೯೪ ಯwww ಒ ಹನ್ನೊಂದನೆಯ ಪ್ರಕರಣ ಬಿಟ್ಟು, ಹರಟುತ್ತಾ, ಮಂತ್ರಿಯ ಮುಖವನ್ನು ನೋಡಿ ಪಕಪಕನೆ ನಗುತ್ತಾ, ತಾನು ಎಸೆದುಬಿಟ್ಟಿದ್ದ ರುದ್ರಾಕ್ಷ ಮಾಲೆಯನ್ನೂ * ದರ್ಭಾಸನವನ್ನೂ ಎತ್ತಿಕೊಂಡು ಹುಚ್ಚು ಹುಚ್ಚಾ" ಹಾಡು ಹೇಳಿಕೊಳ್ಳುತ್ತಾ ಹೊರಟು ಹೋದನು. ಹುಚ್ಚ ನ ಬುದ್ದಿಯು ಯಾವಾಗಲೂ ವಿಪರೀತವೇ ಎಂದುಕೊಂಡು ಮಂತ್ರಿಯು ತನ್ನ ಕೆಲಸವನ್ನು ತಾನು ನೋಡಿಕೊಳ್ಳುತ್ತ ಕುಳಿತನು. ಸಿ. ಹನ್ನೊಂದನೆಯ ಪ್ರಕರಣ. ೪ ಒಂದು ಆಶ್ಚಯ್ಯಕರವಾದ ವಸ್ತು. * ಸುಖಮಾಪತಿಶಂ ಸೇವ್ಯಂ ದುಃಖಮಾಪತಿತಂ ತಥಾ || ಚಕ್ರವತ್ ಪರಿವರ್ತನೈ ದುಖಾನಿ ಚ ಸುಖಾನಿ ಚ | ?” ಹಿತೋಪದೇಶ ಸರನು ಪಶ್ಚಿಮದಿಗಂತವನ್ನು ಸಮೀಪಿಸುತ್ತಿದ್ದನು, ಪಶ್ಚಿಮ ದಿಕ್ಕಿನ ಆಕಾಶದಲ್ಲಿದ್ದ ಮೇಘುಗಳಮೇಲೆ ಬಿದ್ದ ಸೂರ್ ರಶ್ಮಿಗಳು ಮನೋ ಹರವಾದ ನೀರುಬಿಸಿಲನ್ನುಂಟುಮಾಡಿದ್ದುವು. ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮನೆಗಳಿಗೆ ಹಿಂದಿರುಗುತ್ತಿದ್ದವರಿಂದಲೂ, ತಮಗೆ ಬೇಕಾದ ಪದಾರ್ಥಗಳನ್ನು ಅಂಗಡಿಗಳಿಂದ ಕೊಂಡುತರುವುದಕ್ಕಾಗಿ ಹೋಗುತ್ತಿದ್ದವರಿಂದಲೂ, ಕೆಲಸವೇನೂ ಇಲ್ಲದೆ ಕಾಡಹರಟೆಯನ್ನು ಹರಟ ಕೊಳ್ಳುತ್ತ ಅಲ್ಲಲ್ಲಿ ನಿಂತಿದ್ದವರಿಂದಲೂ, ಬೀದಿಗಳು ಕಿಕ್ಕಿರಿಯುತ್ತಿದ್ದುವು. ತನ್ನು ಆ ದಿನದ ವ್ಯಾಪಾರಗಳನ್ನು ಮುಗಿಸುವುದಕ್ಕೆ ಮುಂಚೆ, ಸಾಧ್ಯವಾ ದರು ಮಂದಿ ಗಿರಾಕಿಗಳನ್ನು ಸಂಪಾದಿಸಿ ಹೆಚ್ಚು ವ್ಯಾಪಾರವನ್ನು ನಡೆ ಯಿಸಬೇಕೆಂದು ಕೆಲವರು ವರ್ತಕರು ತಮ್ಮ ಅಂಗಡಿಗಳ ಕಡೆ ನೋಡಿ ಕೊಂಡು ಹೋಗುತ್ತಿದ್ದವರನ್ನೆಲ್ಲಾ ತಮ್ಮ ಮೃದುವಾದ ಮಾತುಗಳಿಂದ ಬರಮಾಡಿಕೊಳ್ಳಲು ಯತ್ನಿಸುತ್ತಿದ್ದರು, ನಾನಾವೇಷಗಳನ್ನು ಧರಿಸಿ ಬೇಡು
ಪುಟ:ರಾಯಚೂರು ವಿಜಯ ಭಾಗ ೧ .djvu/೧೦೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.