ಈ ಪುಟವನ್ನು ಪ್ರಕಟಿಸಲಾಗಿದೆ



ಪ೦ಪ ರಾಮಾಯಣದ ಕಥೆ
31

ಹೊರಟು ಅಯೋಧ್ಯೆಯನ್ನು ಸೇರಿ ಉತ್ಸಲನೇತ್ರೆಯನ್ನು ಮದುವೆಮಾಡಿಕೊಂಡು ವಿದ್ಯಾಧರಲೋಕವನ್ನು ಸಹಸ್ರಲೋಚನನಿಗೆ ಕೊಟ್ಟನು. ಸಹಸ್ರಲೋಚನನು ತನ್ನ ತಂದೆಯನ್ನು ಕೊಂದವನನ್ನು ಕೊಂದಲ್ಲದೆ ಬಿಡೆನೆಂದು ದೊಡ್ಡ ಸೈನ್ಯದೊಡನೆ ಬಂದು ರಥನೂ ಪುರಚಕ್ರವಾಳ ಪುರವನ್ನು ಮುತ್ತಲು ಪೂರ್ಣಘನನು ಹೆದರಿ ಮಗನಾದ ತೋಯದವಾಹನನನ್ನು ತನ್ನ ವಿದ್ಯೆಯಿಂದ ಹಂಸವನ್ನಾಗಿ ಮಾಡಿ ಕಳುಹಿಸಿ ತಾನು ಮಹಾಯುದ್ಧವನ್ನು ಮಾಡಿ ಸತ್ತನು. ಸಹಸ್ತಲೋಚನನು ತೋಯದವಾಹನನನ್ನು, ತೆಕ್ಕೆ ಹಾಕಿಕೊಂಡಿದ್ದ ಹಾವಿನಂತೆ, ಅಟ್ಟಿಕೊಂಡು ಬಂದು, ಇಬ್ಬರೂ ಅಜಿತಭಟ್ಟಾರಕರ ಸಮವಸರಣ ಭೂಮಿಯನ್ನು ಸೇರಲು, ಅವರಿಗಿದ್ದ ವೈರವು ನಾಶ ಹೊಂದಿತು. ಆಗ ಸಹಸ್ರಲೋಚನನು ಗಣಧರರನ್ನು ಕುರಿತು ತನ್ನ ತಂದೆಗೂ ತೋಯದವಾಹನನ ತಂದೆಗೂ ಹುಟ್ಟಿದ ವೈರವು ಈ ಜನ್ಮದೋ ಹಿಂದಣ ಜನ್ಮದೋ ತಿಳಿಸಬೇಕೆಂದು ಬೇಡಿಕೊಳ್ಳಲು ಅಜಿತ ಭಟ್ಟಾರಕರು ಹಿಂದಣ ಜನ್ಮಗಳ ಕಥೆಯನ್ನು ಸವಿಸ್ತಾರವಾಗಿ ಹೇಳಿದರು. ತರುವಾಯ ಅಲ್ಲಿಯೇ ಇದ್ದ ಸಗರನು ತನಗೆ ಸಹಸ್ರಲೋಚನನಲ್ಲುಂಟಾದ ಒಲವಿಗೆ ಕಾರಣವನ್ನು ಕೇಳಿ ತಿಳಿದುಕೊಂಡನು.
ಈ ಕಥೆಯನ್ನು ಜಿನಮುಖದಿಂದ ಕೇಳುತ್ತಿದ್ದ ಭೀಮನೆಂಬ ರಾಕ್ಷಸನು ತಾನು ತೋಯದವಾಹನನ ಪೂರ್ವಜನ್ಮದ ತ೦ದೆಯೆಂದರಿತು ಪ್ರೇಮ ಹುಟ್ಟಲು, ವಿಜಯಾರ್ಧನಗದಲ್ಲಿ ಹಗೆಗಳ ಮಧ್ಯದಲ್ಲಿದ್ದರೆ ಅವನಿಗೆ ಕೇಡುಂಟಾಗುವುದೆಂದು ಅವನೊಡನೆ ಹೇಳಿ ದಕ್ಷಿಣ ಸಮುದ್ರದಲ್ಲಿ ಏಳುನೂರು ಯೋಜನ ವಿಸ್ತೀರ್ಣವುಳ್ಳ ಅತಿ ರಮಣೀಯವಾದ ರಾಕ್ಷಸದ್ವೀಪದ ನಡುವೆ ಏಳು ಕನಕ ಪ್ರಾಕಾರಗಳುಳ್ಳ ತ್ರಿಕೂಟಾಚಲದ ಶಿಖರದಲ್ಲಿ ಮುನ್ನೂರು ಯೋಜನ ವಿಸ್ತೀರ್ಣವುಳ್ಳ ನಿರಾತಂಕವಾದ ಲಂಕೆಯಲ್ಲಿ ಸುಖವಾಗಿ ರಾಜ್ಯಭಾರ ಮಾಡೆಂದು ಪೂರ್ವಜನ್ಮದ ಸ್ನೇಹದಿಂದ ತೋಯದವಾಹನನನ್ನು ತನ್ನ ಪಟ್ಟಣಕ್ಕೆ ಕರೆದುಕೊಂಡು ಹೋಗಿ ರಾಜ್ಯಾಭಿಷೇಕ ಮಾಡಿ ಪಟ್ಟವನ್ನು ಕಟ್ಟಿ ರಾಕ್ಷಸವಿದ್ಯೆ ಮೊದಲಾದ ಹಲವು ವಿದ್ಯೆಗಳನ್ನೂ ನವಮುಖಾಭರಣ ಮೊದಲಾದ ಅನೆಕ ದಿವ್ಯಾಭರಣಗಳನ್ನೂ ನವನಿಧಿವೆರಸು ಪಾತಾಳಲಂಕೆಯನ್ನೂ ಕೊಟ್ಟು ಅವನಿಗೆ ರಾಕ್ಷಸಕುಲವೇ ಕುಲವಾಗುವುದೆಂದು ನಿಯಮಿಸಿ ತನ್ನ ಪರಿವಾರದೊಡನೆ ದ್ವೀಪಾಂತರಕ್ಕೆ ಹೋದನು.
ತೋಯದವಾಹನನು ವಿಜಯಾರ್ಧದ ಕಿನ್ನರ ಪುರವನ್ನಾಳುವ ರತಿಮಯ ಖನ ಮಗಳನ್ನು ಮದುವೆಮಾಡಿಕೊಂಡು ರಾಜ್ಯಭಾರ ಮಾಡುತ್ತ ಕೆಲವು ಕಾಲದ ಮೇಲೆ ವೈರಾಗ್ಯ ಪರನಾಗಿ ತನ್ನ ಹಿರಿಯ ಮಗನಾದ ಮಹಾರಾಕ್ಷಸನಿಗೆ ರಾಜ್ಯ ನನ್ನೊಪ್ಪಿಸಿ ದೀಕ್ಷೆಗೊಂಡು ಮೋಕ್ಷಕ್ಕೆ ಹೋದನು. ಮಹಾರಾಕ್ಷಸನು ವಿಭವದಲ್ಲಿ