೩೬೮ ರಾಮಚಂದ್ರಚರಿತಪುರಾಣಂ ಕ೦ 11 ಕುಲ ಕಾಂತಾ ಸಂತೋಷಂ ಕುಲವರ್ಧನ ಹೇತು ಪರವಧೂ ಸಂತೋಷ೦ || ಕುಲನಾಶ ಹೇತುವೆ೦ಬಿದು ಹಲಧರ ಗೋಪಾಲ ಬಾಲಕ ಪ್ರಖ್ಯಾತಂ || ೫ || ಮ || ವಧಮುಂ ಬಂಧನಮುಂ ಪರಾಭವಮುಮಂಗಚ್ಛೇದಮುಂ ಪೊರ್ದುಗುಂ | ವಿಧು ವಿಖ್ಯಾತಿ ಕಲುಂಬುಗೊಳ್ಳುವಪವಾದಾತೋದ ನಾದಂ ದಿಶಾ || ವಧಿಯ ದಾಂಟುಗುಮನ್ಯ ಜನ್ಮದೊಳಮಕ್ಕುಂ ದುರ್ಗತಿ ಕೇಶಮಂ | ದಧಿರಾಜರ್ ಕೆಲರಾಲಿಸರ್ ಮದುಮನ್ಯ ಪ್ರೇಯಸೀವಾರ್ತೆಯಂ || ೫೯ || ಯಮಪಾಶಂ ಪಗೆವಂಗೆ ಕಲ್ಪಲತೆ ಕೈಯಾಂತಂಗೆನಲ್ಲಿ ಚಂಡ ವಿ | ಕ್ರಮಮಂ ಚಾಗದ ಪೆರ್ಮೆಯಂ ಮೆಅಲೆಯದನ್ಯಸ್ತ್ರೀ ಕಚಾಕರ್ಷಣ | ಶ್ರಮ ಸಂಭೋಗ ವಿಳಾಸಮಂ ಮೆರೆವ ಬಾಹಾಸಂಗದಿಂ ಪಿಂಗದಿ | ರ್ಕುಮೆ ನೀರಾಂಗನೆ ಕಡ್ಡೆ ತೋಳ್ಕೊಸುಗೆಯೊಳ್ ಮೆಳ್ಳಟ್ಟು ನಿನ್ನ ||೬೦॥ ಕಂ|| ಪೂವಿನೊಳಂ ಪೋರ್ಕುಳಿ ನವ ಗೇವುದೊ ಯುದ್ದಂ ಪ್ರಧಾನ ಪುರುಷ ಕ್ಷಯಮೆ೦ || ಬೀ ವಚನಮಂ ವಿಚಾರಿಪು ದೀ ವುದು ಜಾನಕಿಯನುವುದಸದಾಗ್ರಹಮಂ ೬೧ || ಪರಿಜನಮುಮಾಪ್ತ ಜನಮು೦ ಪುರಮುಂ ಬಾಂಧವರುಮಗಲದೊಂದೆಡೆಯೊಳ್ ಸೈ 1 ತಿರಲಕ್ಕುಂ ಜಾನಕಿಯಂ ಪರಿಹರಿಸಿದೊಡಲ್ಲದಂದಿರಲ್ ಬಂದಪುದೇ || ೬೨ || ಎಂದು ನುಡಿಯಲೊಡಮಿಂದಗಿ ವಿಷ ತರು ಪ್ರಸವದಂತೆ ದಂತಕಾಂತಿ ಪಸರಿಸೆ ವಿಭೀಷಣ ಸುಭಾಷಿತ ದೂಷಣ ಪರನಿಂತೆಂದಂಮ| ವನಿತಾರತ್ನಮಯತ್ನ ಸಾಧ್ಯ ಮೆನೆ ಕೈಸಾರ್ದತ್ತು ಸೈಪಿಂದದಂ । ಮನುಜ೦ಗೀವುದು ಮಂತ್ರಮೂಾಯದೊಡಪಾಯಂ ಸಾರ್ಗುಮೆಂಬೀನಯಂ ॥ ಮನದೊಳ ಮಚ್ಚರಿಸಂಗೆ ತೋರ್ಕುಮು೦ದ೦ಗೇಂ ತೋರ್ಕುಮೇ ಯುದ್ದ ಸಾ | ಧನೆ ವಿದ್ಯಾಧರ ಸಿದ್ಧ ಕಿನ್ನರ ಚಮೂ ವಿದ್ರಾವಣಂ ರಾವಣಂ || ೬೩ || 1. ನೇರ್ಪಟ್ಟು, ಗ, ಫ, 2, ಶಿರ೮, ಚ,
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.