ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೧ ಪುರಕ್ಕೆ ಮಾರಿಗುತ್ತಂ ಮೊದಲಾಗೆ ಪೆಜವುಮಾಗಂತುಕ ಪೀಡೆಗಳಪ್ಪುದುಮಾನ ವರ್ಕನುಂಗೆಯ್ಯಲಯದುಮ್ಮಳಿಸುತ್ತಿರ್ಪುದು ಆ ವ್ಯತಿಕರಮನೆಮ್ಮ ಮಾವಂ ದ್ರೋಣ ಮೇಘ೦ ಕೇಳು ಬಂದಾ ಗಂಧೋದಕಮಂ ತಳಿದು ಕಂ|| ಪುರಮಂ ದೇಶಮುಮಂ ವ್ಯಾ ಧಿ ರಹಿತಮಪ್ಪಂತು ಮಾಟ್ಟುದುಂ ಪಿರಿದಪ್ಪ ! ಚರಿ ತನ್ನ ಚಿತ್ತದೊಳ್ ಸೆ | ರ್ಚಿರೆ ಭರದಿಂ ದ್ರೋಣಮೇಘನಂ ಬೆಸಗೊಂಡಂ || ೫೦ || ಅಂತು ಬೆಸಗೊಳ್ಳುದುಂ ದ್ರೋಣಮೇಘನಿಂತೆಂದಂಕಂ| ಪಲವುಂ ವ್ಯಾಧಿಗಳಿ೦ ಮ ತುಲವಧು ನವೆಯುತ್ತು ಮಿರ್ದು ಬಸಿರಾಗಲೊಡಂ || ತೊಲಗೆ 'ರುಜೆ ಹೃದಯ ಶಲ್ಯ ಲಲನಾರತ್ನಮನದೊಂದು ಕೂಸಂ ಪೆತ್ತಲ್ || ೫೧ || ಆ ಕೂಸಿಂಗದು ಕಾರಣದಿಂ ವಿಶಲ್ಯ ಸೌಂದರಿಯೆಂಬ ಪೆಸರಾದುದಾಕೆಯ ಮಜ್ಜನ ಜಲದಿಂದೆಮ್ಮ ನಾಡುಂ ಬೀಡುಂ ವ್ಯಾಧಿರಹಿತವಾದುದೆಂಬಿದಂ ದ್ರೋಣ ಮೇಘಂ ಪೇಟ್ಟಿ ನೆಂದು ಭರತಂ ಪೇಳ್ವುದುಂಕಂ|| ಎನಗಧಿಕಮಾಗೆ ಕೌತುಕ ಮಿನಿತತಿಶಯವಾಕೆಗಾದ ಕಾರಣಮಂ ಪೇ || ಅರೆನಗೆಂದು ಮತ್ತೆ ಯುಂ ಭರ ತನನಾಂ ಬೆಸಗೊಂಡೆನಪರಿಮಿತ ಸುಚರಿತನಂ || ೫೨ || ಬೆಸಗೊಳ್ಳುದುಂ ಭರತನಿಂತೆಂದನೀ ಪೂಶ್ವವಿದೇಹದ ಪುಂಡರೀಕಿಣೀಪುರಮ ನಾಲ್ವಂ ತ್ರಿಭುವನಾನಂದ ಚಕ್ರವರ್ತಿಯೆಂಬನಾತನ ಮಗಳನಂಗಶರೆಯೆಂಬಲ್ ತಿರುವಿಂ ಬರ್ದ೦ಕಿದನಂಗನರಲಂಬಿನಂತೆ ಕೇಳೀವನದೊಳಗೆ ಸುರಿಯುತ್ತಿರ್ಪುದು ಮಾ ಸಮಯದೊಳ್ ಪುಷ್ಕಲಾವತೀವಿಷಯದ ವಿಜಯಾರ್ಧಗಿರಿಯ ಪ್ರತಿಷ್ಠಾ ಪುರಮನಾಳ್ವಂ ಪುನರ್ವಸುವೆಂಬ ವಿದ್ಯಾಧರನಾಕೆಯಂ ಕಂಡು ಮದನಶರ ಶಲಾಕಾ ಕೀಲಿತ ಹೃದಯನಾಗಿ ವಿಮಾನದೊಳಿಟ್ಟು ನಭಕ್ಕೆ ನೆಗೆದು ಪೋಪುದುಂ ತ್ರಿಭುವ ನಾನಂದಚಕ್ರವರ್ತಿ ಕೋಪವಶ ವರ್ತಿಯಾಗಿ ಪಲರುಂ ವಿದ್ಯಾಧರ ಪ್ರಮುಖರ ನಾತನ ಮೇಲೆತ್ತವೇ ದುಮವರೊಳ್ ಪುನರ್ವಸು ಕಾದಿ ಬಸವಳಿದನಂಗಶರೆ ಯಂ ಪರ್ಣಲಘು ವಿದ್ಯೆಯಿಂ ನೆಲಕ್ಕಿ ಪುವಂತು ಮಾಡಿ ಪೋಪುದು 1: ರುಜಾ ಹೃಚ್ಛಲ್ಯ೦, ೩. . • ಚ.