ನಿಲ್ಲುವುದೆನ್ನಲು ಆತನು ತಪೋರಾಜ್ಯವನ್ನಲ್ಲದೆ ಇಹರಾಜ್ಯವನ್ನೊಲ್ಲೆನೆಂದು ಹೇಳಿ ಮಗನಾದ ಸುಬಾಹುವಿಗೆ ರಾಜ್ಯವನ್ನಿತ್ತು ತನ್ನ ತಂದೆಯ ಬಳಿ ದೀಕ್ಷೆಗೊ೦ಡನು.
ತರುವಾಯ, ರಾವಣನು ವಿಜಯ ಯಾತ್ರೆ ಹೊರಟು ಸಮಸ್ತ ಭೂಪಾಲಕ ರನ್ನೂ ಜಯಿಸಿ ಕಪ್ಪವನ್ನು ಕೊಳ್ಳುತ್ತ ಧರ್ಮವನ್ನು ಪ್ರತಿ ಪಾಲಿಸುತ್ತ ಬರುತ್ತಿರಲು, ಮರುತ್ತನೆಂಬರಸನು ಜೀವವಧೆ ಮಾಡುವ ಯಜ್ಞವನ್ನು ಮಾಡಿ, ಇತರರಾರನ್ನೂ ನಮಸ್ಕರಿಸದೆ, ಹಲವು ಪ್ರಾಣಿಗಳನ್ನು ಕೊಲ್ಲುತ್ತಿರುವನೆಂದು ಕೇಳಿ ಅಲ್ಲಿಗೆ ಬಂದು ಯಾಗ ನಿಮಿತ್ತವಾಗಿ ಅವನು ಪಶುಗಳನ್ನು ಯೂಪಸ್ತಂಭಗಳಲ್ಲಿ ಕಟ್ಟಿ ಗೋಳಿಡುತ್ತಿರುವುದನ್ನು ಕಂಡು ಯೂಪಸ್ತಂಭಗಳನ್ನು ಕಡಿದು ಕುಂಡಗಳನ್ನೊಡೆದು ಶಾಲೆಗಳನ್ನು ಕೆಡವಿ ಸಂವರ್ತನೇ ಮೊದಲಾದ ಋತ್ವಿಜರನ್ನು ಬಡಿದು ಕೊಲ್ಲ ಲೆ೦ದಿರುವ ಸಮಯದಲ್ಲಿ ಮರುತನು ಅತಿ ಸಂಭ್ರಮದಿಂದ ಬಂದು ರಾವಣನ ಕಾಲಮೇಲೆ ಬಿದ್ದು ಕ್ಷಮೆಯನ್ನು ಬೇಡಿ ತನ್ನ ಮಗಳಾದ ಕನಕಪ್ರಭೆಯನ್ನು ಆತನಿಗೆ ಕೊಟ್ಟು ಮದುವೆ ಮಾಡಿದನು. ರಾವಣನು ಹದಿನೆಂಟು ವರ್ಷಕ್ಕೆ ವಿನೀತಾ ಖಂಡವನ್ನು ಬಾಯ್ಕಳಿಸಿ ಕೈಲಾಸ ಪರ್ವತವನ್ನು ಸೇರಿ ನಾಲಿದೇವರ ಸಾಮರ್ಥ್ಯವನ್ನು ನೆನೆದು ಹೊಗಳುತ್ತ ಆ ಬೆಟ್ಟದ ತಪ್ಪಲಲ್ಲಿ ಬೀಡನ್ನು ಬಿಟ್ಟಿದನು.
ರಾವಣನು ಇಂದ್ರನ ಮೇಲೆ ದಂಡೆತ್ತಿ ಬರುವ ವಿಷಯವನ್ನು ನಳಕೂಬರ ದಿಕ್ಷತಿಯು ಇಂದ್ರನಿಗೆ ಹೇಳಿ ಕಳುಹಿಸಲು ಆತನು ತನ್ನ ಭುಜಬಲ ಗರ್ವದಿಂದ ದಶಗ್ರೀವನನ್ನು ಲಕ್ಷ್ಯಮಾಡದೆ ರಾವಣನು ಏನು ಮಾಡಿಯಾನೆಂದೂ ಆತನೊಡನೆ ವಿದ್ಯಾವಪ್ಪ೦ಭದಿ೦ದ ಕಾದುವುದೆಂದೂ ನಳಕೂಬರನಿಗೆ ಹೇಳಿ ಕಳುಹಿಸಿದನು ಇದನ್ನು ಕೇಳಿ ನಳಕೂಬರನು ಒಂದು ಯೋಜನಾ೦ತರದಲ್ಲಿರುವವರನ್ನು ನುಂಗುವ ಬೇತಾಳ ಯಂತ್ರಗಳಿಂದಲೂ, ಎಬ್ಬಿಸಿ ತಿನ್ನುವ ಮ ಹೊರಗಗಳಿ೦ದಲೂ, ಅತಿ ದೂರದಲ್ಲಿ ಅಟ್ಟ ಸುಡುವ ಕೇಸುರಿಯ ಪ್ರಾಕಾರಗಳಿ೦ದಲೂ, ನಾನಾ ತೆರದ ಉಪದ್ರವಗಳನ್ನು ಮಾಡುವ ರೌದ್ರ ಮೃಗಗಳಿಂದಲೂ ತುಂಬಿಸಿ ಶತಯೋಜನ ಪರಿಮಿತಿಯುಳ್ಳ ವಜ್ರ ಸಾಲವೆಂಬ ಕೋಟೆಯನ್ನು ಕಟ್ಟಿಸಿ ಆ ಪಟ್ಟಣಕ್ಕೆ ದುರ್ಲಂಘ್ರ ಪುರವೆಂಬ ಹೆಸರನ್ನು ಅನ್ವರ್ಥವಾಗಿ ಮಾಡಿದನು. ದಶವದನನ ಸೇನಾನಾಯಕನಾದ ಪ್ರಹಸ್ತನು ಇದನ್ನು ತಿಳಿದು ಬಂದು, ಆ ಯಂತ್ರಗಳಿಂದ ತಮ್ಮ ಸೇನೆಗೆ ಉಪದ್ರವವಾಗದಂತೆ ದೂರದಲ್ಲಿರಬೇಕೆಂದೂ ಬಳಿಕ ಅದನ್ನು ತೆಗೆದು ಕೊಳ್ಳುವ ಉಪಾಯವನ್ನು ಆಲೋಚನೆ ಮಾಡತಕ್ಕದ್ದೆಂದೂ ರಾವಣನಿಗೆ ಅರಿಕೆ ಮಾಡಲು ರಾವಣನು ಉಪಾಯವೇನೆಂದು ಆಲೋಚಿಸುತ್ತಿದ್ದನು.
ಹೀಗಿರುವಲ್ಲಿ ನಳಕೂಬರನ ಹೆಂಡತಿಯಾದ ಉಸರಂಭೆಯು ಬಹುಕಾಲ ದಿಂದ ರಾವಣನಲ್ಲಿ ಕಾಮಾತುರೆಯಾಗಿ ತನ್ನ ದೂತಿಯನ್ನು ರಾವಣನ ಬಳಿಗೆ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬
ಈ ಪುಟವನ್ನು ಪ್ರಕಟಿಸಲಾಗಿದೆ
40
ಪ೦ಪರಾಮಾಯಣದ ಕಥೆ