಮುವ ರದೇಕಾರಣ ಮೆನೆ ಸುಕೇಶನಿಂತೆಂದಂ ತೋಯದವಾಹನನಿಂ ತೊಡಗಿ ನಮ್ಮನ್ವಯಾ ಗತಮಪ್ಪ ಲಂಕಾಪುರವನಶನಿವೇಗನೆ ಏಳೆದುಕೊಂಡು ನಿರ್ಘಾತ೦ಗೆ ಕೊಟ್ಟೋ ಡವನನೇಕವಿದ್ಯೆಗಳಿನಾರ್ಗ೦ ದುಷ್ಟ ವೇಶಮನೆ ಕಾಪಂಮಾಡಿ ಬಲಿಷ್ಠನಾಗಿರ್ದ ನಾ ತಂ ನಿಮ್ಮ ಕಂಡೊಡೆ ಕೊಟ್ಟು ಮೆ೦ದು ಬಾರಿಸಿದೆನೆಂಬುದುವವರದರ್ಕೆ ಮನ ದೊಳೆ ಕನಲ್ಲು ಕಂ| ಇನ್ನೆವರಂ ಕುಲ ಪರಿಭವ ಮಮ್ಮಡಿ ಸೇದಿರ್ದಿರಾಲಿಸಿ ತಡೆದಂ || ದುನ್ನತಿ ಸಿಂಗುಗುಮೆಂದು ತನ್ನ ಕ್ರೋಧರ್‌ ದವಾಗ್ನಿಯಂತುರಿದೆರ್ || ೧೩೦ ||