೪೫೦ ರಾಮಚಂದ್ರ ಚರಿತಪುರಾಣ ೦ ವೇಗೆಯುಂ ರತಿಕಾಂತೆಯುಮಂದಿವರ್ ಮೊದಲಾಗೆ 'ನಾಲ್ವತ್ತೆಣಾಸಿರಮಂತಃ ಪುರ ಪುರಂಧಿಯರ್ ಬೇಗಂ ಬ೦ದಾತನ ಕಳೇಬರಮಂ ಕಂಡು ತಾಳ್ಮೆಸಿ ಕೊಂಡು ಮೂರ್ಛವೋಗಿ ನೀಡಲಿಂದೆಲ್ಲಿತ್ತು ವಿಷಾದ ವ ಗಾಜ್ಯಾಹುತಿಗಳಾಗಿ ಕಂ | ನಿನ್ನಂತವುರದ ಕಾಂತೆಯ ರನ್ನೊಡದೆ ನುಡಿಯದೆಂಬುಕೆಯ್ಯದೆ ಪದೆಪಿ೦ || ಮನ್ನಿಸದೆ ಮುಳಿದ ತೆಆದಿಂ , ನಿನ್ನಿರ್ದಿರವಾವ ಕಾರಣ೦ ಖಚರಪತಿ || ೧೯ ಚ || ಕರಿ ಹರಿ ಹಂಸ ಖಾನ ಮಕರಾದಿ ಮಹಾಧ್ವಜವಾರ ಮುಂದೆ ಪ್ರೇಮ್ | ಪರಿವುವೂ ನಿನ್ನ ಬೆಳ್ಕೊಡೆಯ ತಣ್ಣೆಳಲೊಳ್ ನಿಲಲಾರೊ ಯೋಗ್ಯರಾರ್ ! ಸುರ ನರ ಕಿನ್ನರೋರಗರನಾಳ್ವೆಸಕೆಯ್ಯುವುದಾತ್ತರಿನ್ನದಾರ್ | ಭರತ ವಸುಂಧರಾ ವಲಯಮಂ ಸಂರಕ್ಷಿಸುವರ್ ದಶಾನನಾ || ೧೯೪ || ಉ || ದುರ್ಮತಿ ಧಾತ್ರನಿಂ ನಿನಗೆ ದುಸ್ಥಿತಿ ಸಾರ್ದುದು ನಿನ್ನ ಹೆಂಡಿರಿ | ನಾರ್ಮಧು ಮಾಸದೊಳ್ ನಿಜ ವಿನೋದ ವನಂಗಳ ಪಾದಪಂಗಳೊಳ್ | ಪೆರ್ಮೊಲೆಯೊತ್ತಿನಿಂ ಕುರ ವಕಕ್ಕೆ ವಿಕಾಸನನುಂಟುಮಾರಿ | ನಾರ್ಮಧು ಬಿಂದು ಸೇಕದೊಳೆ ಕೇಸರದೊಳ್ ಪಡೆವರ್ ವಿಕಾಸನಂ 1 ೧೯೫ ! ನ 1 ದಿವಮಂ ನೀಂ ಪುಗೆ ಖೇಚರೇಂದ್ರ ತರಳಾಪಾಂಗ ಪ್ರಭಾ ಪಾತದಿ೦ | ದವರೋಧಾಂಗನೆಯ ರ್ಕಳಾ ತಿಲಕದೊಳ್ ಪೂಗೊಂಚಲಂ ಮಾರಿ | ನವನೀವಲ್ಲಭ ನಿನ್ನ ನಂದನದಶೋಕಾನೋ ಕಹಕ್ಕಾರೊ ಪ | ಇವಮಂ ಪುಟ್ಟಿಸುವ ವಿಲಾಸವತಿಯರ್ ಪಾದ ಪ್ರಹಾರಂಗಳಿ೦ || ೧೯೬ || ಉ ... ಇ೦ ಕಡುಕೆಯ್ದು ದಿಕೃತಿಗಳಳ್ಳುವಿನ ತ್ರಿಜಗದ್ವಿಭೂಷಣ | ಕಂಕುಶಮಿಕ್ಕಿ ದಿಗ್ಗಜಮನೊಡಿಸಲುಂ ವಿಜಯಾರ್ಧ ಶೈಲದಿ೦ 11. ತೆಂಕಣ ಧಾತ್ರಿಯಂ ತನಗೆ ಕಂಕಣದಂತಿರೆ ಕೈಗೆ ಮಾಡಲುಂ | ಲಂಕೆಯನಾಳಲು ನೆಲವ ಖೇಚರ ವಲ್ಲಭನಾರ್ ದಶಾನನಾ || ೧೯೭ || ಕಂ || ಬಾಳಿಯನಂಜಿಸಿ ಭುಜ ಬಲ ಶಾಳಿಯನೋಡಿಸಿ ಸಹಸ್ರ ಬಾಹುವನಿನ್ನಾರ್ || ಬಾಳಮಸೆಯಿಂ ದಶಾನನ ಕೀಟಾಳ್ಳಾಡುವರೊ ನೆಲದೊಳುಳ್ಳರಸುಗಳಂ _ 1 M೯೮ | 1. ಪದಿನಾರ್ ಸಾಸಿರ೦, ಚ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.