ود ಕರ್ಣಾಟಕ ಗ್ರಂಥಮಾಲೆ ಯನ್ನು ತಾಳಲಾರದೆ ಹಿಂದೆ ಹೇಳಿದ್ದಂತೆಯೇ ಮತ್ತೊಂದುಸಲ ಗರ್ಜಿಸಿದನು. ಆದರೆ ಈ ಸಾರಿ ಯಾರೂ ಹೆದರಲಿಲ್ಲ, ನೀನು ಹನುಮಂತನೋ ಹಾಗಾದರೆ ನಿನ್ನ ಬಾಲವೆಲ್ಲಿ ?” ಎಂದು ಒಬ್ಬ ಹುಡುಗನು ಕೇಳಿದನು, ಮತ್ತೊಬ್ಬನು ಹತ್ತಿರ ಬಿದ್ದಿದ್ದ ಕೋಲನ್ನು ತಂದು ಬಾಲದಂತೆ ಕಟ್ಟಲು, ಹುಚ್ಚೆನು ಇಗೊ ಹನುಮಂತನ ಬಾಲ ! ಹನುಮಂತನ ಬಾಲ !! ನೀವು ರಾಕ್ಷಸರು, ಹನುಮಂತನನ್ನು ಬಂಧಿಸಿ ಹಿಂಸಿಸಲು ಅವನು ರಾಕ್ಷಸರನ್ನು ತನ್ನ ಬಾಲ ದಿಂದಲೇ ಬಡಿದು ಶಿಕ್ಷಿಸಿದುದು ತಿಳಿಯದೋ ? ಎಂದು ಹೇಳಿ ವಿಜೃಂಭಿಸಿ ನಕ್ಕನು, ಕೆಲವರು ದಿಟ್ಟಿರಾದ ಹುಡುಗರು ಹುಚ್ಚನ ಬೆದರಿಕೆಗೆ ಲಕ್ಷ ಕೂಡದೆ “ ನೀನು ಹನುಮಂತ, ನಾವು ರಾಕ್ಷಸರು ನಿನ್ನನ್ನು ಕಟ್ಟಿ ಕೆಡ ವುತ್ತೇವೆ ; ನನ್ನನ್ನು ನೀನೇನು ಮಾಡುತ್ತೀಯೋ ನೋಡೋಣ ” ಎಂದು ಅಲ್ಲಲ್ಲಿ ಬಿದ್ದಿದ್ದ ಲೋಡು ಹುರಿಗಳಿಂದ ಕಟ್ಟಲಾರಂಭಿಸಿದರು. ಹುಚ್ಚನು ತನ್ನ ಕಟ್ಟನ್ನು ಕಿತ್ತು ಮುಖವನ್ನು ಉರುಗಿಸಿಕೊಂಡು ತನ್ನ “ಬಾಲ ” ವನ್ನು ಹುಚ್ಚು ಹುಚ್ಚಾಗಿ ಅಲ್ಲಾಡಿಸುತ್ತಾ, ಹತ್ತಿಗೆ ಇದ್ದ ಹುಡುಗರಿಗೆ ಮೆತ್ತಗೆ ಒಂದೆರಡು ಏಟನ್ನು ಹೊಡೆಯುತ್ತಿದ್ದನು. ಇಷ್ಟು ಹೊತ್ತಿಗೆ ಹುಡುಗರ ಉತ್ಸಾಹವು ಬಹಳ ಉದ್ರೇಕ ವಾಗಿತ್ತು, ಕೆಲವರು ಹುಡುಗರು ಲಂಕಾದಹನವನ್ನು ಜ್ಞಾಪಿಸಿಕೊಂಡು ಹಳೆಯ ಚಿಂದಿಗಳನ್ನು * ಬಾಲ" ಕ್ಕೆ ಸುತ್ತಿದರು ; ಇನ್ನು ಕೆಲವರು ತಮ್ಮಲ್ಲಿದ್ದ ಪುಡಿದುಡ್ಡುಗಳಿಗೆ ಎಣ್ಣೆಯನ್ನು ಕೊಂಡುತಂದರು, ಮತ್ತೊಬ್ಬ ಹುಡುಗನು ಬಾಲಕ್ಕೆ ಬೆಂಕಿಯನ್ನೂ ಹೊತ್ತಿಸಿಬಿಟ್ಟನು. ತಮ್ಮ ಚಾತುಯ್ಯ ವನ್ನು ದೊಡ್ಡವರಿಗೆ ತೋರಿಸಬೇಕೆಂದು ಹುಡುಗರು ಸದಾ ಅಭಿಲಾಷಿಸು ವರು, ಈ ಹುಡುಗರೂ ತಮ್ಮ “ ಆಂಜನೇಯ ” ನನ್ನು ತಮ್ಮ ದೊಡ್ಡವ ರಿಗೆ ತೋರಿಸಬೇಕೆಂದು ಅವನನ್ನು ಒಂದೆಡೆಯಲ್ಲಿ ನಿಲ್ಲಗೊಡದೆ ಅಟ್ಟಿ ಕಂಡು ಬರುತ್ತಿದ್ದರು. ಅಷ್ಟು ಹೊತ್ತಿಗೆ ಮುಚ್ಚಂಜೆ ಯಾಗಿದ್ದುದರಿಂದ
ಪುಟ:ರಾಯಚೂರು ವಿಜಯ ಭಾಗ ೧ .djvu/೧೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.