ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೪ ರಾಮಚಂದ್ರಚರಿತಪುರಾಣಂ ಕಂ || ಆಶೀರ್ನಿನಾದನಾಶಾ ದೇಶಮನೆಯ್ಲಿ ದುದು ಮಂಗಲಾನಕ ರವಮಾ || ಕಾಶಮನಡರ್ದುದು ಮೂರ್ಛಾ ಕೇಶಂ ಲಕ್ಷ್ಮೀಧರಂಗೆ ಪೆಜಿಪಿಂಗಲೊಡಂ | ೭೨ 1. ನಾರಾಯಣನಂ ಮಣಿಮಯ ನೀರಾಜನ ದೀಪಮಾಲೆ ಬಳಸಿದುವಾಗ೪ || ಮೇರುವನೊಲ್ಲದೆ ಪಲವುಂ ತಾರಾವಳಿ ಬಳಸುವಂತೆ ನೀಲಾಚಲಮಂ || ೭೩ || ಆ ಸಮಯದೊಳ್ ಲಕ್ಷ್ಮಣನ ಸಮಕ್ಷದೊಳಿರ್ದ ವಿಶಲ್ಯ ಸೌಂದರಿ ಕಂ || ಅಪಹರಿಸಿ ಶಕ್ತಿ ಭಾಧೆಯ ನುಪಕಾರವನುಂಟುಮಾಡಿ ಲಕ್ಷಣನೊಳ್ ಪೀ || ನ ಪಯೋಧರೆ ಕಡು ಗಾಡಿಯೊ ಇಪಕಾರಮನತನು ಬಾಧೆಯಂ ಪುಟ್ಟಿಸಿದ 11 ೭೪ || ಆಗಳಾ ಕನ್ಯಾರತ್ನಂಬೆರಸು ತಮ್ಮ ತಂದನೂರ್ವಕ್ರನ್ನೆಯರುಮಂ ಮರು ನಂದನಾದಿಗಳ ವಿವಾಹವಿಧಿಯಿಂ ಕೈಕೊಳ್ವುದೆನೆ ರಾವಣ ವಿಜಯಾನಂತರ ಸಕಲ ಭುವನಾಂಬಿಕೆಯಂ ಸೀತಾದೇವಿಯಂ ತಂದು ರಾಮಸ್ವಾಮಿಗೊಪ್ಪಿಸಿದೆ ಡಲ್ಲದೆ ಮದುವೆನಿಲ್ಲೆನೆನೆ ತಮ್ಮ ಪೋದ ಬಂದ ವೃತ್ತಾಂತಮುಮಂ ವಿಶಲ್ಯ ಸೌಂದರಿ ಯಂ ತಂದ ತನುಮಂ ತಿಳಿಸಿ ನಿಮ್ಮ ಪುಣ್ಯ ಪ್ರಭಾವಕ್ಕಿದಾವ ಗಹನಮೆಂದೊಡಂ ಬಡಿಸೆ ಶುಭ ಮುಹೂರ್ತದೊಳ್ ಲಕ್ಷ್ಮಣನನಿಬರುಮಂ ಮದುವೆನಿಲ್ವು ದುಮಿತ್ತಲ್ 11 ೭೫ || ಕಂ ॥1 ಚರನಆಸೆ ತಮಗೆ ದಶಕ೦ ಧರನ ಮೃಗಾ೦ಕಾದಿ ಮಂತ್ರಿ ಮುಖ್ಯ ಲಕ್ಷ್ಮೀ || ಧರ ಪುಣ್ಯಶಕ್ತಿಯಂ ದಶ ಶಿರಂಗದಂ ಪೇಳಲೆಂದು ಬೇಗಂ ಬಂದರ್‌ ಅಂತು ಬಂದು ಸಮುಚಿತಾಸನದೊಳ್ ಕುಳ್ಳಿರ್ದು ಎ.ಕುಳಿತಾಂಜಲಿಗ ಳಾಗಿ ಕಂ|| ಇರುಳೊಳೆ ವಿಶಲ್ಯ ಸೌಂದರಿ' ಬರೆ ಶಕ್ತಿ ಪೊಡರ್ಪುಗೆಟ್ಟು ಪೋದುದು ತಪ್ಪು೦ ||