ಈ ಪುಟವನ್ನು ಪ್ರಕಟಿಸಲಾಗಿದೆ

ರಾಮಚಂದ್ರಚರಿತಪುರಾಣಂ

ಪರಮಬ್ರಹ್ಮಶರೀರಪುಷ್ಟಿ ಜನತಾಂತರ್ದೃಷ್ಟಿ ಕೈವಲ್ಯಬೋ |
ಧ ರಮಾ ಮಕ್ಕಿಕಹಾರಯಷ್ಟಿ ಕವಿತಾವಲ್ಲಿ ಸುಧಾವೃಷ್ಟಿ ಸ ||
ರ್ವ ರಸೋತ್ಪಾದ ನವೀನಸೃಷ್ಟಿ ಬುಧ ಹರ್ಷಾಕ್ಷ್ಯಷ್ಟಿ ಸಾಂಗಸುಂ |
ದರಿ ವಿದ್ಯಾನಟ ನಾಟಕ೦ನಲಿಗೆ ಮತ್ಯಾವಸ್ಥ ಲೀ ರಂಗದೊಳ್

ಕಂ || ಅನಘರನುಬದ್ಧ ಕೇವಲ
       ರೆನಿಸಿದ ಗೌತಮ ಸುಧನ್ಮ ಜ೦ಬೂಗಣಭ್ರ ||
       ದ್ವಿನುತರೆಮಗೀಗೆ ಶಾಶ್ವತ
       ಧನವೆನಿಸಿದ ವಿಶ್ರುತ ಶ್ರುತಾರಾಧನನಂ ||೭||

       ಶ್ರುತಕೇವಲಿ ವಿಷ್ಣುವ್ರತಿ
       ಪತಿ ಚರಣಂ ನಂದಿ ಪರಮಮುನಿ ಪದಮಪರಾ ||
       ಜಿತ ಪಾದಂ ಗೋವರ್ಧನ
       ಯತಿ ಕ್ರಮಂjಭದ್ರಬಾಹು ಚರಣಂ ಶರಣಂ ||೮||

       ದಶ ಪೂರೈಧರರುಮೇಕಾ
       ದಶಾಂಗಧಾರಿಗಳುಮೆನಿಪ ಮುಪದ ನಖ ದೀ ||
       ಪ್ತಿ ಶರಚ್ಚಂದ್ರಿಕೆ ದರ್ಶನ
       ವಿಶುದ್ದಿಯಂ ಮಾಡುಗಘತಮೋ ವಿಘಟನಮಂ||೯||

      ಭೂತಬಲಿ ಪುಷ್ಪದಂತ
      ಖ್ಯಾತರ ಜಿನಸೇನ ವೀರಸೇನ ಮುನೀಂದ್ರ ||
      ಖ್ಯಾತರ ಸಮಂತಭದ್ರ
      ಖ್ಯಾತರ ಪದಪಾಂಸು ಕಿಡಿಸುಗಮಪಾಂಸುಗಳಂ ||೧೦||

      ಕವಿ ಪರಮೇಷ್ಠಿಗಳ ಗುಣ
      ಸ್ತವನಂಗಳ್ ಪೂಜ್ಯಪಾದ ಯತಿಪತಿಯ ಗುಣ||
      ಸ್ತವನಂಗಳೊರ್ಮೆ ನಾಲಗೆ
      ಗೆ ವಂದ ಮಾನವನ ವಾನಾಲ೦ ನಿ೦ದಪುದೇ || ೧೧||

      ಚತುರಂಗುಲ ಚಾರಣ ಋ
      ದ್ಧಿ ತಮಗೆ ಸಮನಿಸಿದುದೆನಿಪ ತಪದುನ್ನತಿಯಿಂ||
      ಶ್ರುತದಿಂ ಭೂಮಂಡಲ ವಿ
      ಶ್ರುತರೆನಿಸಿದರಿ ಕುಂದಕುಂದಾಚಾರ್ಯರ್ ||೧೨||


1. ಸೌಂದರಿ. ೧೨ ನೆಯ ಪದ್ಯವು ಕ, ಖ, ಪ್ರತಿಗಳಲ್ಲಿಲ್ಲ.