ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಕರ್ಣಾಟಕ ಗ್ರಂಥಮಾಲೆ ಹೀಗೆ ಹೋಗುತ್ತಿರುವಾಗ ಕೆಲವುಜನ ಕುದುರೆ ಸವಾರರು ಆತನ ಇದಿರಿಗೆ ಬಂದರು. ವಿಷಯವನ್ನು ವಿಚಾರಮಾಡಿ ಬಳಕೆ ಮುಂದಕ್ಕೆ ಹೊರಡುವುದು ಒಳ್ಳೆಯದೆಂದು ಭಾವಿಸಿ ತನ್ನ ಸೈನ್ಯವು ನಿಲ್ಲುವಂತೆ ಆಜ್ಞಾಪಿಸಿದನು. ಹೀಗೆ ನಿಂತು ಕೆಲವು ನಿಮಿಷಗಳಾಗುವುದರೊಳಗಾಗಿ ಮುಂದೆ ಕಾಣಿಸಿಕೊಂಡಿದ್ದ ಕೆಲವರು ಸವಾರರನ್ನು ಅನುಸರಿಸಿಕೊಂಡು ಬರುತ್ತಿದ್ದ ದೊಡ್ಡ ಸೈನ್ಯವೇ ಕಂಡುಬಂತು. ಆಗ ಆದಿಲ್‌ಷಹನು ಶತ್ರು ಗಳ ಮೇಲೆ ಬೀಳಬೇಕೆಂದು ತನ್ನ ಕಡೆಯ ಸೈನಿಕರಿಗೆ ಆಜ್ಞಾಪಿಸಿದನು. ಆದಿಲ್‌ಪಹನೇ ದುರ್ಗರಕ್ಷಣೆಗಾಗಿ ಸೈನ್ಯವನ್ನು ತೆಗೆದುಕೊಂಡು ಬರುವ ನೆಂದು ಕೇಳಿ ಅವನ ಗರ್ವವನ್ನು ಮುರಿಯಬೇಕೆಂದು ನಿರ್ಧರಿಸಿ ಕೃಷ್ಣ ದೇವರಾಯರು ತಮ್ಮ ಸೈನ್ಯವನ್ನು ಸ್ವತಃ ನಡೆಯಿಸಿಕೊಂಡು ಬರುತ್ತಾ, ದಾರಿಯಲ್ಲಿ ಆ ಸೈನ್ಯವನ್ನು ಗೃಧವ್ಯೂಹವಾಗಿ ರಚಿಸಿಕೊಂಡು ಮುಂದೆ ಮುಂದೆ ನುಗ್ಗಿ ಬರುತ್ತಿದ್ದರು. ಈ ವ್ಯೂಹದಲ್ಲಿ ನಾಲ್ಕು ಸಾವಿರ ಅಕ್ಷಿ ಕರೂ ಕೆಲವು ಆನೆಗಳೂ, ಕೆಲವು ಪದಾತಿವರ್ಗವೂ ಮುಖಭಾಗವಾಗು ವಂತೆ ಏರ್ಪಡಿಸಿದ್ದರು. ಕೊಕ್ಕಿನಬಳ ತೂರಾಗ್ರೇಸರನಾದ ಕಾಮಾ ನಾಯಕನಿದ್ದನು. ಕಣ್ಣುಗಳ ಬಳಿ ಪರಾಕ್ರಮಶಾಲಿಗಳಾದ ತ್ರಿಯಂಬಕ ರಾಯ ತಿಮ್ಮಪ್ಪನಾಯಕರಿದ್ದರು. ಆದೆಪ್ಪನಾಯಕನೂ ಕೊಂಡಾರೆಡ್ಡಿ ಯ ಒಂದು ರೆಕ್ಕೆಯಾಗಿಯ, ಗೋವಿಂದರಾಜನೂ ಮಧುರೆಯ ನಾಯ ಕನೂ ತನ್ನ ಸೈನ್ಯಗಳೊಡನೆ ಎರಡನೆಯ ರೆಕ್ಕೆಯಾಗಿಯೂ ಆಗಿದ್ದರು. ಕೃಷ್ಣ ದೇವರಾಯರು ಕುಕ್ಷಿಭಾಗದಲ್ಲಿದ್ದರು. ವ್ಯಂಗಾವುರಾಧ್ಯಕ್ಷನೂ ಇನ್ನೂ ಕೆಲವರು ಕ್ಷತ್ರಿಯರೂ ಪುತ್ಪಭಾಗದಲ್ಲಿದ್ದರು. ರಾಯರು ಯೋಚಿಸಿದಂತೆಯೇ ಶತ್ರುಗಳು ವ್ಯೂಹದ ಮುಖಭಾಗದಲ್ಲಿ ಇದ್ದ ಕೆಲವರನ್ನು ನೋಡಿ ನೋಸಹೋದರು, ಮುಖದಲ್ಲಿ ಕೆಲವರೇ ಇದ್ದ ರೂ ಅವರು ಅಪ್ರತಿಹತ ಪರಾಕ್ರಮಶಾಲಿಗಳಾದುದರಿಂದ ಶತ್ರುಗಳಿಗೆ