೧೪ ಕರ್ಣಾಟಕ ಗ್ರಂಥಮಾಲೆ ದರಲ್ಲಿ ನಮ್ಮಲ್ಲಿ ಯಾರದೆಸೆಯಿಂದಲೋ ಆ ಪ್ರಯತ್ನಗಳಲ್ಲಾ ನಿಷ್ಪಲವಾ ದುವು. ಎಂದು ಬಹಳವಾಗಿ ವಿಚಾರದಿಂದ ಮಾತನಾಡಿದನು. ಪ್ರಹರೇಶ್ವರ ಮಂತ್ರಿಸುವರರೇ ! ನನ್ನಲ್ಲಿ ಅಂತಹ ವಿವೇಕ ಶೂನ್ಯರು ಯಾರಿರುವರು, ನಮ್ಮ ಮಿತ್ರರು ತಮ್ಮ ಪ್ರಾಣವನ್ನಾದರೂ ಕಳೆದುಕೊಳ್ಳುವರೇ ಹೊರತು, ಗುಟ್ಟನ್ನು ರಟ್ಟು ಮಾಡಲಾರರು ಎಂದು ದೃಢವಾಗಿ ನಂಬಿರುವೆನು ಹೀಗಿರಲು ನಮ್ಮ ರಹಸ್ಯವು ಶತ್ರುಗಳಿಗೆ ಹೇಗೆ ತಿಳಿಯಿತೋ ಎಂದು ನನಗೆ ಬಹಳ ವಿಷಾದವಾಗಿದೆ. ನಿಮಗೆ ಯಾರಮೇಲೆ ಸಂಶಯ ? ” ತಿಳಸಿ. ರಾಮಯ-“ ನಮ್ಮವರ ವಿಶ್ವಾಸಾರ್ಹತೆಯು ನನಗೆ ಚೆನ್ನಾಗಿ ತಿಳಿ ದಿರುವುದು ಆದರೂ ಮುಕ್ಕಾಂಬೆಯ ಮೂಲಕ ನಮ್ಮ ಗುಟ್ಟು ಹೊರಪಟ್ಟಿ ತೆಂದು ನನಗೆ ಚೆನ್ನಾಗಿ ತಿಳಿಯಿತು ”. ಪ್ರಹರೇ-“ ಮಂತ್ರಿಷ್ಠರೇ ! ಮುಕ್ತಾಂಬೆಯು ನಿಂದ್ಯಳಲ್ಲ ವೆಂದು ನನಗೆ ನಂಬಿಕೆಯಿದೆ ಏಕೆಂದರೆ-ಹಿಂದಿನ ಸಭೆಗೆ ಆಕೆಯು ಬಂದೇ ಇರಲಿಲ್ಲ. ಆದುದರಿಂದ ಸಭೆಯಲ್ಲಿ ನಡೆದ ಸಮಾಚಾರಗಳು ಅವಳಿಗೆ ಗೊತ್ತಾಗಿರಲಾರವು. ನನ್ನ ಆಣೆಭಾಷೆಗಳಲ್ಲಿ ತಮಗೆ ನಂಬಿಕೆಯಿರುವ ಪಕ್ಷದಲ್ಲಿ ದೇವರಆಣೆಗೂ ನಾನು ಮುಕ್ತಾಂಬೆಯೊಡನೆ ಈ ಸುದ್ದಿಯನ್ನು ಎತ್ತಲಿಲ್ಲವೆಂದು ಹೇಳುತ್ತೇನೆ. ಹೀಗಿರಲು ಆ ಸಭೆಯ ವೃತ್ತಾಂತವು ಮುಕ್ಕಾಂಬೆಗೆ ತಿಳಿಯಲು ಅವಕಾಶವಿಲ್ಲ. ಅವಳಿಗೆ ತಿಳಿಯದ ರಹಸ್ಯವನ್ನು ಮುಕ್ತಾಂಬೆಯು ಹೊರಗೆಡುವುವುದು ಹೇಗೆತಾನೆ ಸಾಧ್ಯ ! ತಾವೇ ಹೇಳೊ ಹಗಲಿ.? ರಾಮಯ-“ ಮಿತ್ರ! ನಿನ್ನ ವಿಷಯದಲ್ಲಿ ನನಗೆ ರವೆಯಪ್ಪಾದರೂ ಅನುಮಾನವಿಲ್ಲ. ಆದುದರಿಂದ ಸ್ವಲ್ಪವಾದರೂ ಚಿಂತಿಸಬೇಡ, ಆಕೆಗೆ ಗುಟ್ಟು ತಿಳಿದ ರೀತಿಯೇ ಬೇರೆ : ರುದ್ರದೇವನು ಆಕೆಯನ್ನು ನೋಡಿ
ಪುಟ:ರಾಯಚೂರು ವಿಜಯ ಭಾಗ ೧ .djvu/೧೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.