೧೩ ಕರ್ಣಾಟಕ ಗ್ರಂಥಮಾಲೆ ಹೇಳುತ್ತಿರುವಷ್ಟರಲ್ಲಿ ವಿಜ ಸಿಂಹನು ಅಡ್ಡಬಂದು, “ ಸಾರ್ಥಕವಾಯಿತು! ಮುಕ್ತಾಂಬೆಗೆ ಮಹಮ್ಮದೀಯಸಂದರ್ಶನವೇ ! ಹಾಗಾದರೆ ನನಗೆ ಈ ಜೀವವೇತಕ್ಕೆ ? " ಎಂದು ಬಹಳ ವ್ಯಸನಪಟ್ಟು ಕೊಳ್ಳುತ್ತಿದ್ದಾಗ ರಾಮ ರಾಜನು ಅವನನ್ನು ತಡೆದು, ಮಿತ್ರನೇ ! ಅಷ್ಟು ತ್ವರೆಪಡಬೇಡ, ಮುಕ್ಕಾಂ ಬೆಯು ಇಂತಹ ಕುಟಿಲಮಾರ್ಗಕ್ಕೆ ಎಂದಾದರೂ ಸಮ್ಮತಿಸುವಳೇ ? ತನ್ನ ಕಾಠ್ಯವು ಕೈಗೂಡುವವರೆಗೂ ಆ ತುರುಕನಿಗೆ ಸಂಶಯವುಂಟು ಮಾಚದೆ ಕಡೆಗೆ ಅವನಿಗೆ ತಕ್ಕ ಬುದ್ದಿಯನ್ನು ಕಲಿಸಿ ತೊಲಗಿಸಬೇಕೆಂದು ಅಷ್ಟು ದೂರ ಸಮ್ಮತಿಸಿರುವಳೆಂದು ದೃಢವಾಗಿ ನಂಬು, ಆಕೆಯು ನಮ್ಮೆಲ್ಲ ರಿಗಿಂತಲೂ ಬುದ್ಧಿವಂತಳು, ಯುಕ್ತಿಪರಳು ಆ ಮಹಮ್ಮದೀಯನು ಮಹಾ ಬಲಿಷ್ಠನು, ಅವನಿಗೆ ತಕ್ಕವನು ನೀನೇ ಸರಿ ಎಂದು ನಿರ್ಧರಿಸಿ ಉಪಾಯಗಳನ್ನು ಮಾಡಿ ನಿನ್ನನ್ನು ಕಾರಾಗೃಹದಿಂದ ಬಿಡಿಸಿರುವೆವು. ಈಗ ನೀನು ನಿನ್ನ ಧೈದ್ಯಸಾಹಸದಿಗಳನ್ನು ತೋರಿಸಿ ಮುಕ್ತಾಂಬೆಯ ಗೌರವವನ್ನು ಕಾಪಾಡಿಕೊಳ್ಳಬೇಕಾಗಿದೆ” ಎಂದು ಹೇಳಿದನು. “ ಅಯ್ಯೋ ಆಕೆಗೆ ಎಷ್ಟು ಕಷ್ಟ ಸಂಭವಿಸಿತು ! ಒಂದುವೇಳೆ ಆ ದುಷ್ಟ ತುರುಷ್ಕನಿಂದ ಆಕೆಗೆ ಅವಮಾನವು ಸಂಭವಿಸಿದರೂ ಸಂಭವಿಸೀತು. ಆದುದರಿಂದ ತ್ವರೆಪಡುವುದು ಒಳ್ಳೆಯದು. ! “ ವಿಜಯಸಿಂಹ ! ನಾನು ಹೇಳಿದ ಬೇಟೆಯು ಇನ್ನೂ ನಾಳೆ ಉಂ ಟಾಗಬೇಕಾಗಿರುವುದು, ಆದುದರಿಂದ ಅಂತಹ ಅವಸರವೇನೂ ಇಲ್ಲ, ನೀನು ಆದಿಲ್‌ಷಹನ ಸಭೆಯಲ್ಲಿ ಮಾತನಾಡಿದ ವಾಕ್ಯಗಳನ್ನು ಕೇಳಿ ಮುಕ್ಕಾಂ ಬೆಗೆ ಬಹಳ ಸಂತೋಷವಾಯಿತು. ಒ೪ಕ ನಿನಗೆ ಸಂಭವಿಸಿದ ಕಾರು ಗೃಹವಾಸದ ವೃತ್ತಾಂತವನ್ನು ಕೇಳಿ ಬಹಳ ವ್ಯಸನಕಟ್ಟಳು. ಹೀಗೆ ನಿನಗೆ ಸಂತೋಷವಾದಾಗ ಸುಖಿಸುತ್ತಲೂ ಕಷ್ಟ ಒದಗಿದಾಗ ದುಃಖಿಸುತ್ತಲೂ ನಿನ್ನ ಸಂದರ್ಶನಕ್ಕಾಗಿ ಬಹಳ ಕುತೂಹಲ ಪಡುತ್ತಿರುವಳು. ನಾನು
ಪುಟ:ರಾಯಚೂರು ವಿಜಯ ಭಾಗ ೧ .djvu/೨೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.