ಇದನ್ನು ಕೇಳಿ ಲಕ್ಷ್ಮಣನು ನಿರ್ವಾಣ ಶೈಲವನ್ನೆತ್ತುವುದು ತನಗೆ ಕಷ್ಟ ಎಲ್ಲೆಂದು ಹೇಳಲು ಜಾಂಬೂನದ ಸುಗ್ರೀವ ಮೊದಲಾದವರು ರಾಮಲಕ್ಷ್ಮಣರನ್ನು ವಿಮಾನ ವನ್ನೇರಿಸಿಕೊಂಡು ಗಗನ ಮಾರ್ಗದಲ್ಲಿ ಹೋಗಿ ನಿರ್ವಾಣ ನಗವನ್ನು ಸೇರಿದರು. ಲಕ್ಷಣನು ಸಿದ್ದಗುಣ ಸ್ತವನವನ್ನು ಮಾಡಿ ಸಿದ್ಧಶೈಲವನ್ನು ಕಿತ್ತು ಬಲ ಭುಜದ ಮೇಲೆ ಹೊತ್ತು ಎತ್ತಿದನು. ಆಗ ದೇವದುಂದುಭಿ ಮೊಳಗಿತು, ಹೂಮಳೆ ಕರೆಯಿತು. ಇದನ್ನು ನೋಡಿ ವಾನರಚಿಹ್ನರು ಆಶ್ಚರ ಪಟ್ಟು ರಾಮಲಕ್ಷ್ಮಣರನ್ನು ಪೂಜಿಸಿ ಎಲ್ಲರೂ ಹೊರಟು ಕಿಷ್ಕಂಧಪುರವನ್ನು ಸೇರಿದರು.
ಮರು ದಿನ ರಾಮದೇವನು ಸುಗ್ರೀವ ಮೊದಲಾದವರೊಡನೆ, ಲಂಕೆಗೆ ದಂಡೆತ್ತಿ ಕೂಡಲೆ ಹೊರಡಬೇಕೆಂದು ತಿಳಿಸಲು, ಶುದ್ಧಾಚಾರನಾಗಿಯೂ ವಿಚಾರ ಪರನಾಗಿಯೂ ಇರುವ ವಿಭೀಷಣನು ರಾವಣನಿಗೆ ಬುದ್ದಿವಾದವನ್ನು ಹೇಳಿ ಸೀತೆಯನ್ನು ರಾಮನಿಗೆ ಒಪ್ಪಿಸುವಂತೆ ಮಾಡಲು ಸಮರ್ಥನಾದುದರಿಂದ ಆತನ ಬಳಿಗೆ ದೂತರನ್ನು ಬೇಗನೆ ಕಳುಹಿಸುವುದುಚಿತವೆಂದು ಜಾ೦ಬವನು ಹೇಳಿದನು. ಇದಕ್ಕೆ ಮಹೋದಧಿಯು “ ಅಯ್ಯಾ ! ಲಂಕಾಪುರಕ್ಕೆ ವಿದ್ಯಾ ಪ್ರಾಕಾರವನ್ನು ಕಟ್ಟಿರುವುದರಿಂದ ಅದನ್ನು ಹೋಗಲು ಇಲ್ಲಿಯ ವಿದ್ಯಾಧರರಾರೂ ಸಮರ್ಥರಲ್ಲ; ಆದರೆ ಅಜೇಯ ಬಲನಾದ ಆಂಜನೇಯನೊಬ್ಬನು ಮಾತ್ರ ಸಮರ್ಥನಿರುವನು; ಆತನು ಲಂಕೆಗೆ ಹೋಗಿ ದೇವಿಯನ್ನು ಬಿಡಿಸಿಕೊಂಡು ತರಲು ಶಕ್ತನು, ಇತರರಾರಿಗೂ ಈ ಕೆಲಸವು ಸಾಧ್ಯವಲ್ಲ” ಎಂದು ಹೇಳಲು ಸುಗ್ರೀವನು ಹನುಮನಲ್ಲಿಗೆ ದೂತನನ್ನಟ್ಟಿ ಅವನನ್ನು ಕರೆಯಿಸಿದನು. ಅ೦ಜನಾಸುತನು ದೂತರಿಂದ ರಾಮಲಕ್ಷ್ಮಣರ ಪರಾಕ್ರಮವನ್ನರಿತು ತನ್ನಿಂದಲೂ ಸಾಧ್ಯವಾಗದ ಮಾಯಾ ಸುಗ್ರೀವನನ್ನು ಅವರು ಕೊಂದು ಉಪಕಾರಮಾಡಿದುದಕ್ಕಾಗಿ ತಾನು ರಾಮಲಕ್ಷ್ಮಣರ ಸೇವಕನಾಗಿರುವೆನೆಂದು ನಿಶ್ಚಯಿಸಿ ಅವರನ್ನು ಭಕ್ತಿಯಿಂದ ನಮಸ್ಕರಿಸಲು ರಾಮನು ಅವನ ಧೀರಪ್ರಕೃತಿಗೂ ನಯವಿನಯಗಳಿಗೂ ಮೆಚ್ಚಿ ಅವನಿಗೆ ರತ್ನ ಕರ್ಣಕುಂಡಲಗಳನ್ನು ಮೆಚ್ಚುಗೊಟ್ಟನು.
ಮರುತ್ತನಯನು ತಾನು ನಯದಿಂದಾಗಲಿ ಭಯದಿ೦ದಾಗಲಿ ಸೀತಾದೇವಿಯನ್ನು ತರುವೆನೆಂದೂ, ಅಲ್ಲದೆ ನೋಡಿಬರುವುದೆಂದು ಮಾತ್ರ ಹೇಳಿದರೆ ಮಾಯಾರೂಪದಿಂದ ಹೋಗಿ ಆಕೆಯ ಸುದ್ದಿಯನ್ನು ಕೊಂಡುಬರುವೆನೆಂದೂ, ರಾವಣನನ್ನು ಕೊಂದು ದೇವಿಯನ್ನು ತರುವುದು ತನಗ ಸಾಧ್ಯವಲ್ಲೆಂದೂ ತಿಳಿಸಲು ರಾಮನು ಜನಕಜೆಯ ಸುದ್ದಿಯನ್ನು ತರುವ ಕೆಲಸವು ಆ೦ಜನೇಯನ ದೆಂದೂ ದಶಮುಖನನ್ನು ಕೊಂದು ' ಸೀತಾದೇವಿಯನ್ನು ತರುವ ಕೆಲಸವು ಲಕ್ಷಣನದೆಂದೂ ನಿಯಮಿಸಿ ಜಾನಕಿಗೆ ತಿಳಿಸುವುದಕ್ಕಾಗಿ ಕೆಲವು ಗುರುತು ಗಳನ್ನು ಅಣುವನಿಗೆ ಹೇಳಿ ಆಕೆಯ ವಿರಹ ಖೇದವನ್ನು ಕಳೆಯುವುದಕ್ಕೋಸ್ಕರ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೦
ಈ ಪುಟವನ್ನು ಪ್ರಕಟಿಸಲಾಗಿದೆ
44
ಪ೦ಪರಾಮಾಯಣದ ಕಥೆ