೧೬ರ ಕರ್ಣಾಟಕ ಗ್ರಂಥಮಾಲೆ ವ ಅಂಗರಕ್ಷಕ ಭಟರನ್ನೇ ಕಳುಹಿಸಿ ಅವರಿಂದ ಸಹಾಯಮಾಡಿಸುತ್ತಾ ತಾವೂ ಪ್ರೋತ್ಸಾಹಪಡಿಸುತ್ತಾ ಬಂದುದರಿಂದ ವಿಜಯನಗರದ ಸೈನಿಕರು ರಭಸದಿಂದ ಯುದ್ಧ ಮಾಡಿ ಕಳುಗಳಲ್ಲಿ ಕೆಲವರನ್ನು ಸೆರೆಹಿಡಿದರು. ಮತ್ತೆ ಕೆಲವರನ್ನು ಕೃಷ್ಣಾ ನದಿಯೊಳಕ್ಕೆ ಅಟ್ಟಿಬಿಟ್ಟರು. ಇದನ್ನು ಕಂಡು ಮಹಮ್ಮದೀಯ ದಳಪತಿಗಳ ಆದಿಲ್‌ಪಹನೂ ತನ್ನ ಕಡೆಯವರನ್ನು ಬಹಳವಾಗಿ ಪ್ರೋತ್ಸಾಹಿಸುತ್ತಾ ಮಹಮ್ಮದೀಯ ಸೈನ್ಯವನ್ನು ಒಟ್ಟುಗೂ ಡಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಆದರೆ ರನಮತ್ತರಾಗಿದ್ದ ವಿಜಯ ನಗರದ ಸೈನಿಕರ ಇದಿರಿಗೆ ಬಿಜಾಪುರದ ಸೈನ್ಯವು ನಿಲ್ಲಲು ಯತ್ನಿಸಲಿಲ್ಲ. ಇಷ್ಟರಲ್ಲಿ ಕೃಷ್ಣದೇವರಾಯರ ಸೈನ್ಯವು ಆದಿಲ್‌ಪಹನನ್ನು ಮುತ್ತಿ ಕೊಂಡುಬಿಟ್ಟಿತು. ಇದನ್ನು ಕಂಡುಕೊಂಡು ಪ್ರಭುಭಕ್ಕಪರಾಯಣರಾದ ಕೆಲವರು ಮಹಮ್ಮದೀಯ ಸರದಾರರು ತಮ್ಮ ಜೀವದ ಹಂಗನ್ನು ತೊರೆದು ಅತಿ ರಭಸದಿಂದ ಹೋರಾಡುತ್ತಾ, ಆದಿಲ್‌ಪಹನನ್ನು ಸುತ್ತಿಕೊಂ ಡಿದ್ದ ಸೈನ್ಯವನ್ನು ಚದರಿಸಿದರು. ಇದೇ ಸಮಯವೆಂದು ಆದಿಲ್‌ಪಹನು ಒಂದು ಆನೆಯನ್ನು ಹತ್ತಿ ತಲೆತಪ್ಪಿಸಿಕೊಂಡು ಕೃಷ್ಣಾ ನದಿಯನ್ನು ದಾಟಿ ಹಿಂದಕ್ಕೆ ಹೋದನು. ಶೂರರಾದ ಆಮಹಮ್ಮದೀಯ ಸರದಾರರು ತಮ್ಮ ಕಡೆ ಯವರಿಗೆ ಪ್ರೋತ್ಸಾಹಿಸುತ್ತಾ ಯುದ್ಧ ಮಾಡುತ್ತಲೇ ಇದ್ದರು, ಆದರೆ ಹೀಗೆ ಬಹಳ ಕಾಲ ನಡೆಯಲು ಸಾಧ್ಯವಾಗಲಿಲ್ಲ. ಆದಿಲ್‌ಪಹನು ಹಿಂದಕ್ಕೆ ಹೋದುದನ್ನು ಕಂಡು ಸಾಧಾರಣಸೈನಿಕರು ತಾವೂ ಹಾಗೆಯೇ ಮಾಡು ವುದು ಒಳ್ಳೆಯದೆಂದು ಸಮಯ ನೋಡುತ್ತಿದ್ದರು, ಮತ್ತೆ ಕೆಲವರು ಶೂರರು ಅತ್ತಿತ್ತ ಅಲುಗುವುದಕ್ಕೆ ಸಾಧ್ಯವಿಲ್ಲದೆ ನಿರಾಶೆಯಿಂದ ತಮ್ಮ ಶಕ್ತಿ ಯನ್ನೆಲ್ಲಾ ವಿನಿಯೋಗಿಸಿ ಯುದ್ಧ ಮಾಡುತ್ತಲೇ ಇದ್ದರು. ಹಲವರು ಹೇಡಿಗಳು ತಮ್ಮ ದೊರೆಯೇ ಓಡಿಹೋಗಿರುವಾಗ ತಾವು ಮಾತ್ರ ಹಿಂದೆ ನಿಂತು ಶತ್ರುಗಳ ಕೈಗೆ ಸಿಕ್ಕಬೇಕಾಯಿತಲ್ಲಾ ಎಂದು ಬಗೆಬಗೆಯಾಗಿ
ಪುಟ:ರಾಯಚೂರು ವಿಜಯ ಭಾಗ ೧ .djvu/೨೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.