೬೨ ಕರ್ಣಾಟಕ ಗ್ರಂಥಮಾಲೆ ಇಪ್ಪತ್ತುಮೂರನೆಯ ಪ್ರಕರಣ. ಔಷಧ ಮಾರುವವನು. ಆರಾಮಮಂದಿರದಲ್ಲಿ ಇಳಿದುಕೊಂಡಿದ್ದ ಆ ಸ್ತ್ರೀಯರು ರಾಮಯ ಮಂತ್ರಿಗಾಗಿ ಕಾದಿದ್ದರು. ಬೆಳಗ್ಗೆ ಬರುವೆನೆಂದು ಹೇಳಿಹೋಗಿದ್ದರೂ, ಆತನು ಬರಲಿಲ್ಲ; ಆದರೂ ಅವರು ನಿರಾಶರಾಗಲಿಲ್ಲ. ಹೀಗೆಯೇ ನಿರೀಕ್ಷೆ ಸುತ್ತಾ ನಿರೀಕ್ಷಿಸುತ್ತಾ ಬಂದು ವಾರವಾಯಿತು. ಎರಡನೆಯ ವಾರವೂ ಕಳೆದು ಹೋಯಿತು, ಯೋಗ್ಯವೆಂದು ತಿಳಿದಿದ್ದ ಆ ಬ್ರಾಹ್ಮಣನು ತಮಗೆ ದಿಗೂ ಮೋಸಮಾಡಲಾರನೆಂದು ನಂಬಿಕೊಂಡಿದ್ದುದರಿಂದ, ಆ ಬ್ರಾಹ್ಮಣನು ಬಾರದೆ ಇರಲಾರನೆಂದು ಭಾವಿಸಿದ್ದರು. ಪ್ರತಿದಿನವೂ ವೇಳಗೆ ಮಿಾರದೆ ಒಬ್ಬ ಪರಿಚಾರಿಕೆಯು ಆಹಾರವನ್ನು ತಂದುಕೊಡುತ್ತಿದ್ದಳು. ಅದನ್ನು ಯಾರು ಕಳುಹಿಸುತ್ತಿರುವರೆಂದು ಕೇಳಲು, ಆ ಸೇವಕಿಯು ಆಹಾರವನ್ನು ತನ್ನ ಪ್ರಭುವು ಕಳುಹಿಸುತ್ತಿರು ವನೆಂದು ಹೇಳಿದಳು. ತಮಗೆ ಪರಿಚಿತನಾದ ಬ್ರಾಹ್ಮಣನಿಗೆ ಆ ದುರ್ಗಾ ಧೀಶನು ಮಿತ್ರನಾದುದರಿಂದ, ಆ ಬ್ರಾಹ್ಮಣನ ಇಷ್ಟದಂತೆ, ಆತನು ಕಳುಹಿಸು ತಿರಬಹುದೆಂದು ಭಾವಿಸಿದರು. ಅವರಿದ್ದ ಸ್ಥಳಕ್ಕೆ ಪುರುಷರು ಯಾರೂ ಬರುತ್ತಿರಲಿಲ್ಲವಾದುದರಿಂದ ಆ ಸ್ಥಳವು ಸ್ತ್ರೀಜನವಾಸಯೋಗ್ಯವೆಂದೂ, ನಿರಪಾಯಕರವೆಂದೂ ತಿಳಿದು ಕಾಲವನ್ನು ಕಳೆಯುತ್ತಿದ್ದರು. ಆ ಸೌಧದಲ್ಲಿ ಇದ್ದ ವಸ್ತುಗಳು ಅನಂಗಸೇನೆಯ ನಿವಾಸಭವನದಲ್ಲಿ ಇರುತ್ತಿದ್ದ ವಸ್ತು ಗಳಂತೆಯೇ ಸುಂದರವಾಗಿಯೂ ವೈಭವ ಯುಕ್ತವಾಗಿಯೂ ಇದ್ದುದರಿಂದ
ಪುಟ:ರಾಯಚೂರು ವಿಜಯ ಭಾಗ ೧ .djvu/೧೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.