ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

67

ಆಕೆಯ ಬಯಕೆಯನ್ನು ತೀರಿಸಿಬರುವ ನೆಪದಿಂದ ಸೀತಾದೇವಿಯನ್ನು ಕರೆದು ಕೊಂಡು ಹೋಗಿ ಭೀಮಾಟವಿಯಲ್ಲಿ ನಿರ್ಜಂತುಕ ಪ್ರದೇಶದಲ್ಲಿ ಬಿಟ್ಟು ಬರು ವಂತೆ ಆಜ್ಞೆ ಮಾಡಿದನು. ಕೃತಾಂತವಕ್ರನು ಸೇವಾವೃತ್ತಿಯು ಬಹು ಕಷ್ಟ ಎಂದೆಂದುಕೊಂಡು ಅಂತಹ ಕ್ರೂರ ಕೃತ್ಯವನ್ನು ಮಾಡಲು ಇಷ್ಟವಿಲ್ಲದಿದ್ದರೂ ಯತ್ನವಿಲ್ಲದೆ ಸೀತೆಯ ಬಳಿಗೆ ಬಂದು ರಾಮಚಂದ್ರನು ಹೇಳಿಕೊಟ್ಟಂತೆ ಹುಸಿ ನುಡಿದು ಸೀತಾದೇವಿಯನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಭಯಂಕರವಾದ ಅಡವಿಯನ್ನು ಹೊಕ್ಕು ಒಂದು ಬೆಟ್ಟದ ತಪ್ಪಲಲ್ಲಿ ಆಕೆಯನ್ನಿಳಿಸಿ ಗದ್ದದ ಕಂಠನಾಗಿ ಕಣ್ಣೀರನ್ನು ಸುರಿಸುತ್ತ ಸೀತಾದೇವಿಗೆ ವೃತ್ತಾಂತವೆಲ್ಲವನ್ನೂ ತಿಳಿ ಸಲು ಆಕೆಯು ಮೂರ್ಛೆ ಹೋಗಿ ಮರಳಿ ಎಚ್ಚತ್ತು ಕೃತಾಂತವಕ್ರನೊಡನೆ “ ಅಯಾ ! ರಾಮದೇವರು ನನ್ನ ಮೇಲೆ ದಯೆಯಿಡುವವರಾದರೆ ಭೂತಲವನ್ನೆಲ್ಲ ನ್ಯಾಯದಿಂದ ಪರಿಪಾಲಿಸುವಂತೆಯೂ ದೇವ ಗುರು ಪೂಜೆಯನ್ನು ಮರೆಯ ದಿರುವಂತೆಯೂ ಜನಾಪವಾದದಿಂದ ನನ್ನನ್ನು ಬಿಸುಟಂತೆ ಮಿಥ್ಯಾ ದೃಷ್ಟಿಗಳ ಮಾತನ್ನು ಕೇಳಿ ಧರಿಷ್ಟರನ್ನು ತೊರೆಯದಿರುವಂತೆಯೂ ನಾನು ಬೇಡಿ ಕೊಂಡೆನೆಂದು ತಿಳಿಸು' ಎಂದು ಕಣ್ಣೀರು ಸುರಿಸುತ್ತ ಹೇಳಿದಳು. ಅದನ್ನು ಕೇಳಿ ಕೃತಾಂತವಕ್ರನು, “ ಗರ್ಭಿಣಿಯಾದ ಅರಸಿಯನ್ನು ಅರಣ್ಯದಲ್ಲಿ ಬಿಟ್ಟು ಬರುವಂತೆ ದೊರೆಯು ಆಜ್ಞೆ ಕೊಟ್ಟಲ್ಲಿ ಅಂತಹ ಆಜ್ಞೆಯನ್ನು ನಡೆಯಿಸುವ ನಾನು ಎಂತಹ ಅಯೋಗ್ಯನು ? ಸೇವಾವೃತ್ತಿಗಿಂತಲೂ ಅಯೋಗ್ಯವಾದುದುಂಟೇ ? ” ಎಂದು ತನ್ನನ್ನು ತಾನೇ ನಿಂದಿಸಿಕೊಂಡು ಕಣ್ಣೀರು ಸುರಿಸುತ್ತ ಸೀತಾದೇವಿಗೆ ಅಡ್ಡ ಬಿದ್ದು ಅಪ್ಪಣೆ ಪಡೆದು ಅಯೋಧ್ಯೆಗೆ ಹೋದನು.
ಇತ್ತ, ಸೀತಾದೇವಿಯು ರಾಮಲಕ್ಷ್ಮಣರನ್ನು ನೆನೆ ನೆನೆದು ಶೋಕ ದಿಂದ ತಪಿಸುತ್ತ ಕಣ್ಣೀರು ಸುರಿಸುತ್ತ ದೆಸೆಗೆಟ್ಟು ಯಾವ ದಿಕ್ಕಿನಲ್ಲಿಯೂ ಯಾರನ್ನೂ ಕಾಣದೆ ಈ ಅವಸ್ಥೆಯು ತನ್ನ ಪೂರ್ವಜನ್ಮದ ಫಲವೆಂದು ತನ್ನನ್ನು ತಾನೇ ನಿಂದಿಸಿಕೊಳ್ಳುತ್ತ, ಜಿನಾಗಮ ಕೋವಿದಳಾದುದರಿಂದ ಕೊನೆಗೆ ಧೈರವನ್ನು ತಾಳಿ ಮಹಾಮುನಿಗಳು ಮಹಾಟವಿಗಳಲ್ಲಿ ತಪಸ್ಸು ಮಾಡಿ ಮೋಕ್ಷ ವನ್ನು ಸಾಧಿಸುವಂತೆ ತಾನೂ ಆ ಅಡವಿಯಲ್ಲಿ ನಿರಶನ ವ್ರತವನ್ನು ಕೈಕೊಂಡು ಸಂನ್ಯಸನದಿಂದ ಪರಲೋಕವನ್ನು ಸಾಧಿಸುವೆನೆಂದು ನಿಶ್ಚಯಿಸಿದಳು. ಆಗ ಜನಕಜೆಯ ಸುಕೃತವೇ ಮನುಷ್ಯ ರೂಪಿನಿಂದ ಬಂದಂತೆ ವಜ್ರಜಂಘನೆಂಬ ಅರಸುಮಗನೊಬ್ಬನು ಬಲ ಸಹಿತವಾಗಿ ಆನೆಯ ಬೇಟೆಗೆ ಬಂದು ದೂರದಲ್ಲಿ ವನಲಕ್ಷ್ಮಿಯಂತೆ ಮೆರೆಯುತ್ತಿದ್ದ ಸೀತಾದೇವಿಯನ್ನು ಕಂಡು ಆಶ್ಚರ ಪಟ್ಟು ಹತ್ತಿರಕ್ಕೆ ಬಂದು " ತಾಯೇ! ತಾವು ಯಾರು ? ಈ ಅಡವಿಗೆ ಏನು ಕಾರಣ ದಿ೦ದ ಬ೦ದಿರಿ? ” ಎಂದು ಕೇಳಲು, ತಾನು ಜನಕನ ಮಗಳೆಂದೂ ಪ್ರಭಾ