೧೭೮ ಕರ್ಣಾಟಕಗ್ರಂಥಮಾಲೆ ೬ ಟಿ « ವಿವಾಹವು ವ್ಯವಸ್ಥೆಯಾದಂತೆಯೇ, ಉದಯಗಿರಿ ದುರ್ಗಾಧೀಶನ ಕುಮಾರಿಯನ್ನು ಮದುವೆಯಾಗುವೆನು.” 64 ಆಕೆಯು ವಿಜಯಸಿಂಹನನ್ನು ಮದುವೆಯಾಗುವಳ೦ದು ಕೇಳಿ ದೈವಲ್ಲಾ! " “ ಆಕೆಗೆ ವಿಜಯಸಿಂಹನ ಹೆಸರನ್ನು ಕೇಳಿದರೂ ಆಗದು, ಹೀಗಿ ರುವಲ್ಲಿ ಅವನನ್ನು ಮದುವೆಯಾಗುವುದು ಹೇಗೆ ? ೨೨ << ಆ ಯುವತಿಯು ನಿನಗೆ ಲಭಿಸಿದರೆ ನೀನೇ ಬಹಳ ಅದೃಷ್ಟಶಾಲಿ. ಬಹಳ ಹೊತ್ತಾಯಿತು : ಏಳು: ಊಟಮಾಡು, ಎಂದು ಅವನನ್ನು ಎಬ್ಬಿಸಿ ಬಡಿಸಿದಳು, ಊಟವಾದಮೇಲೆ ಆಕೆಯು ತೋರಿಸಿದ ಒಂದು ಕೊಠಡಿ ಯಲ್ಲಿ ಸುಖವಾಗಿ ನಿದ್ದೆ ಮಾಡುತ್ತಿದ್ದನು. ಸ್ವಲ್ಪ ಹೊತ್ತು ಕಳೆದ ಬಳಿಕ ಆ ಗೃಹಾಧಿಪತಿಯು ಅಲ್ಲಿಗೆ ಬಂದನು. ಅವನಿಗೂ ಆ ನೀಗೂ ಈ ಮುಂದೆ ಹೇಳುವಂತೆ ಸಂಭಾಷಣೆ ನಡೆಯಿತು:- ಶಂಕರರೆಡ್ಡಿ-“ ಪ್ರಿಯೆ! ಇದೇನು ಇಷ್ಟು ಸಂತೋಷದಿಂದಿರುವೆ? ಏನಾದರೂ ಶುಭವರ್ತಮಾನವಿದ್ದರೆ ಬೇಗ ತಿಳಿಸು.೨೨ ಮಾಲತಿ- ಪ್ರಿಯರೇ! ಅದನ್ನೆಲ್ಲ ಹೇಳುವುದಕ್ಕೆ ಬರುತ್ತಿದ್ದೇನೆ. ಪಕ್ಷಿಯು ಸಿಕ್ಕಿಹೋಯಿತು. ಯಾವುದನ್ನು ಹಿಡಿಯಬೇಕೆಂದು ಯೋಚಿ ಸುತ್ತಿದ್ದೆವೋ ಆ ಪಕ್ಷಿ ಯು ತಾನಾಗಿಯೇ ಬಂದು ಸಂಜರವನ್ನು ಸೇರಿ ಕೊಂಡಿದೆ.೨೨ ಶಂ-“ ಮತ್ತೂ ಒಳ್ಳೆಯದೇ ಆಯಿತು.) ಈ ಸಂಭಾಷಣೆಯು ನಡೆಯುತ್ತಿದ್ದಾಗ ಅಲ್ಲಿಗೆ ರಾಮರಾಜನು ಬಂದನು. ಅವನನ್ನು ಶಂಕರರೆಡ್ಡಿಯು, ನೋಡಿ ( ವಿಶೇಷವೇನಾದರೂ ಉಂಟೆ ? 99 ಎಂದು ಕೇಳಿದನು. ತಿ C ೧
ಪುಟ:ರಾಯಚೂರು ವಿಜಯ ಭಾಗ ೧ .djvu/೩೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.