ಚತುರ್ದಶಾಶ್ವಾಸಂ ೪೨೭ ಚ || ಭುಜ ಬಲಮಂ ಪವಡಿಪೊಡಪ್ರತಿಮಂ ತವಿಲಿಲ್ಲ ದಾನವ | ಧ್ವಜಿನಿಗೆ ಚಂದ್ರಹಾಸಮನಿದಿರ್ಚುನ ಚಕ್ರಮನಾ೦ಕೆಗೊಳ್ಳ ಭೂ ! ಭುಜ ಸುರ ಖೇಚರ ಪ್ರಮುಖರಿಲ್ಲೆನೆ ರಾಘವದೇವ ದುರ್ಜಯಂ | ನಿಜದೊಳೆ ಮತ್ತೆ ಸಾಧಿಸಿದನಂ ಬಹುರೂಪಿಣಿಯಂ ದಶಾನನಂ 1 ೮೫ || ಕಂ || ರಾವಣನೋರ್ವನುಮಂ ಧರ ಜೀವಲ್ಲಭ ಗೆಲ್ವು ದರಿದು ಸಾಧಿಸಿ ವಿದ್ಯಾ || ದೇವತೆಯನವಂ ಪಡೆವಂ ರಾವಣ ಕೋಟಿಯನಿದಿರ್ಚುವವರಾರ್ ಬಜಯಂ | ೮೬ || ಅದ೪೦ ವಿದ್ಯಾ ಸಾಧನೆವುಗದ ಮುನ್ನಂ ರಾವಣಂಗುಪಸರ್ಗಮನೊಡರ್ಚಿ ಲಂಕಾಪುರಮಂ ಕೈಕೊಳ್ಳಲಿ ದವಸರಮೆನೆ ರಘುವೀರನಿಂತೆಂದಂ ಚ | ವನಿತೆಗೆ ಕೈದುನಂ ಬಿಸುಟವ೦ಗಿದಿರಾಗದವಂಗೆ ಭೂಭುಜಂ || ಮುನಿವುದು ಪಾಲಿಯಲು ನಿಯಮ ಸ್ಥಿತನಾಗಿ ದಶಾನನಂ ಜಿನೇಂ || ದ್ರನ ಮಆಲೆವೊಕ್ಕು ಸಾಧಿಸಿದನಂ ಗಡ ವಿದ್ಯೆಯನೆಂತೊ ಬಾಧೆಯಂ ! ಜನಿಯಿ ಪುದಾತನೊಳ್ ಬಿಸುಡತಕ್ಕುದನಿಂತುಸಿರಲ್ಕೆ ತಕ್ಕುದೇ !! ೮೭ ೪ ಎನೆ ವಿಭೀಷಣಾ೦ಗದಾದಿಗಳೀ ಮಹಾಸತ್ವನಪ್ಪ ರಘುವೀರನನಾಚಾರಮ ನೆಂತು ಮೊಲ್ವನಲ್ಲನದುಕಾರಣದಿನಧಿರಾಜನ ಆಶಯದಂತು ವಿದ್ಯಾ ಸಾಧನೆಗೆ ನಿಮ್ಮ ಮಾಚ್ಛಿ ಮೆಂದು 'ನಂದೀಶ್ವರಮಂ ಕಲಸಿ ವಿಭೀಷಣಂಬೆರಸು ಕಂ | ಮಕರಧ್ವಜ ಮುಖ್ಯರ್ ಖಚ ರ ಕುಮಾರರ್ ಗಗನ ಮಾರ್ಗದಿಂ ಬಂದು ಬಲಾ | ಧಿಕರಸಮ ಸೈನಿಕರ್ ಮಸ ಗಿ ಕಪಿಧ್ವಜರುಜದೆ ಲಂಕೆಯಂ ಪುಗುತಂದರ್ | ೮೮ 8. ಒಡೆಯುತ್ತುಂ ಮಾಡಂಗಳ ನುಡಿಯುತ್ತು೦ ನಂದನಂಗಳಂ ನೀರ್ನೆಲನಂ ! ಕಿಡಿಸುತ್ತುಂ ಲಂಕೆಗವರ್ ಪಡೆದ ನಿಶ್ಯ೦ಕರಳವಿಗಲಿದೆರ್ದೆವಲ೦ || ೮೯ ೧ 1, ನಂದೀಶ್ವರನಂ, ಗ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.