ಕಾಯುವಿಜಯ ೬೯ ವೈದ್ಯ- ಓ ಸ್ತ್ರೀಯ! ರೋಗಿಯನ್ನು ನೋಡದೆ ಔಷಧ ಕೊಟ್ಟರೆ ಪ್ರಯೋಜನವೇನು ? ಆಕೆಯನ್ನು ಒಂದುಸಾರಿ ನೋಡಬೇಕಲ್ಲಾ?' ಮಾಲತಿ- ಸ್ವಾಮಿ ! ನಾವು ಅನಾಥರು. ಇವರಕ್ಕೆಗೆ ಸಿಕ್ಕಿರು ವೆವು. ಇವರು ನಿಮ್ಮನ್ನು ಒಳಕ್ಕೆ ಬಿಡಲಾರರು, ರೋಗಲಕ್ಷಣವನ್ನು ತಿಳಿಸುವೆನು. ದಯೆಯಿಟ್ಟು ತಕ್ಕ ಔಷಧವನ್ನು ಕೊಡಬೇಕು. ” ಎಂದು ಹೇಳಿ ರೋಗದ ಚಿಹ್ನೆಗಳೆಲ್ಲವನ್ನೂ ವಿವರಿಸಿದಳು. ವೈದ್ಯ- ನೀನು ಹೇಳಿದ ಲಕ್ಷಣಗಳಿಂದ ಆ ರೋಗವು ಇಂತಹು ದೆಂದು ತಿಳಿಯಿತು. ಆದರೆ ಔಷಧಕ್ಕಾಗಿ ಹಣ ಕೊಟ್ಟರೆ, ಅದನ್ನು ಕೂಡುವೆನು.99 ಮಾಲತಿ- ಸ್ವಾಮಿ ! ದ್ರವ್ಯವನ್ನು ಈಗಲೇ ಕೊಟ್ಟು ಬಿಟ್ಟರೆ, ರೋಗಿಯು ಚೆನ್ನಾಗಿ ಚೇತರಿಸಿಕೊಳ್ಳುವವರೆಗೂ ಕಾಲಕಾಲಕ್ಕೆ ತಕ್ಕ ಔಷಧವು ದೊರೆಯುತ್ತದೋ ಇಲ್ಲವೋ ಎಂದು ಸಂಶಯವಾಗುವುದರಿಂದ ದಯೆಯಿಟ್ಟು ಕ್ಷಮಿಸಿರಿ, ತಮ್ಮ ಹಣಕ್ಕೆ ಎಷ್ಟು ಮಾತ್ರವೂ ಲೋಪ ಬರುವುದೆಂದು ಭಾವಿಸಬೇಡಿರಿ, ಬೇಕಾದರೆ ಪ್ರಮಾಣ ಮಾಡಿಕೊಡು ತೇನೆ. ಮುಂಚೆ ಹಣಕೊಟ್ಟು ಬಿಟ್ಟರೆ ರೋಗಿಗಳ ವಿಷಯದಲ್ಲಿ ವೈದ್ಯರು ಅಷ್ಟು ಶ್ರದ್ಧೆಯನ್ನು ವಹಿಸದೇ ಇರುವುದು ಸಹಜ. ಆದುದರಿಂದ ನಾನು ಹೀಗೆ ಮಾತಾಡುವೆನೆಂದು ಕೆಪಿಸಬೇಡಿರಿ.' ವೈದ್ಯ- ಕೋಪವೇಕೆ ! ಹಣದ ಆಸೆಗಾಗಿ ವೈದ್ಯರಾಗಿರುವವ ರಿಗಾದರೆ ದುಡ್ಡು ಹೋದೀತೆಂದು ಸಂಶಯ. ನನ್ನ ಔಷಧದಿಂದ ರೋಗಿಗೆ ಗುಣವಾಗುವುದೆಂದು ನನಗೆ ಚೆನ್ನಾಗಿ ನಂಬಿಕೆಯಿದೆ. ನೀನು ಹೇಳಿದಂತೆ ಯೇ ಆಗಲಿ, ಗುಣವಾದಮೇಲೆ ಬಹುಮಾನ ಮಾಡಬಹುದು. ನಾನು ಪ್ರತಿದಿನವೂ ಪ್ರತಃಕಾಲ ಸಾಯಂಕಾಲಗಳಲ್ಲಿ ಇಲ್ಲಿಗೆ ಬರುತ್ತಿರುವೆನು.
ಪುಟ:ರಾಯಚೂರು ವಿಜಯ ಭಾಗ ೧ .djvu/೨೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.