೨೪ ಕರ್ಣಾಟಕ ಗ್ರಂಥಮಾಲೆ ಟ ಮುಗಿಯಿತೋ ಅಥವಾ ಇನ್ನೂ ಕೆಲವು ದೂರ ಪ್ರಯಾಣಮಾಡೋಣ ವೋ ? ” ಎಂದು ಕೇಳಿದಳು. ಸದಾಶಿವಭಟ್ಟ - ಈ ದಿನ ಬಹಳ ದೂರ ಪ್ರಯಾಣ ಮಾಡಿದ್ದೇವೆ. ನನಗೆ ಸಾಕಾಯಿತು. ಆದುದರಿಂದ ಕುಸುಮಕೋಮಲೆಯರಾದ ನಿಮಗೆ ಮತ್ತಷ್ಟು ಆಯಾಸವಾಗಿದೆಯೊ ! ಈ ದಿನ ಇಲ್ಲಿ ತಂಗಿದ್ದು ನಾಳ ಮುಂದಕ್ಕೆ ಸಹಿ ಮಾಡೋಣ.” ನಂಗ-“ ಈ ದುರ್ಗ ವು ಯಾರದು ? ಇದಕ್ಕೆ ಅಧಿಪತಿ ಯಾರು ?? ಸದಾ- ಅಮ್ಮಾ ! ಇದು ಬಿಜಾಪುರಕ್ಕೆ ಸೇರಿದುದು. ಈಗ ಇದಕ್ಕೆ ತೋಫಖಾನನೆಂಬಾತನು ಅಧಿಕಾರಿಯಾಗಿರುವನು. ಆತನು ನನಗೆ ಮಿತ್ರನು. ” ಎಂದನು. - ಅನಂಗ- ಸ್ವಾಮಿ ತಮ್ಮ ಮಾತುಗಳನ್ನು ಕೇಳಿ ನನಗೆ ಭಯವಾ ಗುತಿ ಗೆ 23 -ಗಿ ಸದಾ- ಅಮ್ಮಾ ! ಹೀಗೇಕೆ ಹೆದರುವಿ ? ಹೆದರಲು ಕಾರಣ ಮೇನಿದೆ ? ಮಂತ್ರೋಪಾಸನಾಶಕ್ತಿಯಿರುವ ನನಗೆ ಕೋಪಬಂದರೆ, ಲಕ್ಷಾಂ ತರ ಸೈನ್ಯಗಳೊಡನೆ ರಾಜಾಧಿರಾಜರು ಇದಿರುಬಿದ್ದರೂ, ಅವರನ್ನು ನಿಗ್ರಹಿ ಸಬಲ್ಲೆನು, ನನ್ನನ್ನು ಸಾಮಾನ್ಯನೆಂದು ತಿಳಿಯಬೇಹ, ನಿನ್ನ ಹೆದರಿಕೆಗೆ ಕಾರಣವನ್ನು ತಿಳಿಸು, ಅದಕ್ಕೆ ಆಧಾರವೇನಾದರೂ ಇದೆಯೇ ವಿನರ್ತಿಸಿ ತಿಳಿಸುವೆನು.) ಈ ನೌರುಷದ ಮಾತುಗಳಿಂದ ಅನಗಸೆನೆದು ಅರ್ಧ ಹೆದರಿಕೆಯು ಶಾಂತವಾಯಿತು. ಬಳಿಕ ಆಕೆಯು “ ಸ್ವಾಮಿ! ಬಹುಕಾಲದಿಂದಲೂ ತಮ್ಮ ಪರಿಚಯವು ಇಲ್ಲವಾದುದರಿಂದಲೂ, ಹೆಸಸ್ಥಳಕ್ಕೆ ಬಂದಿರುವುದರಿಂದ ಲ, ಅಪರಿಚಿತರಾದ ಮಹಮ್ಮದೀಯರ ಹೆಸರನ್ನು ಕೇಳಿದುದರಿಂದಲೂ ನಮಗೆ ಸ್ವಾಭಾವಿಕವಾಗಿ ಹೆದರಿಕೆಯ.೦ಟಾಯಿತು.” ಎಂದು ಹೇಳಿದಳು. ಕಿ |
ಪುಟ:ರಾಯಚೂರು ವಿಜಯ ಭಾಗ ೧ .djvu/೧೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.