St3 ರಾಮಚಂದ್ರಚರಿತಪುರಾಣಂ ಯಾರ್ಧನಗಮಂ ನಾಕಮೆಂದು ತನ್ನ ಖಚರ ಕಾಂತಿಯರ ನೂರ್ವಶಿ ರಂಭೆ ಸುಕೇಶಿ ಯರೆಂಬ ದೇವಕಾಂತೆಯರೆಂದು ತನ್ನ ವಾರಣಮನೈರಾವಣಮೆಂದು ತನ್ನಶ್ವಮ ನುಚ್ಛೇಶವಮೆಂದು ತನ್ನನುಚರನಂ ಹರಿಣ ಕೇಸರಿವೆಸರ ಪಡೆವಳನೆಂದು ತನ್ನ ಗಾಯಕರಂ ತುಂಬುರು ನಾರದರೆಂದು ತನ್ನ ಮುಖ್ಯ ಪುರುಷರ ಲೋಕಪಾಲಕ ರೆಂದು ತನ್ನ ಸಭೆಯಂ ಸುಧರ್ಮವೆಂದು ತನ್ನ ಸೇನೆಯಂ ದೇವಸೇನೆಯೆಂದು ತನ್ನ ಸಾಮಾನ್ಯಾಯುಧಮಂ ಕುಲಿಶಾಯುಧವೆಂದು ತನ್ನ ವಿಮಾನಮಂ ಋತು ವಿಮಾನವೆಂದು ತನ್ನ ಪುರೋಹಿತರನಸ್ವಿನ್ಯಾದೃಷ್ಟವಸುಗಳೆಂದು ತನ್ನ ಕಿನ್ನರ ಪುರದವರ್ಗಳಂ ಕಿನ್ನರರೆಂದು ತನ್ನ ಗಂಧರ್ವಪುರದವರ್ಗಳಂ ಗಂಧರ್ವರೆಂದು ತನ್ನ ಯಕ್ಷಪುರದವರ್ಗಳಂ ಯಕ್ಷರೆಂದು ತನ್ನ ಮಂತ್ರಿಮುಖ್ಯನಂ ಬೃಹಸ್ಪತಿ ಯಂದು ತಾನಿಂದ್ರನಲ್ಲದೆಯುಂ ತನ್ನನಿಂದ್ರನಾಗೆ ಬಗೆದು ನಾಲ್ವತ್ತೆಕ್ಟ್ರಾಸಿರಮಂತಃ ಪುರಕ್ಕಧಿಪನಾಗಿ ಪುರಾಕೃತ ಪುಣ್ಯದಿಂ ಸುಖಮನನುಭವಿಸುತ್ತಿರೆ ಉ ಮಾಲಿಗೆ ಕಪ್ಪ ಮಾವ ಖಚರರ್ ಪಿಡಿದಿಂದ್ರನ'ನೀಯದಾಜ್ಞೆಯಂ | ಪಾಲಿಸಲೊಲ್ಲದೇಳಿಸುವುದು ಚರರಿಂದsದುಗ್ರ ಕೋಪಮು || ನೀಲಿಸೆ ಮೇದಪ್ಪಿದ ಬಲಂಬೆರಸಿಂದ್ರನನಾಗಳುಂತೆ ನಿ! ರ್ಮೂಲಿಸಲೆಂದು ಕೀ ನಡೆದೆಯೇ ದನಾ ವಿಜಯಾರ್ಧಶೈಲಮಂ ! ೧೩೫ || ಅಂತು ತನ್ನೊಡವುಟ್ಟಿದ ಸುಮಾಲಿ ಮಾಲ್ಯವಂತರುಂ ಕಿಷ್ಕಂಧನ ಮಕ್ಕ ಳಪ್ಪ ಋಕ್ಷಜ ಸೂರಜರುಂ ಪೆಅರಜಿಕೆಯ ನಾಯಕರುಂ ಬೆರಸಸಂಖ್ಯಾತ ಸೇನಾಸಮನ್ವಿತನೆ ಬರ್ಪುದನಿಂದ್ರಂ ಕೇಳು ರಥನೂಪುರಚಕ್ರವಾಳಪುರದಿಂದಿದಿರೆ ಬಂದೈರಾವಣಾರೂಢಂ ಲೋಕಪಾಲ ಪುರಸ್ಸರಂ ಮಹಾಯುದ್ದಂಗೆಯ್ದು ದುಂ ಕಂ | ಮಾಲಿ ಮುಳಿಸಿಂದಮಿಂದ್ರನ ಮೇಲೆ ನಿಶಾತಾಸ್ತ್ರ ವರ್ಷಮಂ ಕಜವುದುಮಾ || ಮಾಲಿಯನಿಂದ್ರಂ ದಿವ್ಯ ಶ ರಾಲಿಯಿನಚ್ಚಂತಕಂಗೆ ಬಾಣಸು ಗೆಯ್ದ೦ || ೧೩೬ || ಅದಂ ಕಂಡು ಸುಮಾಲಿ ಮಾಲ್ಯವಂತರುಂ ಋಕ್ಷಜ ಸೂರಜರುಂ ಪೆರು ಮಆಕೆಯ ನಾಯಕರುಂ ಬಿ ತೋಡಿಪೋಗಿ ಪಾತಾಳಲಂಕೆಯಂ ಪೊಕ್ಕರಾಗ ಳಪಹಾರ 'ತೂರಮಂ ಪೊಯಿಸಿ 1: ನಾತನಾಜ್ಞೆಯಂ . 1. ಈ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.