೧೪೦ ಕರ್ಣಾಟಕಗ್ರಂಥಮಾಲೆ ಸಾಯಂಕಾಲದವರೆಗೂ ಮುಕ್ಕಾಂಬೆಯು ಆತನನ್ನು ದಿರ್ವಾಖಾನೆಯಲ್ಲಿ ಒಂದುಕಡೆ ಬಚ್ಚಿಟ್ಟಿದ್ದಳು. ಆ ಮರುದಿನ ರಾತ್ರಿ ಬಂದು ಜಾವ ಕಳೆದಮೇಲೆ ಮಲಮುಲಖ ನನೂ ಫಕೀರನೂ ಆ ದಕ್ಷಿಣದ್ವಾರದ ಬಳಿಗೆ ಬಂದರು, ಅಂತಹ ಕಾವ್ಯ ಗಳಲ್ಲಿ ತಲೆಹಾಕಲು ಫಕೀರನಿಗೆ ಇಷ್ಟವಿರಲಿಲ್ಲ. ಆದರೆ ಖಾನನ ಬಲ ತ್ಯಾರದಿಂದ ಅವನೊಡನೆ ಬಂದಿದ್ದನು. ಅವರಿಬ್ಬರಿಗೂ ಈ ಮೇರೆಗೆ ಸಂಭಾಷಣೆಯು ನಡೆಯುತ್ತಿತ್ತು :- ಖಾನ್- ಆ ಯುವತಿಯು ಸರಳಹೃದಯಳು, ಆಕೆಗೆ ತಿಳಿಸುವುದು ಹೇಗೆ ? ನಾವು ಇಲ್ಲಿ ಬಹಳ ಹೊತ್ತಿರುವುದು ಯುಕ್ತವಲ್ಲ. ತಾವು ಆಳ ಯೊಡನೆ ಮಾತನಾಡಿರುವೆನೆಂದು ಹೇಳಿದಿರಲ್ಲವೇ ? ಆಕೆಯ ಮನಸ್ಸು ನನ್ನ ವಿಷಯದಲ್ಲಿ ವಿಪರೀತವಾಗಿಲ್ಲವಷ್ಟೆ ? " ಫಕೀರ- ಆ ಯುವತಿಯು ಸರಳ ಹೃದಯಳು. ಆಕೆಗೆ ನಿನ್ನಲ್ಲಿ ಬಹಳ ಅನುರಾಗವಿರುವಂತಿದೆ. ಹಾಗಲ್ಲದಿದ್ದರೆ ಈ ವಿವಾಹವಾಗುವುದಕ್ಕೆ ಮುಂಚೆ ನಿನ್ನೊಡನೆ ಮಾತನಾಡಲು ಒಪ್ಪುತ್ತಿದ್ದಳೇ ? ಖಾನ್- * ರಾಮಯಮಂತ್ರಿಯು ಕಪಟರಾಜನೀತಿವಿಶಾರದನು. ನನ್ನ ಕೋರಿಕೆಯನ್ನು ಆತನು ಕೇಳಿದಾಗಲೇ ಸಂಶಯಪಡುತ್ತಾ ಮನಸ್ಸಿ ಲ್ಲದೆ ಒಪ್ಪಿಕೊಂಡಂತೆ ತೋರಿತು. ಆದುದರಿಂದ ನನಗೆ ಅವಮಾನವೇನಾ ದರೂ ಆದೀತೆಂದು ಸಂದೇಹಪಡುತ್ತಿದೇನೆ, ೨ - ಫಕೀರ-“ ತಾವು ಇದಕ್ಕೆ ಸಂದೇಹಪಡತಕ್ಕೆ ಆವಶ್ಯಕವಿಲ್ಲ. ತಮ್ಮಿಂದ ಉದಕಾರ ಪಡೆಯಬೇಕೆಂದಿರುವ ರಾಮಯಮಂತ್ರಿಯು ಅಷ್ಟಕ್ಕೆ ಅವಕಾಶ ಕೊಟ್ಟು ತನ್ನ ಕಾಲ್ಯವನ್ನೇ ಹಾಳುಮಾಡಿಕೊಳ್ಳುವನೆ ? ಅವನು ಎಂದಿಗೂ ಅಂತಹ ಬುದ್ಧಿಹೀನನಲ್ಲ.”
ಪುಟ:ರಾಯಚೂರು ವಿಜಯ ಭಾಗ ೧ .djvu/೨೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.