ಮಾತಿಗಡ್ಡವಾಗಿ ಬಂದು ಬದುಕುವನೇ ? ಆದರೆ ಗೋತ್ರವಧೆಯು ಸರಿಯಲ್ಲವಾದುದರಿಂದ ವಿಭೀಷಣನನ್ನು ಲಂಕೆಯಿಂದ ಅಟ್ಟಿ ಬಿಡಿರಿ ; ಇವನು ಇಲ್ಲಿದ್ದರೆ ಯುದ್ಧೋತ್ಸಾಹಿಗಳಿಗೆ ಭಯವನ್ನು ಪದೇಶಮಾಡುವನು” ಎಂದು ಹೇಳಿದನು. ಇದನ್ನು ಕೇಳಿ ವಿಭೀಷಣನು ತನ್ನ ಸಾಮಂತರಿಂದೊಡಗೂಡಿ ದೊಡ್ಡ ಸೈನ್ಯ ದೊಡನೆ ಲಂಕೆಯಿಂದ ಹೊರಟು ಹಂಸದ್ವೀಪದ ಸಮಾಸಕ್ಕೆ ಬಂದು ತನ್ನ ಮಹ ತರನನ್ನು ರಾಮನ ಬಳಿಗಟ್ಟಲು ಅವನು ಬಂದು, ರಾವಣನು ಬುದ್ದಿ ವಾದವನ್ನು ಕೇಳದೆ ಹೋದುದರಿಂದ ವಿಭೀಷಣನು ರಾಮನ ಶರಣಹೊಗಲು ಬಂದಿರುವನೆಂದು ತಿಳಿಸಿದನು. ಆಗ ಮತಿಕ್ರಾಂತ ಮೊದಲಾದ ಮಂತ್ರಿಮುಖ್ಯರು ಇದು ಅಣ್ಣ ತಮ್ಮಂದಿರಿಗೆ ಹುಸಿ ಜಗಳವಿರಬಹುದೆಂದೂ ತಮಗೆ ಅಪಾಯವನ್ನುಂಟು ಮಾಡುವುದಕ್ಕಾಗಿ ಈರೀತಿ ಬಂದಿರಬಹುದೆಂದೂ ಹೇಳಲು, " ಅಯಾ ! ನನ್ನೆದುರಿಗೆ ಬರಲು ಅಳುಕಿ ಮೋಸದಿಂದ ಸೀತೆಯನ್ನು ಹೊತ್ತು ಕೊಂಡು ಹೋದ ದಶಕಂಠನಿಗೆ ಹೆದರುವುದೇ ? ಬೇಡಿದವರಿಗೆ ಕೊಡದೆ, ಎದುರುಬಿದ್ದವರನ್ನಿ ಕೈದೆ, ಮರೆಹೊಕ್ಕವರನ್ನು ಕಾಯದೆ ಬಾಳುವ ಅರಸುಮಗನ ಭುಜಬಲವು ನಿರರಕವು, ಅವನ ಪಾರ್ಥಿವ ಜನ್ಮವು ವ್ಯವು” ಎಂದು ರಾಮನು ಉತ್ತರಕೊಟ್ಟನು. ಆಗ ಅ೦ಜನಾಸುತನು ವಿಭೀಷಣನ ಗುಣಸ್ತವನಮಾಡಿ, ಅಣ್ಣತಮ್ಮಂದಿರಿಗಿರುವ ದ್ವೇಷ ವನ್ನು ಜನಪ್ರವಾದದಿಂದ ತಾನರಿತಿರುವೆನೆಂದೂ ವಿಭೀಷಣನು ತನಗೆ ಲಂಕೆ ಯಲ್ಲಿ ಸಹಾಯಮಾಡಿ ಮರ್ಯಾ ದೆಯೊಡನೆ ತನ್ನನ್ನು ಕಳುಹಿಸಿದನೆಂದೂ ಹೇಳಲು ರಾಮನು ಚಾರನನ್ನು ಕರೆಯಿಸಿ ವಿಭೀಷಣನನ್ನು ಬರುವಂತೆ ಹೇಳಿ ಕಳುಹಿಸಿ ದಿವ್ಯ ವಸ್ತ್ರಾಭರಣಗಳೊಡನೆ ಸುಗ್ರೀವಾಂಗದ ಮೊದಲಾದವರನ್ನು ಎದುರುಗೊಳ್ಳುವುದಕ್ಕಾಗಿ ಮುಂದೆ ಕಳುಹಿಸಿದನು. ವಿಭೀಷಣನು ರಾಜಸಭೆ ಯನ್ನು ಹೊಕ್ಕು ರಾಮನಿಗಡ್ಡ ಬೀಳಲು ಆತನನ್ನು ರಾಮನು ತಕ್ಕ ಮರ್ಯಾದೆ ಯೊಡನೆ ಕಂಡು ಉಚಿತ ಸಂಭಾಷಣದಿಂದ ತೃಪ್ತಿ ಪಡಿಸಿ ಬಿಡಾರಕ್ಕೆ ಕಳುಹಿಸಿ ದನು. ಆ ಹೊತ್ತಿಗೆ ಪ್ರಭಾಮಂಡಲನು ಸಹಸ್ರಾಕ್ಷೌಹಿಣೀ ಬಲದೊಡನೆ ಬಂದು ಸೇರಲು ಮರುದಿನ ಎಲ್ಲರೂ ಹೊರಟು ಸಮುದ್ರ ತೀರಕ್ಕೆ ಬಂದರು.
ಆಗ ನಳನು ನಭೋಗಮನ ವಿದ್ಯೆಯೇ ಸೇತುವಾದುದೆಂಬಂತೆ ಚತುರಂಗ ಬಲವನ್ನು ಆಕಾಶದಲ್ಲಿ ನಡೆಯಿಸಿದನು. ಜಾಂಬವ ಸುಷೇಣ ವಿಭೀಷಣ ಚಂದ್ರರ ಸುಗ್ರೀವ ಹನುಮ ಮೊದಲಾದವರ ರತ್ನ ವಿಮಾನಗಳು ರಾಮ ಲಕ್ಷ್ಮಣರ ವಿಮಾನಗಳನ್ನು ಸುತ್ತಿ ಬರಲು ಎಲ್ಲ ಸೈನ್ಯವೂ ಕ್ಷಣಮಾತ್ರದಲ್ಲಿ ಸಮುದ್ರವನ್ನು ದಾಟಿ ದಡದಲ್ಲಿದ್ದ ಒಂದು ವನದಲ್ಲಿಳಿದು ತರುವಾಯ ಲಂಕಾಭಿ ಮುಖವಾಗಿ ಹೊರಟು ರಣಭೂಮಿಯನ್ನು ಸೇರಿತು. ಆಗ ಅವರವರಿಗೆ ತಕ್ಕಂತೆ ಬಿಡಾರಗಳು ಸಿದ್ಧವಾದುವು.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೮
ಈ ಪುಟವನ್ನು ಪ್ರಕಟಿಸಲಾಗಿದೆ
52
ಪ೦ಪರಾಮಾಯಣದ ಕಥೆ