ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ಕರ್ಣಾಟಕಕ್ರಂಥಮಾಲೆ ಬಹಳ ವಿತರಣೆಯಿಂದ ನಡೆಯಿಸಿಕೊಂಡು ಕೊಂಡಾರೆಡ್ಡಿಯ ಮಗನು ಬರು ಆದ್ದನು. ಆ ತುಕ್ಕಡಿಯ ಹಿಂದೆ ತಿಮ್ಮರಸನ ತಮ್ಮನಾದ ಸಾಳುವಗೋ ವಿಂದರಾಜನು ಮೂವತ್ತು ಸಾವಿರ ಕಾಲುಬಲವನ್ನೂ ಒಂದುಸಾವಿರ ಕುದುರೆ ಗಳನ್ನೂ ಹತ್ತು ಮತ್ತೇಭಗಳನ್ನೂ ಸ್ವಲ್ಪವೂ ಕ್ರಮತಪ್ಪದಂತೆ ನಡೆ ಯಿಸಿಕೊಂಡು ಬರುತ್ತಿದ್ದನು. ಹೀಗೆಯೇ ಇವರ ಹಿಂದೆ ಮಧುರೆಯ ನಾಯಕನೂ ಮೈಸೂರಿನ ರಾಯಭಾರಿಯ ಕುಮಾರನೂ, ವ್ಯಂಗಾಪುರಾ ಧ್ಯಕ್ಷನೂ, ಅನೇಕ ಕ್ಷತ್ರಿಯವೀರರೂ ತಮ್ಮ ತಮ್ಮ ಸೈನ್ಯಗಳನ್ನು ವೈಭವದಿಂದ ಕರೆದುಕೊಂಡು ಬರುತ್ತಿದ್ದರು. ಬಳಿಕ ವಿಜಯನಗರ ಸಾಮ್ರಾಜ್ಯ ಲಕ್ಷ್ಮಿಧುರಂಧರರಾದ ಕೃಷ್ಣ ದೇವರಾಯರು ತಮ್ಮ ರಾಜ ಚಿಹ್ನಸಮೇತರಾಗಿ ಸ್ವತಃ ಒಂದು ಸೈನ್ಯ ವಿಭಾಗವನ್ನು ನೋಡಿ ಕೊಳ್ಳುತ್ತ ಬರುತ್ತಿದ್ದರು. ವಿಜಯನಗರವು ಶತ್ರು ರಾಜರೊಡನೆ ಹಿಂದೆ ನಡೆಯಿಸಿದ್ದ ಯಾವಯುದ್ಧದಲ್ಲೂ ಇಷ್ಟು ಸೈನ್ಯವು ಒಟ್ಟುಗೂಡಿರಲಿಲ್ಲ. ಮಹಮದೀಯ ರಾಜ್ಯಗಳು ಮೂರೂ ಒಟ್ಟು ಗೂಡಿ ಬರುವೆಂದು ಇಷ್ಟು ಸೈನ್ಯವನ್ನು ತಂದಿದ್ದರು. ರಾಯರ ಸೈನದವರಲ್ಲಿ ಅನೇಕರಿಗೆ, ಯುದ್ಧ ಗಳಲ್ಲಿ ತಮ್ಮ ಶಕ್ತಿ ಸಾಹಸಗಳನ್ನು ತೋರಿಸುವುದಕ್ಕೆ ಅವಕಾಶವೇ ಇಲ್ಲದೆ ಇಂತಹ ಸಂದರ್ಭವು ಸಿಕ್ಕೀತೇ ಎಂದು ಅವರು ಹಾರೈಸುತ್ತಿದ್ದರು. ಆದುದರಿಂದ ಅವರ ಉತ್ಸಾಹವು ತುಂಬಿತುಳುಕುತ್ತಿತ್ತು. ಅಸಿ