ರಾಯರು ವಿಜಯ ବିଟ ೧ ೫ ವ ಸನು ಇಷ್ಟು ಉಪಾಯಗಳನ್ನೂ ಮಾಡಿರುವನು. ರಾಮಯಮಂತ್ರಿಯಾ ಮಹಮ್ಮದೀಯರನ್ನು ವಂಚಿಸಬೇಕೆಂದಿರುವನೋ ಇಲ್ಲವೋ ಎಂಬುದನ್ನು ನಿಶ್ಚಯಿಸಬೇಕಾದರೆ ಸ್ತ್ರೀಗೆ ಪುರುಷವೇಷವನ್ನು ಹಾಕಿಸಿದುದೇ ಪ್ರಬಲ ನಿದರ್ಶನ: ಈ ಸಂದೇಹವನ್ನು ಮನಸ್ಸಿನಲ್ಲಿಟ್ಟು ಕೊಂಡು ಪರೀಕ್ಷಿಸುತ್ತಿರಿ; ಆಗ ನಿಮಗೇ ಗೊತ್ತಾಗುವುದು, ನಾನ, ಬೇರೊಂದುಸಲ ಬಂದು ತಮ್ಮ ದರ್ಶನವನ್ನು ತೆಗೆದುಕೊಳ್ಳುವೆನು ” ಹೀಗೆ ಹೇಳಿ ರಾಮರಾಜನು ಹೊರಟು ಹೋದನು. ಕಂಬರಸೇನನು ಈ ವಿಷಯವನ್ನು ಕುರಿತು ತನ್ನಲ್ಲಿ ತಾನೇ ಆಲೋ ಚಿಸಿಕೊಳ್ಳುತ್ತಿದ್ದನು. ಈ ಸಂಭಾಷಣೆ ಮು ನಡೆದ ಮಾರನೇ ದಿನ ಬೀದಿ ಯಲ್ಲಿ ಹೋಗುತ್ತಿದ್ದ ಒಬ್ಬ ಮನುಷ್ಯನು ಮನೆಯಬಾಗಿಲಲ್ಲಿ ನಿಂತು ಕೊಂಡು) ಆತನನ್ನು ಕುರಿತು “ಸಾಹೇಬರೇ, ನಿಮ್ಮ ಊರು ಇದೇಯೋ?” ಎಂದು ಕೇಳಿದನು. ಕಂಬರ್-“ ನಿನ್ನ ಪ್ರಶ್ನೆಯಿಂದ ನೀನು ಪರಸ್ಪಳದವನೆಂದು ತೋರು ವುದು, ನಿನ್ನ ಊರು ಯಾವದು ? ?” ಆಗಂತುಕ-“ ನಮ್ಮ ಸ ಳ ವಿಜಯನಗರ, ಈ ದುರ್ಗದಲ್ಲಿ ನನ ಗೊಂದು ಕೆಲಸವಿರುವುದು, ನಿಮ್ಮ ಸ್ಥಳವು ಇದೇ ಆದರೆ, ನನಗೆ ಒಂದು ವೃತ್ತಾಂತವನ್ನು ತಿಳಿಸುವಿರಾ ? ?” ಕಂಬರ್- ಅರೇನು ? ಕೇಳು. ನನಗೆ ತಿಳಿದಿದ್ದರೆ ಹೇಳುವೆನು. ಆಗಂತುಕ- ಈ ದುರ್ಗದಲ್ಲಿ ರಾವಯ ಮಂತ್ರಿಯೆಂಬ ಒಬ್ಬರು ದೊಡ್ಡ ಮನುಷ್ಯರಿರುವಂತೆ, ಅರಮನೆಗೆ ದಾರಿ ಯಾವುದು ? ಕಂಬರ್-“ ಏನು ! ನಿನ್ನನ್ನು ಕಳುಹಿಸಿದುದು ತಿಮ್ಮರಸರು ತಾನೇ ? ರಾಮಯಮಂತ್ರಿಯು ನಾನೆ. ಈ ಅಂಶವು ಯಾರಿಗಾದರೂ ತಿಳಿ ಆ ೬ ಇ.
ಪುಟ:ರಾಯಚೂರು ವಿಜಯ ಭಾಗ ೧ .djvu/೨೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.