೫ ರಾಯರು ವಿಜಯ ಹೃದಯರಾದ ಮಂತ್ರಿಗಳು ನಾಲ್ಕು ದಿವಸಗಳವರೆಗೂ ವಧಾಜ್ಞೆಯನ್ನು ನಿಲ್ಲಿಸಬೇಕೆಂದು ಕೇಳಿಕೊಂಡುದರಿಂದ ನಿನಗೆ ಇನ್ನೂ ನಾಲ್ಕು ದಿವಸ ಆಯುಸ್ಸು ಇರುವುದೆಂದು ತೋರುವುದು. ಆದರೂ ನಿನಗೆ ಸಂದರ್ಶನಕೂಡ ಲಾಗುವುದಿಲ್ಲವೆಂದು ಅಪ್ಪಣೆಮಾಡಿರುವುದರಿಂದ ನಿನ್ನ ಆ ಆಶೆಯನ್ನು ಬಿಟ್ಟು ಬಿಡು. ಹುಚ್ಚನು ಉಂಗುರವನ್ನು ಕೊಟ್ಟನೆಂದು ಹೇಳುವೆ ; ಇದನ್ನು ನಂಬುವರು ಯಾರು ? ಅಪರಾಧವಾಡಿ ತಪ್ಪಿಸಿಕೊಳ್ಳಲು ಯತ್ನಿಸು ವೆಯಾ ? ಎಂದು ಅಧಿಕಾ ನಮದದಿಂದ ಅವನು ಪ್ರತಿಹೇಳಿದನು. ಆದುದ ರಿಂದ ವಿಜಯಸಿಂಹನು ತನ್ನ ಅದೃಷ್ಟದಲ್ಲಿದ್ದಂತೆ ನಡೆದುಹೋಗಲಿಯೆಂದು ಆ ಅಧಿಕಾರಿಯನ್ನು ಕುರಿತು, 66 ಅಯ್ಯಾ, ನೀವು ನಿಮ್ಮ ಕೆಲಸವನ್ನು ಮಾಡಿಕೊಳ್ಳಿರಿ ' ಎಂದು ಹೇಳಲು ರಾಜಭಟರು ವಿಜಯಸಿಂಹನ ಕೈಗೆ ಕೋಳವನ್ನು ತೊಡಿಸಿ ಸೆರೆಮನೆಗೆ ಕರೆದೊಯ್ದರು. ಅಲ್ಲಿ ವಿಜಯಸಿಂ ಹನು ನಾಲ್ಕುದಿನಗಳನ್ನೂ ನಾಲ್ಕು ಯುಗದಂತೆ ಕಳೆದನು. ಈ ಕಾಲದಲ್ಲಿ ಅವನು ಒಂದು ತುತ್ತು ಆಹಾರವನ್ನೂ ಮುಟ್ಟಲಿಲ್ಲ, ಒಂದು ನಿಮಿಷ ವಾದರೂ ನಿದ್ರಿಸಲಿಲ್ಲ, ತನಗೆ ಮೃತ್ಯುವು ಸನ್ನಿಹಿತವಾಗಿದೆಯೆಂದು ಸ್ವಲ್ಪ ವಾದರೂ ಚಿಂತಿಸಲಿಲ್ಲ. ವೀರಮಲಣಣಾಕಾಂಕ್ಷಿಯಾಗಿದ್ದ ತನಗೆ ಚೋರ ಯೋಗ್ಯವಾದ ಮರಣವು ಎಂದುದಕ್ಕಾಗಿಯೂ, ಲೋಕಾಪವಾದವು ಬಂದು ದಕ್ಕಾಗಿಯ, ಬಹಳ ವಾಗಿ ಪರಿತಪಿಸುತ್ತಿದ್ದನು. ತನ್ನ ಪರಾಕ್ರಮದಿಂದ ಸಾಧಾರಣರಾದ ವೀರಶ್ರೇಷ್ಠರನ್ನು ಮಾತ್ರವಲ್ಲದೆ ಸಾರ್ವಭೌಮರನ್ನೂ ಕೂಡ ಮೆಚ್ಚಿಸಿ ಪ್ರಖ್ಯಾತನಾಗಬೇಕೆಂದು ವಿಜಯನಗರಕ್ಕೆ ಬಂದಿರಲು, ತನಗೆ ಇಂತಹ ಅಪಖ್ಯಾತಿಯುತವಾದ ಮರಣವು ಸಂಘಟಿಸಿತಲ್ಲಾ ಎಂದು ಒಂದುಸಾರಿಯೂ, ನಾಲ್ಕು ದಿವಸಗಳವರೆಗೂ ವಧಾಜ್ಞೆಯನ್ನು ನಿಲ್ಲಿಸಿದುದ ರಿಂದ ಮಂತ್ರಿಪುಂಗವರು ತನ್ನ ನಿರಪರಾಧಿತ್ವವನ್ನು ಕಂಡುಹಿಡಿದು, ಬಿಡಿಸಿ ಕೊಳ್ಳುವರೆಂದು ಮತ್ತೊಂದುಸಾರಿಯ ಊಹಿಸಿಕೊಳ್ಳುತ್ತಿದ್ದನು. ಆದರೂ
ಪುಟ:ರಾಯಚೂರು ವಿಜಯ ಭಾಗ ೧ .djvu/೧೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.