ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ಕರ್ಣಾಟಿಕಗ್ರಂಥಮಾಲೆ ನನ್ನ ಕತ್ತಿಯ ರುಚಿಯನ್ನು ತೋರಿಸುವೆನು.” ಎಂದು ಮುಂದಕ್ಕೆ ನುಗ್ಗಿ ತಡೆದನು. “ ಅಯ್ಯಾ, ಹೊಸಬರು ಯಾರೂ ಅಲ್ಲ-ನಾನು ದುರ್ಗಾಧ್ಯಕ್ಷನು? ಎಂದು ಆ ಪುರಷನು ಹೇಳಿದನು. ವಾಸ್ತವವಾಗಿಯ ದುರ್ಗವನ್ನು ಯಾರು ಯಾರು ಹೇಗೆಹೇಗೆ ರಕ್ಷಿ ಸುತ್ತಿರುವರೆಂದು ಪರೀಕ್ಷಿಸಲು ತೋಫಖಾನನೇ ಪರೀಕ್ಷಿಸುತ್ತಾ ಆ ಸ್ಥಳಕ್ಕೂ ಬಂದಿದ್ದನು. ಈ ಮಾತುಗಳನ್ನು ಕೇಳಿ ಆ ದ್ವಾರಪಾಲಕನು ಭಯಾತಿಶಯದಿಂದ ಗಡಗಡನೆ ನಡುಗುತ್ತಾ ಆತನ ಕಾಲಿಗೆಬಿದ್ದು, ಅಪರಾಧವನ್ನು ಕ್ಷಮಿಸ ಬೇಕೆಂದು ಕೇಳಿಕೊಂಡನು. ಆಗ ಖಾನನು “ ಅಯ್ಯಾ ! ಯಾಕೆ ಹೀಗೆ ಕೇಳಿಕೊಳ್ಳುವೆ. ನಿನ್ನ ಕರ್ತವ್ಯವನ್ನು ನೀನುಮಾಡಿದೆ ಅದಕ್ಕೆ ಕೋಪ ವೇಕೆ? ಈ ದುರ್ಗದಲ್ಲಿರುವ ಸ್ತ್ರೀಯರು ಸುರಕ್ಷಿತರಾಗಿರುವರಷ್ಟೆ, ಇಲ್ಲಿಗೆ ಕಲವರು ರಾಜದ್ರೋಹಿಗಳು ಬಂದಿರುವರಂತೆ, ಎಚ್ಚರದಿಂದಿರು ” ಎಂದು ಹೇಳಿದನು. “ ಮಹಾಪ್ರಭು, ನಾನು ಬಹಳ ಜಾಗರೂಕನಾಗಿರುವೆನು, ಈಗ ಸ್ಪಲ್ಪ ಹೊತ್ತಿಗೆ ಹಿಂದೆ ಮಾಲತಿಯು ನನಗೆ ತಮ್ಮ ಉಂಗುರವನ್ನು ತೋ ರಿಸಿ ಹೊರಕ್ಕೆ ಹೋದಳು. ಅವಳು ಇನ್ನೂ ಬಂದಿಲ್ಲ, ತಮ್ಮ ಪರಿಚಾರಿ ಕೆಯು ಎಂದಿನಂತೆ ಆಹಾರಪದಾರ್ಥಗಳನ್ನು ಕೊಟ್ಟು ಈಗತಾನೆ ಇತ್ತ ಕಡೆ ಹೋದಳು.” ತೋಫಖಾನನು ಅನಂಗಸೇನೆಯನ್ನು ನೋಡುವುದಕ್ಕೆ ಹೋದಾ ಗೆಲ್ಲಾ ಮಾಲತಿಯು ಇದಿರಿಗೆ ಇರುತ್ತಿದ್ದುದರಿಂದ ಅನಂಗಸೇನೆಯನ್ನು ಚೆನ್ನಾಗಿ ನೋಡುವುದಕ್ಕಾಗಲಿ ಆಕೆಯೊಡನೆ ಬಂದು ಮಾತನ್ನಾದರೂ ಆಡುವುದಕ್ಕಾಗಲಿ ಅವಕಾಶವೇ ಇರುತ್ತಿರಲಿಲ್ಲ. ಆದುದರಿಂದ ಮಾಲತಿಯು