ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೫ ರಾಯರು ವಿಜಯ ಬಹಳ ಕಾಲದವರೆಗೂ ಆದಿನ ಪ್ರಯೋಜನವೇನೂ ಆದಂತೆ ತೋರಲಿಲ್ಲ. ಆಗ ರಾಯರು ಮದಿಸಿದ ಆನೆಗಳ ಮೂಲಕ ದುರ್ಗದ್ವಾರವನ್ನು ಒಡೆಯಿಸು ವಂತೆ ಆಜ್ಞಾಪಿಸಿದರು, ಆ ಆನೆಗಳು ತಮ್ಮ ಕುಂಭಗಳಿಂದ ಆ ದ್ವಾರಗಳ ನ್ನು ರಭಸವಾಗಿ ಬಡಿಯುತ್ತಿದ್ದುವು. ಆ ಬಾಗಿಲುಗಳಿಗೆ ಚೂಪಾದ ಮೊಳ ಗಳನ್ನು ಕೊಡಿಸಿದ್ದುದರಿಂದ ಒಂದುಸಾರಿ ಪ್ರಯತ್ನಿಸಿದ ಆನೆಗಳು ಎಷ್ಟು ಪ್ರೋತ್ಸಾಹಿಸಿದರೂ ಇನ್ನೊಂದು ಸಾರಿ ಪ್ರಯತ್ನಿಸುತ್ತಿರಲಿಲ್ಲ. ಆದುದರಿಂದ ಆನೆಗಳಿ೦ದಲೂ ದುರ್ಗದ ಬಾಗಿಲನ್ನು ಒಡೆಯುವುದಕ್ಕೆ ಆಗಲಿಲ್ಲ. ಈ ಮೇರೆಗೆ ಇಪ್ಪತ್ತು ದಿನಗಳವರೆಗೆ ಮುತ್ತಿಗೆಯು ನಡೆಯಿತು. ಆದರೂ ಪ್ರಯೋಜನವಾಗಲಿಲ್ಲ.ಆಗ ಫೋರುಗೀಸರ ಕಡೆಯವನಾದ ಕ್ರಿಸ್ಟ್ ವಿಡಿ ಗರೀಡೋ ಎಂಬಾತನು ರಾಯರ ಅಪ್ಪಣೆಯನ್ನು ಪಡೆದು ದುರ್ಗದ ಗೋಡೆ ಯಲ್ಲಿ ಕನ್ನಹಾಕಿಸಬೇಕೆಂದು ನುಗ್ಗಿದನು.) ಸೈನಿಕರು ಪರಮೋತ್ಸಾಹ ದಿಂದ ಕನ್ನವನ್ನು ಕರೆಯಲಾರಂಭಿಸಿದರು, ಆದರೆ ಕೋಟೆಯೊಳಗಿದ್ದ ವರು ಆ ಸೈನಿಕರ ಮೇಲೆ ಅಗ್ನಿವೃಷ್ಟಿಯನ್ನು ಎಡೆಬಿಡದೆ ಉಂಟುಮಾಡಿ ದರು, ಮೈ ಸುಟ್ಟವರು ಹಿಂದಕ್ಕೆ ಹೋದರೆ ಅವರ ಸ್ಥಾನವನ್ನು ಆಕ್ರಮಿ ಸಿಕೊಳ್ಳಲು ಮತ್ತೆ ಕೆಲವರು ಹಿಂದಿನಿಂದ ನುಗ್ಗಿ ಬರುತ್ತಿದ್ದರು. ರಾಯರ ಸೈನಿಕರಲ್ಲಿ ಕೆಲವರು ಬಿಲ್ಲು ಬಾಣಗಳನ್ನು ಧರಿಸಿ ಗೋಡೆಯ ಮೇಲಕ್ಕೆ ಬಂದವರನ್ನು ಬಾಳಿಗಳಿಂದ ನೋಯಿಸುತ್ತಾ ತನ್ನ ಕಡೆಯವರಿಗೆ ಸಹಾಯ ಮಾಡುತ್ತಿದ್ದರು, ಆದುದರಿಂದ ದುರ್ಗದ ಇತರ ಭಾಗಗಳಲ್ಲಿದ್ದವರೂ ಕನ್ನ ಕೊರೆಯುತ್ತಿದ್ದವರನ್ನು ಅಡ್ಡಿಪಡಿಸಬೇಕೆಂದು ಬರುತ್ತಿದ್ದರು. ಈ ಸಮಯದಲ್ಲಿ ವಿಜಯಸಿಂಹನು ರಾಮರಾಜಾದಿಗಳ ಸಹಾಯ ದಿಂದ ಉನ್ನತವಾದ ಏಕೆಯೊಂದನ್ನು ತರಿಸಿ ಬೇರೊಂದು ಪಕ್ಕದಲ್ಲಿ ಹಾಕಿ ಕೊಂಡು ಮೇಲೆ ಕತ್ತು ಯೋಧರು ಪ್ರತಿಭಟಿಸುತ್ತಿದ್ದರೂ ಲೆಕ್ಕಿಸದೆ ಉದ್ದವಾದ ಒಂದು ಬಣ್ಣಿಯದಿಂದ ಮೇಲಿದ್ದವರನ್ನು ಚುಚ್ಚಿ ಕೆಡವುತ್ತು ೧