೧೧6 ಕಾಯೂರುವಿಜಯ ಮಂತ್ರಿ:-" ಮಹಾಸ್ವಾಮಿಯವರ ಚಿತ್ರಕ್ಕೆ ನಾನು ಎಂದಿಗೂ ಪ್ರತಿ ಹೇಳುವವನಲ್ಲ ವೆಂದು ,ತಮಗೆ ತಿಳಿದೇ ಇದೆ. ಈಗಲೇ ಆಜ್ಞಾಪತ್ರವನ್ನು ಬರೆದು ಕಳುಹಿಸುವೆನು, ಆದರೆ ನನ್ನದೊಂದು ಸಣ್ಣ ಪ್ರಾರ್ಥನೆಯನ್ನು ನಡೆಯಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ದಯೆಯಿಟ್ಟು ದೊಡ್ಡ ಮನಸ್ಸು ಮಾಡಿ ಅಪ್ಪಣೆಕೊಡಿಸಬೇಕು, ಕೃ, ದೇ :-* ಅದೇನು ?" ಮಂತ್ರಿ :-“ ವಿಜಯಸಿಂಹನನ್ನು ಕೂಡಲೇ ಕಾರಾಗೃಹದಲ್ಲಿ ಬಂಧಿಸಿ ಇಂದಿಗೆ ಐದನೆಯ ದಿವಸ ಅವನನ್ನು ವಧಿಸಲು ಅನುಜ್ಞೆಯಾಗ ಬೇಕು ” ಎಂದು ವಿನಯದಿಂದ ಕೇಳಿಕೊಳ್ಳಲು ಅದಕ್ಕೆ ಮಹಾರಾಜರು ಒಪ್ಪಿಕೊಂಡರು. ಅನಂಗಸೇನೆಯು ಎರಡು ದಿನಗಳಲ್ಲಿ ಊರನ್ನು ಬಿಟ್ಟು ಹೊರಡಬೇಕೆಂದು ತಿಳಿಸುವಂತೆಯ ಅವಳು ಕಳುಹಿಸಿದ್ದ ಉಂಗುರವನ್ನು ಅವಳಿಗೆ ಹಿಂದಿರುಗಿ ಕೊಡಿಸುವಂತೆಯ ಮಂತ್ರಿಗೆ ನಿಯಮಿಸಿ, ಮಜಾ ರಾಜರವರು ತಮ್ಮ ಅಂತಃಪುರಕ್ಕೆ ಹೊರಟುಹೋದರು. ಆ ಬಳಿಕ ಮಂತ್ರಿಯು ತನಗೆ ಪ್ರದಾನವನ್ನು ಮಾಡಿದ್ದ ವಿಜಯ ಸಿಂಹನಿಗೆ ವಧಾಜ್ಞೆಯನ್ನು ಕಳುಹಿಸಿಕೊಡಬೇಕಾಯಿತಲ್ಲಾ ಎಂದು ವ್ಯಸನಪಡುತ್ತು, ರಾಯರ ಆಜ್ಞೆಯಂತೆ ನಡೆದುಕೊಂಡನು, ಅನಂಗಸೇನೆ ಯು ರಾಯರ ಆಜ್ಞೆಯನ್ನು ಕೇಳಿ ಚಿಂತಾಕ್ರಾಂತಳಾಗಿ ದಿಕ್ಕು ತೋರದೆ ಪ್ರಲಾಪಿಸುತ್ತಿದ್ದಳು. ಮಾಲತಿಯು ಎಷ್ಟು ಸಂತೈಸಿದರೂ ಅವಳಿಗೆ ಸಮ ಥನವಾಗಲಿಲ್ಲ, ಉಂಗುರಗಳು ಹೇಗೆ ವಿನಿಮಯವಾದುವೆಂಬುದು ಮಾಲ ತಿಗೆ ತಿಳಿಯದು: ಅನಂಗಸೇನೆಗೆ ಮೊದಲೇ ತಿಳಿಯದು, ಹೂವಿನದಂದ ಯಲ್ಲಿ ಸಿಕ್ಕಿದ ಒಂದು ಹಾಳುಕೆಂrದದಿಂದ ತನ್ನ ಒಡತಿಗೆ ಈ ಅವಸ್ಥೆಯು ಬದಗಿರಬಹುದೆಂದು ಊಹಿಸಿ ಹೂವಾಡಿಗ ವಸಂತನನ್ನಾದರೂ TYದರಿ ಏನಾದರೂ ಸಂಗತಿ ಹೊರಪಡುವುದೆಂದು ಭಾವಿಸಿ ಮಾಲತಿಯು ಹೊವಾಡಿ ಗನನ್ನು ಹುಡುಕಿದಳು. ಆದರೆ ಯಾರನ್ನು ಕೇಳಿದರೂ ಅವಸ ಸುದ್ದಿಯೇ ತಿಳಿಯಲಿಲ್ಲ, ಆದುದರಿಂದ ಮಾಲತಿ ಹಿಂದಿರುಗಿಬಂದು ಅನಂಗಸೇನೆ ಯನ್ನು ಸಂತೈಸುವ ದೈರ್ಯವನ್ನು ಮಾಡುತ್ತಿದ್ದಳು, ಕಡೆಗೆ ಅನಂಗನೇ ನೆಯು ಆ ದಿನ ರಾತ್ರಿಯೇ ಅರಮನೆಯನ್ನು ಬಿಟ್ಟು ಹೊರಡಬೇಕೆಂದು
ಪುಟ:ರಾಯಚೂರು ವಿಜಯ ಭಾಗ ೧ .djvu/೧೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.