ಪಂಪರಾಮಾಯಣದ ಈ ಮುದ್ರಣವು ಹಿ೦ದಣ ಮುದ್ರಣಗಳ ಆಧಾರದ ಮೇಲೆ, ಕೈಬರೆಹದ ಮೂರು ಪ್ರತಿಗಳ ಸಹಾಯದಿಂದ ತಿದ್ದಿದುದಾಗಿದೆ. ಹಿಂದಣ ಮುದ್ರಣಗಳಲ್ಲಿ ಹಲವು ತಪ್ಪುಗಳು ಬಿದ್ದಿದ್ದು ವಲ್ಲದೆ ಮುದ್ರಣದ ರೀತಿಯ ಸಮರ್ಪಕ ವಾಗಿರಲಿಲ್ಲ. ಇದರಲ್ಲಿ ಆ ನ್ಯೂನತೆಗಳನ್ನು ಸಾಧ್ಯವಾದ ಮಟ್ಟಿಗೆ ಸರಿಪಡಿಸಲು ಪ್ರಯತ್ನ ಮಾಡಿದೆ. ಹಿಂದಣ ಮುದ್ರಣಗಳಲ್ಲಿ ಪದಗಳನ್ನು ಸರಿಯಾಗಿ ವಿಂಗಡಿಸದೆ ಇರುವುದರಿಂದ ಓದುವುದು ಅಷ್ಟು ಸುಲಭವಲ್ಲವಾಗಿ, ಈ ಮುದ್ರಣದಲ್ಲಿ ಪದಗಳನ್ನು ವಿಂಗಡಿಸಿರುವುದಲ್ಲದೆ ಆವಶ್ಯಕವಾದ ಸ್ಥಳಗಳಲ್ಲಿ ಸಮಸ್ತಪದಗಳನ್ನೂ ಮಧ್ಯೆ ಸ್ವಲ್ಪ ಸ್ಥಳಬಿಡಿಸಿ ಮುದ್ರಿಸಿದೆ. ಪ್ರಮಾದವಶದಿಂದ ಕಲವೆಡೆಗಳಲ್ಲಿ ಸ್ಥಳಬಿಡಿಸಿರುವ ಕ್ರಮವು ತಪ್ಪಾಗಿರುವುದು. ಇವುಗಳಲ್ಲಿ ಮುಖ್ಯವಾದ ಕೆಲವನ್ನು ತಿದ್ದಿ, ಕೆಲವನ್ನು ಶುದ್ದಿ ಪತ್ರದಲ್ಲಿ ಕೊಟ್ಟಿದೆ. ಪ್ರೂಫುಗಳನ್ನು ಬಹಳ ಜೋಕೆಯಿಂದ ತಿದ್ದಿದರೂ ಕೆಲವು ಕಾರಣಗಳಿಂದ ತಪ್ಪುಗಳು ಬಿದ್ದಿವೆ. ಇವುಗಳಲ್ಲಿ ಕೆಲವನ್ನು ಕೈಯಿಂದ ತಿದ್ದಿ ಮಿಕ್ಕುವನ್ನು ಶುದ್ದಿಪತ್ರದಲ್ಲಿ ಕೊಡಲಾಗಿದೆ. ಗ್ರಂಥದ ಆದಿಯಲ್ಲಿ ಕಥಾ ಸಾರಾಂಶವನ್ನೂ ಕೊನೆಯಲ್ಲಿ ಕ್ಲಿಷ್ಟ ಪದಗಳ ನಿಘಂಟುವನ್ನೂ ಹೊಸದಾಗಿ ಸೇರಿಸಿದೆ.
ಕವಿತೆ-ಈ ಚಂಪೂ ಗ್ರಂಥಕ್ಕೆ ಕವಿಯು ರಾಮಚಂದ್ರ ಚರಿತ ಪುರಾಣವೆಂಬ ಹೆಸರನ್ನಿಟ್ಟಿದ್ದರೂ ಇದು ಸಾಮಾನ್ಯವಾಗಿ ಪಂಪರಾಮಾಯಣವೆಂದು ಪ್ರಸಿದ್ದಿಗೊಂಡಿದೆ. ಇದರಲ್ಲಿಯ ಕಥೆಗೂ ವಾಲ್ಮೀಕಿ ರಾಮಾಯಣದ ಕಥೆಗೂ ಸಾಮಾನ್ಯ
* ಈ ಪ್ರತಿಗಳಿಗೆ ಕ, ಖ, ಚ ಎಂಬ ಸಂಕೇತಗಳನ್ನು ಕೊಟ್ಟಿದೆ. 'ಕ' ಎಂಬುದು ಸೂರು ಓರಿಯಂಟಲ್ ಲೈಬ್ರೆರಿಯ ಓಲೆಯ ಪ್ರತಿ; 'ಖ' ಎಂಬುದು ಮೈಸೂರಿನಲ್ಲಿರುವ ಮ॥ ರಾ|| ಶ್ರೀ ಜಿನಚಂದ್ರಯ್ಯನವರ ಪುಸ್ತಕ ಭ೦ಡಾರದಲ್ಲಿ ದೊರೆತ ಓಲೆಯ ಪ್ರತಿ; ಇವರಡೂ ಸಾಮಾನ್ಯವಾಗಿ ಒಂದೇ ವಿಧವಾಗಿರುವುವು. 'ಚ' ಎಂಬುದು ಹೊಳಲ್ಕೆರೆಯ ಮ|| ರಾ|| ಶ್ರೀ ನಗರದ ಬ್ರಹ್ಮಯ್ಯನವರಿಂದ ದೊರೆತ ಕಾಗದದ ಪ್ರತಿ.' ಗ, ಘ' ಎಂಬುವು ಮೊದಲನೆಯ ಮತ್ತು ಎರಡನೆಯ ಮುದ್ರಣದ ಪ್ರತಿಗಳು. ಈ ಐದು ಪ್ರತಿಗಳ ಸಹಾಯದಿ೦ದ, 'ಕರ್ಣಾಟಕ ಸಾಹಿತ್ಯ ಪರಿಷತ್ತಿನವರು ನಿಯಮಿಸಿದ ಮೇರೆ, ಮೈಸೂರಿನಲ್ಲಿರುವ ಮಹಾರಾಜಾ ಕಾಲೇಜಿನ ಪ೦ಡಿತರಾದ ಬ್ರ|| ಶ್ರೀ ಕಾನಕಾನಹಳ್ಳಿ, ವರದಾಚಾರರು, ಟ್ರೈನಿಂಗು ಕಾಲೇಜಿನ ಪಂಡಿತರಾದ ಬ್ರ|| ಶ್ರೀ ತಿರುವಳ್ಳೂರು ಶ್ರೀನಿವಾಸರಾಘವಾಚಾರರು, ಅದೇ ಕಾಲೇಜಿನ ಪಂಡಿತರಾಗಿದ್ದ ಬ್ರ|| ಶ್ರೀ ತಿಮ್ಮಪ್ಪಯ್ಯ ಶಾಸ್ತ್ರಿಗಳು, ಮಹಾರಾಜಾ ಹೈಸ್ಕೂಲು ಪ೦ಡಿತರಾದ ಬ್ರ|| ಶ್ರೀ ಸೀತಾರಾಮಶಾಸ್ತ್ರಿಗಳು-ಈ ನಾಲ್ವರೂ ಕಲೆತು ಮೂಲವನ್ನು ಪರಿಶೋಧಿಸಿ ತಿದ್ದಿದರು. ಈ ಮಧ್ಯೆ ಬ್ರ|| ಶ್ರೀ ತಿಮ್ಮಪ್ಪಯ್ಯಶಾಸ್ತ್ರಿಗಳು ದೈವಾಧೀನರಾದುದರಿಂದ ಅವರ ಸಹಾಯವು ಮೊದಲು ಹತ್ತು ಆಶ್ವಾಸಗಳಿಗೆ ಮಾತ್ರ ದೊರಯಿತು.