ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕಾಯ ರುವಿಜಯ wwwy ws wwwyhwwws on { ಓವ ಆ ವೀರನು ಆತನ ಜೊತೆಯಲ್ಲಿ ಹೋಗುತ್ತಾ, ಆತನನ್ನು ವಿಜಯ ನಗರದಲ್ಲಿದ್ದ ಒಬ್ಬನೊಬ್ಬ ಧನಿಕನೆಂದು ಭಾವಿಸಿ “ ಮಹನೀಯರೇ ! ನಿಮ್ಮನ್ನು ಅಡ್ಡಹಾಕಿದವರು ಸಾಮಾನ್ಯರಾದ ಚೋರರಲ್ಲ, ಅವರ ಪರಾ ಕ್ರಮವನ್ನು ನೋಡಿದರೆ ಅವರು ಮಹಾವೀರರಂತೆ ತೋರುವರು. ನೀವು ಏನಾದರೂ ಅಪಚಾರವನ್ನು ಮಾಡಿರುವುದರಿಂದ ಅವರು ಅದನ್ನು ಸಹಿಸ ಲಾರದೆ ಮುಯ್ಯ ತೀರಿಸಿಕೊಳ್ಳಬೇಕೆಂದು ಹೀಗೆ ಮಾಡಿರಬಹುದು, ಈ ರಾಜ್ಯವನ್ನು ಅಳತಕ್ಕ ಚಕ್ರವರಿಯವರು ಧರಪಾಲನನಿರತರೆಂತಲೂ, ಅವರ ಅಮಾತ್ಯ ಶ್ರೇಷ್ಟರು ಮಹಾಪ್ರತಿಭಾಶಾಲಿಗಳಂತಲೂ ಕೇಳಿರುವೆನು. ಹೀಗಿರಲು ಈ ಪುರಕ್ಕೆ ಸವಿಾಪದಲ್ಲಿಯೇ, ಇನ್ನೂ ರಾತ್ರಿಯಾಗುವುದಕ್ಕೆ ಮುಂಚೆಯೇ, ಇಂತಹ ಘೋರಕೃತ್ಯಗಳು ನಡೆಯುತ್ತಿರುವುದು ಬಹಳ ಆಶ್ಚರ್ಯಕರವಾದುದು, ಇಂತಹ ದುಷ್ಟರನ್ನು ನಿಗ್ರಹಿಸಿ ಸಾಧುಜನರನ್ನು ರಕ್ಷಿಸುವುದು ರಾಜರಾದವರಿಗೆ ವಿಹಿತವಲ್ಲವೆ ? " ಎಂದನು. “ ವೀರಪ್ಪನೇ ? ನೀನು ಹೇಳುವುದು ಸತ್ಯವೇ, ಆ ರಾಜಮಂತ್ರಿ ಗಳು ನೀನು ಹೇಳುವಂತೆಯೇ ಸದ್ದು ೯ಣವಂತರೂ ಹೌದು, ಪ್ರಜಾನುರಂಗ ಕರೂ ಹೌದು. ಸೂರಬಿಂಬವು ಸುಜನಸ್ತೋತ್ರ ಪಾತ್ರವಾಗಿದ್ದರೂ ಅದನ್ನು ದೇಮಿಸತಕ್ಕ ಪ್ರಾಣಿಗಳು ಪ್ರಪಂಚದಲ್ಲಿ ಎಷ್ಟು ತಾನೆ ಇಲ್ಲ : ಆ ರಾಜ ಮಂತ್ರಿಗಳ ರಾಜ್ಯ ಪರಿಪಾಲನವು ಪ್ರಜಾನುರಂಜಕವಾಗಿದ್ದರೂ ಕೆಲವರ ಕ್ಷೇಪಕ್ಕೆ ಗುರಿಯಾಗಿರುವುದು, ಆ ರಾಜಮಂತ್ರಿಗಳ ಪರಿಪಾಲನವೆಂಬ ಸೂಲ್ಯವುಂಡಲವು ಪ್ರಕಾಶಿಸುತ್ತಿರುವ ರಾಷ್ಟ್ರದಲ್ಲಿ ರಾಜದ್ರೋಹವೆಂಬ ಧ್ವಾಂತಗಳು ಇವೆಯೆಂದು ಎಂದಿಗೂ ಯಾರೂ ನಂಬಿರಲಿಲ್ಲ, ಇನ್ನು ಮುಂದೆ ಅವರು ಇಂತಹ ದುರ್ನಿತರನ್ನು ಕ್ಷಣಮಾತ್ರದಲ್ಲಿ ಅಡಗಿಸು ವರು ಎಂದು ಮಾತನಾಡುತ್ತಾ ಸ್ವಲ್ಪ ದೂರ ನಡೆದು, ಕಣ್ಣಿಗೆ ಹಬ್ಬವಾಗಿ ಇದಿರಿಗೆ ಕಾಣಿಸುತ್ತಿದ್ದ ವಿಜಯನಗರವನ್ನು ಪ್ರವೇಶಿಸಿದರು. ಎ ಬ

  • ..