ಈ ಪುಟವನ್ನು ಪ್ರಕಟಿಸಲಾಗಿದೆ
72
ಪ೦ಪರಾಮಾಯಣದ ಕಥೆ

ದನು. ಅದನ್ನು ಕಂಡು ಜನರೆಲ್ಲರೂ ಒಂದೇ ಕೊರಳಿನಲ್ಲಿ ಸೀತಾದೇವಿಯ ಪಾತಿ ವ್ರತ್ಯವನ್ನು ಕೊಂಡಾಡಿದರು, ಲವಾ೦ಕುಶರು ಪುಲಕಾಂಕಿತರಾದರು, ರಾಮ ಲಕ್ಷ್ಮಣರು ಸಂತೋಷ ಸಾಗರದಲ್ಲಿ ಮುಳುಗಿದರು, ಬಂಧುವರ್ಗವೂ ಸರಿಜನವೂ ಹರ್ಷವನ್ನು ತಾಳಿತು, ದೇವದುಂದುಭಿ ಮೊಳಗಿತು, ಗಂಧವಾ ಹನು ದಿವ್ಯಾ ಮೋದದೊಡನೆ ಸುಳಿ ದನು, ರಾಜಲೋಕವು ಪ್ರೀತಿಯಿಂದ ಹರಸಿತು.
ಆಗ ರಾಮಸ್ವಾಮಿಯು ಸೀತಾದೇವಿಯ ಬಳಿಗೆ ಬಂದು, ತನ್ನನ್ನು ಕ್ಷಮಿಸಿ ಮೊದಲಿದ್ದ ತೆರನಾಗಿಯೇ ತನ್ನ ಎಲ್ಲ ಭೆಯಾಗಿದ್ದು ಸಾಮಾಜಿಸುಖವನ್ನನುಭವಿಸ ಬೇಕೆಂದು ಹೇಳಲು ಸೀತಾದೇವಿಯು, ಕೇಡುಳ್ಳ ಸಂಸಾರದಲ್ಲಿದ್ದು ಉಪಯೋಗ ಎಲ್ಲೆಂದೂ ಕೇಡಿಲ್ಲದ ಮೋಕ್ಷಸುಖಕ್ಕೆ ಕಾರಣವಾಗಿರುವ ತಪಸ್ಸನ್ನು ಕೈಕೊಳ್ಳಿ ನೆಂದೂ ಹೇಳಿ ತನ್ನ ತಲೆಗೂದಲನ್ನು ಕಿತ್ತು ಆತನ ಮುಂದಿಟ್ಟಳು. ಈ ತೆರನಾದ ಸತಿಯ ವೈರಾಗ್ಯವನ್ನು ಕಂಡು ರಾಘವನು ಮೂರ್ಛಿತನಾಗಿ ಸ್ವಲ್ಪ ಹೊತ್ತಿನ ಮೇಲೆ ಎಚ ತನು. ಅಷ್ಟರಲ್ಲಿ ಸೀತಾದೇವಿಯು ಪೃಥುನತಿ ಕಂತಿಯರ ಪಕ್ಕದಲ್ಲಿ ತಪಸ್ಸಿಗೆ ನಿಂತು ಮಹೇಂದ್ರೋ ದ್ಯಾನ ವನಕ್ಕೆ ಹೋಗಿ ಸಕಲಭೂಷಣ ಕೇವಲಿ ಭಟ್ಟಾರಕರ ಸಭೆಯನ್ನು ಸೇರಿದಳು. ರಾಮನು ಅತಿ ವ್ಯಾಮೋಹದಿಂದ ಹೊರಟು ಸಕಲ ಲೋಕಾಧಿಸರಿಂದ ಕೂಡಿದ್ದ ಸಕಲಭೂಷಣ ಕೇವಲಿಗಳ ಸಭೆ ಯನ್ನು ಹೊಕ್ಕು ಕೇವಲಿಗಳಿಗೆ ನಮಸ್ಕರಿಸಿ ಕುಳಿತುಕೊಂಡನು : ಲಕ್ಷ್ಮಣಾದಿಗಳು ಸೀತಾದೇವಿಯನ್ನು ಬಗೆ ಬಗೆಯಾಗಿ ಸ್ತೋತ್ರಮಾಡಿ ಭಕ್ತಿಯಿ೦ದೆರಗಿ ನಮಸ್ಕಾರ ಮಾಡಿದರು. ಆಗ ವಿಭೀಷಣನು ಎದ್ದು ನಿಂತು ಕೈಮುಗಿದುಕೊಂಡು ಭಟ್ಟಾರಕ ರನ್ನು ಕುರಿತು ರಾಮಲಕ್ಷ್ಮಣರ ಪೂರ್ವ ಜನ್ಮದ ಪುಣ್ಯ ಪ್ರಭಾವವನ್ನೂ ಶೌಚಾಚಾರ ಪರಾಯಣನಾದ ರಾವಣನು ಸೀತಾದೇವಿಗೆ ಮರುಳುಗೊಳ್ಳು ವುದಕ್ಕೆ ಪೂರ್ವ ಜನ್ಮದ ಸಾವಕಾರಣವನ್ನೂ ವಿವರಿಸಿ ಹೇಳಬೇಕೆಂದು ಬೇಡಿಕೊಳ್ಳಲು ಕೇವಲಿ ಗಳು ಅವನ್ನೂ ಇತರರ ಭವಾವಳಿಯನ್ನೂ ವಿಶದವಾಗಿ ತಿಳಿಸಿದರು. ತರುವಾಯ ರಾಮಲಕ್ಷ್ಮಣರು ಲವಕುಶರೊಡನೆ ಅಯೋಧ್ಯೆಯನ್ನು ಹೊಕ್ಕು ರಾಜ್ಯಸುಖಾ ಯತ್ತ ಮನರಾಗಿ ಅನೇಕ ವರ್ಷ ಸಂತೋಷದಿಂದಿದ್ದರು.
ಹೀಗಿರುವಾಗ ಸುರ ಪರಿಷತ್ತಿನಲ್ಲಿ ಮದ್ಯವರ್ತಿಯಾದ ಸೌಧರೇಂದ್ರನು ಧರ ನಿರೂಪಣಮಾಡುವಲ್ಲಿ, ಗತಿಗಳಲ್ಲಿ ಮನುಜ ಗತಿಯೇ ಪಾವನವಾದುದೆಂದೂ ಮಿಕ್ಕ ಗತಿಗಳು ಮುಕ್ತಿ ಸುಖವನ್ನು ಕೊಡಲಾರನೆಂದೂ ಹೇಳಲು, ಆ ಸಭೆಯ ಅದ ಗೀರ್ವಾಣನೊಬ್ಬನು “ ರಾಮನು ಮನುಜ ಗತಿಯನ್ನು ಪಡೆದು ಉತ್ತಮ ನೆನಿಸಿಕೊಂಡಿದ್ದರೂ ದೀಕ್ಷೆಗೊಳ್ಳಲಿಲ್ಲವಲ್ಲಾ ! ಆದುದರಿಂದ ಮನುಷ್ಯ ಭವವೇ ದೀಕ್ಷೆಗೆ ಕಾರಣವೆಂದು ಹೇಗೆ ಹೇಳುವಿರಿ? ” ಎ೦ದು ಕೇಳಿದನು. ಅದಕ್ಕೆ ವಿಭಾವಸು ವೆಂಬ ದೇವನು ರಾಮನಿಗೆ ಲಕ್ಷ್ಮಣನಲ್ಲಿರುವ ಸ್ನೇಹ ಕರಣದಿಂದ ತಪನ