ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೨ ರಾಮಚಂದ್ರಚರಿತಪುರಾಣಂ ಶ್ರೀಧರಂ ರೂಪವತಿಗೆ ಪೃಥ್ವಿತಿಲಕಂ ವನಮಾಲೆಗರ್ಜುನಂ ಕಲ್ಯಾಣಮಾಲೆಗೆ ಮಂಗಲಂ ರತಿಮಾಲೆಗೆ ಶ್ರೀಕೇಳಿ ಜಿತಪಿಗೆ ವಿಮಲಪ್ರಭಂ ಅಭಯಮತಿಗೆ ಸತ್ಯ ಕೀರ್ತಿ ಮನೋರಮೆಗೆ ಸುಪಾರ್ಶ್ವನೆಂಬ ಮಕ್ಕಳಾದರಿಂತರ್ಧ ಚಕ್ರವರ್ತಿಯ ಮಕ್ಕಳೆರುಮನುದಿನ ಪ್ರವರ್ಧಮಾನ ಮನೋಹರಾಕಾರರಾಗಿ ಬಳೆಯುತ್ತು ಮಿರೆ ಮತ್ತೊಂದು ದಿವಸಂ ಕಂ | ಜನಕಸುತೆ ನಾಲ್ಕು ನೀರ್ ಮಿಂ ದು ನಾಡೆ ಬೆಳ್ಳಸದನಂ ವಿರಾಜಿಸೆ ಕಾಂಚೀ || ನಿನದಂ ಕೈಮಿಗೆ ಲಕ್ಷ್ಮಿ ವನಿತೆಯವೋಲ್‌ ಸೆಜ್ಜೆ ಮನೆಗೆ ಬಿಜಯಂಗೆಯ್ದ ೪ ಅ೦ತು ಸೂಟ್ಟೆವಂದು ನಿಶಾವಸಾನ ಸಮಯದೊಳ್ ಕಂ|| ಶರಭ ದ್ವಿತಯಂ ನಿಜ ಮುಖ ಸರೋಜಮಂ ಬಂದು ಪುಗುವುದಂ ಪುಷ್ಪಕದಿಂ || ಧರಣಿಗೆ ಬೀರ್ಪುದನಾ ಹರಿಣೇಕ್ಷಣೆ ಸೀತೆ ಕಂಡಳೆರಡಂ ಕನಸ೦ | ೬೩ || || ೬೨ || ಅ೦ತು ಕಂಡ ಸ್ವಪ್ನಂಗಳಂ ರಾಮಸ್ವಾಮಿಗಜಿಪುವುದುಂಕಂ|| ಅಮಿತ ಪರಾಕ್ರಮರಿವರೆನಿ ಸ ಮಕ್ಕಳಂ ಪಡೆವೆ ಶರಭಯುಗ ದರ್ಶನದಿಂ || ಕಮಲಾನನ ಮತ್ತಿನ ಕನ ಸು ಮನೋಹರಮಲ್ಲು ಖೇದಮಂ ಪುಟ್ಟಿ ಸುಗುಂ | || ೬೪ || ಎಂದು ಕನಸಿನ ಫಲಮಂ ಪೇಜ್ ರ್ವರುಮೇವಯಿಸುತ್ತು ಮಿರೆ ಕೆಲವು ದಿವಸಕ್ಕೆ ಸೀತೆಗೆ ಗರ್ಭಚಿಹ್ನಂಗಳ್ ತೋಜಿದುವಾ ಮಹಾನುಭಾವೆಗೆ ಜಿನ ಪೂಜೋತ್ಸವ ಮ೦ಮಾ ಬಯಕೆ ಸಮನಿಸೆ ಜಿನಮಹಾಮಹಮಂ ಮಹೇಂದ್ರೋದ್ಯಾನದ ಜಿನಾಲಯಂಗಳೊಳೆಲ್ಲವನುದಿನಂ ಮಾಡುತ್ತು ಮಿರಲೊಂದು ದಿವಸಂ ಕಂ|| ಕಟ್ಟಿದುದಂ ಕಳೆವವರಾರ್ ನೆಟ್ಟನೆ ಸತ್ಪಥದೊಳೆಸಗೆಯುಂ ಬೇವಸಮೆ | ಬೃಟ್ಟುವುದಂ ಸೂಚಿಪವೋಲ್ ಪುಟ್ಟಿದುದಾ ಸತಿಗೆ ದಕ್ಷಿಣಾಕ್ಷಿ ಸ್ಪಂದಂ | ೬೫ ||