೧೧೦ ೧೧೦ ಕರ್ಣಾಟಕ ಗ್ರಂಥಮಾಲೆ vvvvvvv/44 C ಟ ಮಾಡಿಕೊಡಿ. ತಾವು ಹೇಳಿದರೆ ಮುಕ್ಕಾಂಬೆಯು ತನ್ನ ಮಾತನ್ನು ಮೀರಲಾರಳು.” ಎಂದು ಖಾನನು ಹೇಳಿದನು. ಈ ಮಾತುಗಳನ್ನು ಕೇಳಿ ಖಂಡಿತವಾಗಿ ಉತ್ತರ ಕೊಡುವುದು ಸರಿಯಲ್ಲ ಎಂದು ಭಾವಿಸಿ ರಾಮಯಮಂತ್ರಿಯು, “ ಮುಕ್ಕಾಂಬೆಯೊಡನೆ ಯೋಚಿಸಿ ಹೇಳುವೆನು ಎಂದನು. ಮಲಮುಲಖಾನನು ತನ್ನ ಕೆಲಸವು ಕೈಗೂಡುವುದೆಂದು ಸಂತೋಷಿಸುತ್ತಿದ್ದನು. ರಾಮಯಮಂತ್ರಿಯು ಖಾನನ ಅಪ್ಪಣೆಯನ್ನು ಪಡೆದು ತನ್ನ ಮಂದಿ ರಕ್ಕೆ ಹಿಂದಿರುಗಿದನು, ದಾರಿಯಲ್ಲಿ ಬರುತ್ತಾ ಆ ವೃತ್ತಾಂತವನ್ನು ಮುಕ್ಕಾಂಬೆಗೆ ತಿಳಿಸಬೇಕೆಂದು ಮೊದಲು ಯೋಚಿಸಿದನು. ಆದರೆ ಎಂತಹ ವಿಪಕಾರಗಳಿಗಾದರೂ ಹಿಂದೆಗೆಯದಿದ್ದ ರಾಮಯಮಂತ್ರಿಗೆ, ನಿರ್ಮಲವಾದ ಉದಯಗಿರಿಯ ರಾಜವಂಶಕ್ಕೆ ಮೈಚ್ಛಸಂಬಂಧಕಳಂಕ ಪನ್ನು ಉಂಟುಮಾಡಲು ಮನಸ್ಸು ಬರಲಿಲ್ಲ, ಇದೂ ಅಲ್ಲದೆ ಇನ್ನೂ ಕೆಲವು ಕಾಲ ಕೃಷ್ಣದೇವರಾಯರನ್ನೇ ಅನುಸರಿಸಿಕೊಂಡಿದ್ದರೆ ಅವರಿಗೇ ಕನಿಕರ ಹುಟ್ಟಿ ಮುಕಾಂಬೆಗೆ ಉದಯಗಿರಿರಾಜ್ಯವನ್ನು ಕೊಡುತ್ತಿದ್ದುದೂ, ನಿರಪಾಯಸ್ಥಳದಲ್ಲಿ ಸುರಕ್ಷಿತಳಾಗಿದ್ದ ಆಕೆಯನ್ನು ತನ್ನ ಮಾಯಾವಚನ ಗಳಿ೦ದ ಅನ್ಯರಾಜ್ಯಕ್ಕೆ ಎಳೆತಂದು ದುಷ್ಟರಮಧ್ಯದಲ್ಲಿ ಸಿಕ್ಕಿಸಿ ಅಂತಹ ಅಪಾಯಕ್ಕೆ ಒಳಪಡಿಸಿದ್ದುದೂ ರಾಮಯನಿಗೆ ಬಹಳ ವಾಗಿ ಪಶ್ಚಾತ್ತಾಪ ವನ್ನುಂಟುಮಾಡಿದ್ದುವು. ಆದುದರಿಂದ ಮನೆಯನ್ನು ಪ್ರವೇಶಿಸಿದಾಗ ರಾಮಯನ ಮುಖದಲ್ಲಿ ಗೆಲುವು ಇರಲಿಲ್ಲ, ಸೂಕ್ಷ್ಮ ಬುದ್ಧಿಯುಳ್ಳ ಮುಕ್ಕಾಂಬೆಯು ರಾಮಯಮಂತ್ರಿಯನ್ನು ನೋಡಿದಕೂಡಲೇ, << ಓ ರಾಮಯಮಂತ್ರಿ! ಮಹಾಶಯಸಾಗರಗಳನ್ನೂ ಲೀಲಾಜಾಲವಾಗಿ ದಾಟು ತಿದ್ದ ನಿನ್ನ ಬುದ್ಧಿಗೆ ಈಗ ಏನು ಅಡ್ಡಿ ಸಂಭವಿಸಿರುವುದು ? ಶತ್ರುಗಳಿಂದ ನನಗೆ ಅವಮಾನವು ಸಂಭವಿಸಿರುವುದೇ? ನಿನ್ನ ಯೋಚನೆಗೆ ಏನು ಕಾರಣ? ಓ 0
ಪುಟ:ರಾಯಚೂರು ವಿಜಯ ಭಾಗ ೧ .djvu/೨೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.