ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

59

ತೊಂದರೆಯನ್ನು ಕೊಟ್ಟರೂ ತಮ್ಮ ಸೈನ್ಯವು ಪ್ರತಿಮಾಡದಂತೆ ಕಟ್ಟು ಮಾಡುವು ದೆಂದು ಮಂಡೋದರಿಗೆ ಹೇಳಿ ತನ್ನರಮನೆಯೊಳಗಣ ಜಿನಮಂದಿರಕ್ಕೆ ಬಂದು ಶಾಂತೀಶ್ವರನನ್ನು ದಿವ್ಯಾರ್ಚನೆಯಿಂದರ್ಚಿಸಿ ಪದ್ಮಾಸನಸ್ಥಿತನಾಗಿ ಸ್ಥಟಿಕಾಕ್ಷ ಮಾಲೆಯನ್ನು ಹಿಡಿದು ದಿವ್ಯ ಮಂತ್ರಗಳನ್ನು ಜಪಿಸುತ್ತಿದ್ದನು. ಆಗ ಉಭಯ ಬಲವೂ ಅಭಯ ಘೋಷಣೆಯನ್ನು ಮಾಡಿ ಯುದ್ಧವನ್ನು ನಿಲ್ಲಿಸಿತು.
ವಿಭೀಷಣನು ರಾವಣನ ವೃತ್ತಾಂತವನ್ನರಿತು ರಾಮನ ಬಳಿಗೆ ಬಂದು ರಾವಣನು ಬಹುರೂಪಿಣೀ ವಿದ್ಯೆಯನ್ನು ಸಾಧಿಸುತ್ತಿರುವನೆಂದೂ ಒಬ್ಬ ರಾವಣ ನನ್ನು ಗೆಲ್ಲುವುದೇ ಅಷ್ಟು ಕಷ್ಟವಾಗಿರುವಲ್ಲಿ ರಾವಣಕೋಟಿಯನ್ನು ಎದುರಿಸಲು ಸಾಧ್ಯವಾಗದೆಂದೂ ಆದಕಾರಣ ಅವನು ವಿದ್ಯೆಯನ್ನು ಸಾಧಿಸುವುದಕ್ಕೆ ಮೊದ ಲೇ ಅವನಿಗೆ ಕೇಡನ್ನು ೦ಟ ಮಾಡಿ ಲಂಕಾಪುರವನ್ನು ಕೈಕೊಳ್ಳುವುದು ಯುಕ್ತ ವೆಂದೂ ಹೇಳಿದನು. ಅದಕ್ಕೆ ರಾಘವನು “ ಆಯಾ ವಿಭೀಷಣನೇ! ವನಿತೆಯ ಮೇಲೆಯೂ, ಆಯುಧವನ್ನು ಬಿಸುಟವನ ಮೇಲೆಯ, ಎದುರಾಗದವನ ಮೇಲೆ ಯ ಪರಾಕ್ರಮವನ್ನು ತೋರಿಸುವುದು ಭೂಪಾಲರಿಗೆ ತಕ್ಕುದಲ್ಲ: ದಶಾನನನು ನಿಯಮಸ್ಟನಾಗಿ ಜಿನೇ೦ದ್ರನ ಮರೆ ಹೊಕ್ಕು ವಿದ್ಯೆಯನ್ನು ಸಾಧಿಸುತ್ತಿರುವಾಗ ಆತನಿಗೆ ಬಾಧೆಯನ್ನುಂಟುಮಾಡುವುದು ನ್ಯಾಯವೇ ? ಇಂತಹ ಅನ್ಯಾಯದ ಮಾತುಗಳನ್ನಾಡಬಹುದೇ ? ” ಎಂದು ಹೇಳಲು, ವಿಭೀಷಣಾ೦ಗದಾದಿಗಳು “ ಮಹಾಸತ್ವನಾದ ರಾಘವನು ಅನಾಚಾರವನ್ನು ಮಾಡುವನೇ ? ಆತನರಿಯ ದಂತೆ ರಾವಣನ ವಿದ್ಯಾ ಸಾಧನೆಗೆ ವಿಘ್ನವನ್ನುಂಟುಮಾಡಬೇಕು” ಎಂದು ನಂದೀ ಶ್ವರವನ್ನು ಕಳಿಸಿ ವಿಭೀಷಣನೊಡನೆ ಬಲಾಧಿಕರಾದ ಕಪಿಧ್ವಜ ಸೈನಿಕರು ಲಂಕೆಯನ್ನು ಪೊಕ್ಕು ಮಾಡಗಳನ್ನೊಡೆದು ವನಗಳನ್ನು ಕಿತ್ತು ಹಾಳುಮಾಡುತ್ತಿರುವಲ್ಲಿ ಮಯನು ಕೋಪಗೊಂಡು ಕಾಳೆಗಕ್ಕೆ ನಿಲ್ಲಲು ಮಂಡೋದರಿಯು ತಂದೆ ಯನ್ನು ಸುಮ್ಮನಿರುವಂತೆ ಮಾಡಿದಳು. ವಾನರಸೇನೆಯು ಅರಮನೆಯನ್ನು ಹೊಕ್ಕು ರಾವಣನ ಕುಲ ವನಿತೆಯರನ್ನು ಎಳೆದು ತಂದು ಹೊಡೆದು ಹಾಹಾಕಾರ ವನ್ನು ಹುಟ್ಟಿಸಿದರೂ ಕಿವಿಗೊಡದೆ ರಾವಣನು ಏಕಾಗ್ರಚಿತ್ತದಿಂದ ಜಪಿಸುತ್ತಿ ದ್ದನು. ಆಗ ಅ೦ಗದನು ರಾವಣನ ಅರಮನೆಯ ಜಿನಭವನವನ್ನು ಹೊಕ್ಕು ದರ್ಶನ ಸ್ತುತಿಗೈದು ಬೆಟ್ಟದಂತೆ ನಿಶ್ಚಲನಾಗಿದ್ದ ರಾವಣನನ್ನು ನೋಡಿ ಹಲವು ತೆರನಾಗಿ ಅವನನ್ನು ಮೂದಲಿಸಿ ಹೊಡೆದು ಕೈಯಲ್ಲಿಯ ಸ್ಪಟಿಕದ ಅಕ್ಷಮಾಲೆ ಯನ್ನಿಡಾಡಿ ಆತನ ಹೆಂಡಂದಿರ ಆಭರಣಗಳನ್ನು ಕಳೆದು ಬೀಸಾಡಿ ಅಲ್ಲದುದನ್ನು ನುಡಿಯುತ್ತ ಯುವತಿಯರನ್ನು ತೊಂದರೆಮಾಡುತ್ತ ಮಂಡೋದರಿಯನ್ನು ಎಳೆದು ಕೊಂಡು ಹೋಗಿ ತನ್ನ ತಂದೆಗೆ ಚಾಮರಹಾಕಲು ನಿಯಮಿಸುವೆನೆಂದು ಹೇಳುತ್ತ ಅವರನ್ನು ಅಪಮಾನ ಪಡಿಸುತ್ತಿದ್ದನು.