ಈ ಪುಟವನ್ನು ಪ್ರಕಟಿಸಲಾಗಿದೆ
50
ಪ೦ಪರಾಮಾಯಣದ ಕಥೆ

ತಿಳಿದವನಾಗಿ ಅವನ್ನು ರಾಮನಿಗೆ ಹೇಳಿದನು. ಆ೦ಜನೇಯನ ಪ್ರಧಾನ ಮಂತ್ರಿ ಯಾದ ಪೃಥುವತಿಯು ಆ೦ಜನೇಯನು ಲಂಕೆಯಲ್ಲಿ ತೋರಿಸಿದ ಪರಾಕ್ರಮ ವನ್ನು ವಿಸ್ತರಿಸಿ ಹೇಳಲು ಎಲ್ಲರೂ ಆ೦ಜನೇಯನನ್ನು ಹೊಗಳಿದರು. ಲಕ್ಷ್ಮಣನು ಇನ್ನು ತಡವೇತಕ್ಕೆಂದು ಸುಗ್ರೀವನೊಡನೆ ಹೇಳಲು ಆತನು ತನ್ನ ಸೈನ್ಯವು ನಭೋಗಮನ ವಿದ್ಯೆಯಿಂದ ಸಮುದ್ರವನ್ನು ದಾಟುವುದಕ್ಕೆ ಸಾಮರ್ಥ್ಯವುಳ್ಳದ್ದೆಂದು ಹೇಳಿ ಅಜೇಯರಾದ ತನ್ನ ಯೋಧರೊಡನೆ ವಿಜಯ ಪ್ರಯಾಣಕ್ಕೆ ಸಿದ್ದನಾದನು.


ಆಶ್ವಾಸ ೧೨-ಲ೦ಕಾ ದಿಗ್ವಿಜಯ ಪ್ರಯಾಣ

ಶ್ರೀರಾಮನು ಪ್ರಾತಃಕಾಲದಲ್ಲಿ ಜಿನ ಪೂಜೆಯನ್ನು ಮಾಡಿ ಓಲಗ ಸಾಲೆಗೆ ಬಂದು ಸಿಂಹಾಸನವನ್ನಲ೦ಕರಿಸಿ ಕುಳಿತಿರಲು, ಪಕ್ಕದ ಮಣಿಮಯಾಸನದಲ್ಲಿ ಲಕ್ಷಣನೂ, ಸುತ್ತಲೂ ಸುಗ್ರೀವ ಅಂಗದ ನಳ ನೀಲ ಜಾ೦ಬವ ಹನುಮ ಮೊದ ಲಾದ ಖಚರ ಪರಿವೃಢರೂ ಸೇನಾನಾಯಕರೂ ಸಮುಚಿತಾಸನಗಳಲ್ಲಿ ಕುಳಿತು ಕೊಂಡರು. ಆಗ ಪುರೋಹಿತನು ಸ್ವಸ್ತಿಯನ್ನು ಹೇಳಿ ದಿಗ್ವಿಜಯ ಪ್ರಯಾಣ ಲಗ್ನವು ಸವಿಾಪಿಸಿತೆ೦ದು ಬಿನ್ನವಿಸಲು ಸೇನಾಧಿಪತಿಯಾದ ನಳನು ವಿಜಯ ದುಂದುಭಿಯನ್ನು ಹೊಡೆಯಿಸಿದನು. ಆಗ ಕುಲವೃದ್ದರೂ ಕುಲಾಂಗನೆಯರೂ ಆಶೀರ್ವಾದ ಮಾಡಲು ರಾಮಚಂದ್ರನು ಸಿಂಹಾಸನದಿಂದೆದ್ದು ಲಕ್ಷ್ಮಣನೊಡನೆ ಪರಿವಾರ ಸಮೇತನಾಗಿ ಹೊರಟು ಜಯ ಘೋಷವು ದಿಕ್ಕುಗಳನ್ನು ತುಂಬುತ್ತಿರು ವಲ್ಲಿ ರಥವನ್ನೇರಿ ದಕ್ಷಿಣಾಭಿಮುಖವಾಗಿ ನಡೆದನು. ಆಗ ಲಕ್ಷ್ಮಣನು ಸೇನಾ ನಾಯಕರನ್ನು ತಂತಮ್ಮ ಸೈನ್ಯದೊಡನೆ ತಕ್ಕ ಸ್ಥಳಗಳಲ್ಲಿರುವಂತೆ ನಿಯಮಿಸಿ ತಾನೂ ಹನುಮನೂ ರಥಾರೂಢರಾಗಿ ಸಕಲ ವಿದ್ಯಾಧರ ನಾಯಕರೊಡನೆ ದಾಶರಥಿಯ ಎರಡು ಪಕ್ಷಗಳಲ್ಲಿಯ ಮೆಯ್ತಾವಲಾಗಿ ನಡೆದರು. ಹೀಗೆ ನಡೆಯುತ್ತ ಸೇನೆಯು ವೇಲಾಂಧಪುರದ ಸವಿಾಪಕ್ಕೆ ಬರಲು, ಆ ಪುರಾಧಿಪತಿಯಾದ ಸಮುದ್ರ ನೆಂಬ ಹೆಸರುಳ್ಳ ವಿದ್ಯಾಧರನು ಮುಂದೆ ನಡೆಯುತ್ತಿದ್ದ ನಳನ ಸೈನ್ಯವನ್ನಷ್ಟಗಟ್ಟಿ ಯುದ್ದಕ್ಕೆ ನಿಲ್ಲಲು ಅವನನ್ನು ನಳನು ಸೋಲಿಸಿ ರಾಮಚಂದ್ರನಿಗೆ ತ೦ದೊಪ್ಪಿಸಿದನು. ಆತನು ಸಮುದ್ರನಿಗೆ ಅಭಯವನ್ನು ಕೊಟ್ಟು ಮನ್ನಿಸಲು, ಸಮುದ್ರನು ತನ್ನ ನಾಲ್ವರು ಮಕ್ಕಳನ್ನು ಲಕ್ಷ್ಮಣನಿಗೆ ಕೊಟ್ಟು ಮದುವೆ ಮಾಡಿ ನೃತ್ಯ ಪದವಿಯಲ್ಲಿ ನಿಂತು ತನ್ನ ಪೂರ್ವ ಪದವಿಯನ್ನು ಪಡೆದನು. ತರುವಾಯ ಸುವೇಲಾ ಚಲದೊಡೆಯನಾದ ಸುವೇಲನು ರಾಮನಿಗೆ ಶರಣಾಗತನಾದನು. ರಾಮನು ಸೇನಾಸಮೇತನಾಗಿ ಆ ದಿನ ಸುವೇಲಾಚಲ ದಲ್ಲಿದ್ದು ಮರುದಿನ ಲಂಕಾದ್ವೀಪದ ಸಮೀಪದಲ್ಲಿರುವ ಹಂಸದ್ವೀಪದ ಬಳಿಗೆ ಬರುತ್ತಿರುವಲ್ಲಿ ಆ ದ್ವೀಪಾಧಿಪತಿಯಾದ ನಭಶ್ಚರನು ಅಸಂಖ್ಯಾತ ಬಲ ಸಮೇತನಾಗಿ ಮೇಲೆ ಬೀಳಲು ನಳನು ಅವನನ್ನು