ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸಂ ೩೬೩ ಆ ಸಮಯದೊಳ್ ನಳ ನೀಲ ಸುಷೇಣ ಪ್ರಸನ್ನ ಕೀರ್ತಿ ಪ್ರಮುಖ ಮುಖ್ಯ ನಾಯಕರಂ ಸೇನಾಮುಖಕ್ಕೆ ಪೇಯ್ದು ಸುಗ್ರೀವಾಂಗದ ಜಾಂಬವದ್ದ ಗನಪತಿ ಭೂತ ಗತಿ ಪ್ರಕೃತಿಗಳಂ ಪಶ್ಚಿಮ ಪ್ರದೇಶದೊಳ್ ನಿಯಮಿಸಿ ತಟದ್ದಕ್ಕೆ ವಜ್ರದಂಷ್ಟ ವಿರಾಧಿತ ಮಹೇಂದ್ರರ್‌ ಮೊದಲಾಗೆ ಪಲಬರುಮಂ ಬಲವಕ್ಕದೊಳ್ ನಿಯೋಜಿಸಿ ಮಂದರ ಸಮೂಾರ ಸಿಂಹನಾದ ವರಾಹರ್‌ ಮೊದಲಾದರನೆಡವಕ್ಕದೋಳ್ ನಡೆಯಿ ಮೆಂದು ಪೇಟ್ಟು ಸೌಮಿತ್ರಿ ಸಕಲ ವಿದ್ಯಾಧರ ನಾಯಕರ್ವೆರಸು ತಾನುಂ ಹನುಮ ನುಂ ದಾಶರಥಿಯ ರಥೋಭಯಪಾರ್ಶ್ವದೊಳಂ ರಥಾರೂಢರ್ ಮೆಯ್ಯಾ ಪಾಗೆ ನಡೆವುದು ಮ | ನಡೆಗೊ೦ಡತ್ತು ಮದೇಭ ದಾನಜಲ ಧಾರಾಸಾರದಿ೦ ಮಾರುತಂ | ನಡೆಗೆಟ್ಟರ್ಪಿನಮುತ್ಪತಾಕೆಗಳಿನಾಕಾಶಾಪಗಾ ವೀಚಿ ನೂ || ರ್ಮುಡಿಸುತ್ತಿ ರ್ಪಿನಮಸ್ತ್ರಶಸ್ತ್ರ ಪಟಲ ಪ್ರದ್ಯೋತದಿಂದಂ ಪಗಲ್ | ಕಡುಕೊರ್ವ೦ ಪಡೆದಿರ್ಪಿನಂ ರಘುತನೂಜಾಖರ್ವ ಚಾತುರ್ಬಲಂ || ೩೨ || ಕಂ || ಕರಿ ತುರಗ ರಥ ಪದಾತಿಯ ಪರಿಸಂಖ್ಯೆಯನಜಿಯೆನಲ್ಲಿ ಕೇತನ ಪಟ ಸಂ || ಚರಣಕ್ಕೆ ನಭಂ ಭಟ ಸಂ ಚರಣಕ್ಕೆ ಧರಿತ್ರಿ ನೆನೆಯದೆಂಬಿದನ ಜಿವೆಂ || ೩೩ 11 ಮ || ನಿಜತೇಜಂ ಪೋಗಾಗೆ ಸೈರಿಸನೆ ರಾಮಸ್ವಾಮಿಯೆಂಬಂತೆ ನೀ ! ರಜ ಮಿತ್ರ ಪ್ರಭಯಂ ಪಳಂಚಲೆದು ಸೀತಾದೇವಿಯಂ ಕೊಂಡು ಪೋ 4 ದ ಜಗತ್ಕಂಟಕ ತೇಜಮಿರ್ದದೆಸೆಯಂ ಪೂಲ್ವಂತು ಸತ್ತು ೦ದಿಶಾ ! ವ್ರಜನಂ ಪೋಟ್ಟು ಪೊದಟ್ಟು ಕೊರ್ವುವಡೆದತ್ತು ತ್ತಾನ ಸೇನಾರಜಂ || ೩೪ || ತೆಣ ಉತ್ತುಂ ತಲೆಮಟ್ಟು ತಾಳಿ ಧರೆಯಂ ಸೇನಾಭರಾಕ್ರಾ೦ತದಿ೦ || ಫಣಿರಾಜಂ ನಡುನೆತ್ತಿ ಪ್ರೊ ಕಿಡಿವಿಟ್ಟಂತಿರ್ದುದಾಗಳ್ ಫಣಾ || ಮಣಿಚಕ್ರಂ ವಿಷವ ಧೂಮಪಟಲಂ ನಿಶ್ವಾಸ ನಿರ್ಯತ್ಸಾ || ರಣನಿಂ ಪೂರಿಸಿದಂತಿರಿರ್ದುದು ಫಣಾ ಚಕ್ರಾಂಕಿತಂ ಸ್ವಸ್ತಿಕಂ || ೩೫ 1, ಅ೦ತಸಂಖ್ಯಾತ ಸೇನಾ ಸಮುದ್ರಂ ದಕ್ಷಿಣಸಮುದ್ರಾಭಿಮುಖವಾಗಿ ನಡೆ ದು ಕಂ | ವೇಲಾಂಧ ನಗ ನಿತಂಬದ ವೇಲಾಂಧ ಪುರೋಪಕಂಠಮಂ ಸಾರ್ದುದು ಭೂ |