ರಾಯಬ ರುವಿಜಯ ೨೨ ನೆಯ ಪ್ರಕರಣ. ತೊಫಲ'ರ್ಖಾ-- ಫಕೀರ (ಇವು ಅಜ್ಜ ರಾಯ ರು ದುರ್ಗಕ್ಕೆ ಅಧಿಪತಿಯಾದ ತೋಫಖಾನನು ವಾಸ ವಾಗಿದ್ದ ಸೌಧವು ಮಹೋನ್ನತವಾಗಿಯು ವಿಶಾಲವಾಗಿಯ ಮನೋಹರ ವಾಗಿ ಒಪ್ಪುತ್ತಿತ್ತು. ಆತನು ಕಾರ್ಯಗಳನ್ನು ಮುಗಿಸಿಕೊಂಡು ಆ ಸೌಧದಲ್ಲಿದ್ದ ಒಂದು ಕೊಟ್ಟಡಿಯಲ್ಲಿ ಕುಳಿತಿದ್ದನು. ಆಗ ರಾತ್ರಿ ಸುಮಾರು ಏಳುಗಂಟೆ ಆಗಿತ್ತು, ಆದಿನ ಹುಣ್ಣಿಮೆಯಾಗಿದ್ದುದರಿಂದ ಪೂರ್ಣ ಚಂದ್ರನು ಉದಯಿಸಿ ಕ್ರಮಕ್ರಮವಾಗಿ ಮೇಲಕ್ಕೆ ಏರುತ್ತಿದ್ದನು. ಆನಂದ ಕರವಾದ ಬೆಳದಿಂಗಳು ನಾಲ್ಕು ದಿಕ್ಕುಗಳಲ್ಲಿಯೂ ವ್ಯಾಪಿಸುತ್ತಿತ್ತು. ತಂ ಗಾಳಿಯು ಮೆಲ್ಲನೆ ಬೀಸುತ್ತಾ ಪ್ರಾಣಿಸಮೂಹಕ್ಕೆ ಸಂತೋಷವನ್ನುಂಟು ಮಾಡುತ್ತಿತ್ತು. ಆದರೆ ಈ ಸಾಮಗ್ರಿಗಳಿಂದಲೇ ವಿಯೋಗಿಗಳಿಗೆ ದುಸ್ಸಹ ವಾದ ಬಾಧೆಯು ಸಂಪನಿಸುತ್ತಿತ್ತು. ಚಿರಕಾದಿಂದ ಅನಂಗಸೇನಾಜೆಂತಾ ಸಂತಪ್ತನಾಗಿದ್ದ ತೋಫಖಾನನಿಗೆ ಮೇಲೆ ಹೇಳಿದ ಸಾಮಗ್ರಿಗಳಿಂದ ಅತಿ ದುರ್ಭರವಾದ ಸಂತಾಪವು ಉಂಟಾಗಿತ್ತೆಂದು ಬೇರೆ ಹೇಳಬೇಕಾದ ಆವಶ್ಯ ಕವಿಲ್ಲ. ಆದುದರಿಂದ ಅವನ ಮನಸ್ಸು ತಳಮಳಗೊಳ್ಳುತ್ತಿತ್ತು. ಆತನ ಸ್ಮೃತಿದರ್ಪಣದಲ್ಲಿ ಬಂದು ಸುಂದರವ್ಯಕ್ತಿಯು ಆವಿರ್ಭವಿಸಿ, ಮೊದಮೊ ದಲು ಅವಯವವಿಭಾಗರಹಿತವಾಗಿ ಕಾಣಿಸಿಕೊಂಡು ಕ್ರಮಕ್ರಮವಾಗಿ ವಿಸ್ಸುತಾವಯವವುಳ್ಳ ದಿವ್ಯ ಸುಂದರವಿಗ್ರಹವಾಗಿ ಪರಿಣಮಿಸಿತು. ಈ ವ್ಯಕ್ತಿಯನ್ನು ಮನಸ್ಸಿನಲ್ಲಿಯೇ ನೋಡಿನೋಡಿ ಸಂತೋಷಪಟ್ಟು ಕೊ
ಪುಟ:ರಾಯಚೂರು ವಿಜಯ ಭಾಗ ೧ .djvu/೧೮೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.