೩೫. ರಾಯರು ವಿಜಯ ತೌರುಮನೆಯಾದ ಕೊಂಡಪಲ್ಲಿಗೆ ದಾರಿ ನನಗೆ ತಿಳಿಯುವುದು, ಕಳ್ಳಕಾಕರ ಕೈಗೆ ಸಿಕ್ಕದಂತೆ ಕರದುಕೊಂಡು ಹೋಗುವೆನು ”, ಅನಂಗ-“ ನಾವು ಈಗ ಕೊಂಡಪಲ್ಲಿಗೆ ಹೋಗುವುದು ಉಚಿತ ವಲ್ಲ, ದುಶ್ಚರಿತ್ರಳಂಬ ಅಪಖ್ಯಾತಿಯು ಬಂದಿರುವಾಗ ನಾನು ಅಲ್ಲಿಗೆ ಹೋಗಿ ಅವಮಾನಿತಳಾಗಲಾರೆ " ಮಾಲತಿ ಆಚನಯ) ವಿಪರೀತವಾಗಿದೆ. ತಾಯಿತಂದೆ ಗಳು ಹೆತ್ತ ಮಕ್ಕಳ ವಿಷಯದಲ್ಲಿ ವಾತ್ಸಲ್ಯಪರರಾಗಿಯೇ ಇರುವರು. ದುರ್ಗುಳ ಹಾಗೆ ಕಂಡುಬರಲಾರವು. ಈ ಆಪತ್ಕಾಲದಲ್ಲಿ ನಿನಗೆ ಮತ್ತೆ ಯಾರು ಶಿಕ್ಷಕರಿರುವರು ? ನಿಮ್ಮ ತಾಯಿತಂದೆಗಳು ಆಡುವ ಮೃದು ವಾದ ಮಾತುಗಳಿಂದ ನಿನಗೆ ಉಂಟಾಗಿರುವ ಮಹದಸನವು ಸ್ವಲ್ಪ ಮಟ್ಟಿಗಾದರೂ ಶಾಂತವಾಗುವುದು. ಅನಂಗ ಹಾಗೆನ್ನ ಬೇಡ ; ದುಃ»ಲೋಪಶಮನವಾಗಬೇಕಾದರೆ ನೀನು ಹೇಳಿದ ಉಪಾಯಕ್ಕಿಂತಲೂ ಉತ್ತಮವಾದುದು ಬಂದಿದೆ.' - ಮಾಲತಿ_( ಅದು ಯಾವುದು ? ? ? - ಅನಂಗ-“ ಪ್ರಣ್ಯಕ್ಷೇತ್ರಗಳಿಗೆ ಹೋಗಿ ಮಹಾತ್ಮರ ದರ್ಶನವನ್ನು ಮಾಡಿ ಅವರ ಪಾದಸೇವೆಮಾಡುತ್ತಾ ಅವರ ಸದುಪದೇಶವನ್ನು ಕೇಳುತ್ತಾ ಕಾಲಯಾಪನೆ ಮಾಡುವುದು, ಹೀಗೆ ಮಾಡಿದರೆ ನಮ್ಮ ದುಃಖವು ಕಡಿಮೆ ಯಾಗಬಹುದು.?? ಮಾಲತಿ-“ ನಿನ್ನ ಮಾತುಗಳನ್ನು ಕೇಳಿ ನನಗೆ ನಗುಬರುತ್ತಿರು ವುದು, ನೀನು ಸಾಧಿಸಬೇಕೆಂದಿರುವ ಉದ್ದೇಶಕ್ಕೆ ನೀನೇ ಬಾಧಕಳಾಗಿರು ವೆ, ನಿನ್ನ ಸುಂದರಮುಖಾರವಿಂದವೂ ಮಂಜುಲಾಲಾಪವೂ ಯಾವ ಮಹಾ ತ್ಮನಿಗಾದರೂ ಬುದ್ಧಿಭ್ರಂಕವನ್ನುಂಟುಮಾಡಿಬಿಟ್ಟು ತಪೋಭ್ರಷ್ಟನನ್ನಾಗಿ ಮಾಡುವುವು ; ಆತನ ಜ್ಞಾನದೀಪವನ್ನು ನಂದಿಸಿಬಿಡುವುವು ; ಮನೋದಾ
ಪುಟ:ರಾಯಚೂರು ವಿಜಯ ಭಾಗ ೧ .djvu/೧೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.