ಕಾಯುವಿಜಯ ೨ರಿಗೆ ರಾಗ ನನ್ನ ಅನುಚರರಿಗೆ ಅಗ್ನಿಯನ್ನು ಮಾಡಿದುದರಿಂದಲೂ, ನನ್ನ ಹಿತನಾದ ರುದ್ರದೇವನಿಗೆ ಮುಕ್ತಾಂಬೆಯನ್ನು ಕೊಡಿಸಿ ಮದುವೆಮಾಡಿಸಬೇಕೆಂದಿದ್ದು ದರಿಂದಲೂ ವಿಜಯಸಿಂಹನನ್ನು ಕೊಲ್ಲಿಸಲು ಅತ್ಯಂತ ಸನ್ನಾ ಹಗಳನ್ನು ಮಾಡಿ ದೆನು, ಈ ಕಾಠ್ಯಗಳಲ್ಲಿ ಯಾವುದನ್ನೂ ಬ್ರಾಹ್ಮಣನಾದ ನಾನು ಮಾಡಬಾ ರದು, ಆದರೂ ನನ್ನನ್ನು ರಾಜಭಕ್ತಿಯು ಆದೇಶಿಸಿದ್ದುದರಿಂದ, ಈ ಕಾರ್ಯ ಗಳಿಗೆ ಕೈಹಾಕಿದೆನು. ಇವೆಲ್ಲವೂ ದುಷ್ಟ ಕಾಠ್ಯಗಳೇ ಆಗಿದ್ದರೂ ರಾಜ ಭಕ್ತಿಯ ಆವೇಶವನ್ನು ಹೊಂದಿದ್ದ ನಾನು ಮದೋನ್ಮತ್ತನಾಗಿ ಮಾಡಿದೆನು. ಇದಕ್ಕೆ ಮುಖ್ಯ ಕಾರಣವು ರಾಜಭಕ್ತಿಯೆ ಎಂದು ಭಾವಿಸಿ, ತಮ್ಮನ್ನು ಯಾಚಿಸಿದ್ದರೆ ರಾಜ್ಯಕ್ಕೆ ನನಗೇನೂ ಕಡಿಮೆ ಇರುತ್ತಿರಲಿಲ್ಲ. ವೇದಕಾಸ್ತ್ರ ಪುರಾಣಾದಿಗಳನ್ನು ರಕ್ಷಿಸುವ ಸಳುಗಳಾದ ತಮ್ಮನ್ನು ಆಶ್ರಯಿಸಿದ್ದರೆ, ನಮ್ಮ ರಾಜ್ಯವೇನೋ ನನಗೆ ಬುತ್ತಿತ್ತು, ಆದರೆ ಪ್ರಾರ್ಥನಾಲಭ್ಯವಾದ ರಾಜ್ಯಕ್ಕಿಂತಲೂ ಏರುಪಲಭ್ಯವಾದುದೇ ಒಳ್ಳೆಯದೆಂದು ಯೋಚಿಸಿದೆನು. ತಮ್ಮನ್ನು ಆಶ್ರಯಿಸುವುದಕ್ಕಿಂತಲೂ ವಿಮತಸ್ಥರಾದ ಮೈಕ್ಷರನ್ನು ಆಶ್ರ ಯಿಸುವುದು ಒಳ್ಳೆಯದೆಂದೇ ನನಗೆ ಶೇ.೧೭ರುತ್ತಿತ್ತು, ಇಷ್ಟು ಅಸತ್ಕಾರಗ ಇನ್ನೂ ನಮ್ಮ ರಾಜಕುಟುಂಬದ ಒಕ್ಷ್ಮೀಕಾಗಿ ಮಾಡಿದುದರಿಂದ ನನಗೆ ಸ್ವಲ್ಪವಾದರಣ ವ್ಯಸನವಿಲ್ಲ ಎಂದು ಗಂಭೀರವಾದ ಧ್ವನಿಯಿಂದ ಹೇಳಿದನು. ಈ ಮಾತುಗಳನ್ನು ಕೇಳಿ ಸಭಾಸದರೆಲ್ಲರೂ ಆಶ್ಚಗೃಪಡುತ್ತಿದ್ದರು. ಚಕ್ರವರ್ತಿಯವರೂ ತಮ್ಮ ಆಸನ ರಾಮ ಯನ ರಾಜಭಕ್ತಿಯನ್ನೂ ಅಧ್ಯವಸಾಯವನ್ನೂ ನಾಗೋರಣೆಯನ ಕಂಡು ಬಹಳ ಸಂತೋಷ ಪಟ್ಟರು. ಆಗ ತಿಮ್ಮರಸನು ಎದ್ದು ನಿಂತು ರಾಮಯಾಮಾತ್ಯರೇ ! ನೀವು ಸನ್ನ ವಿಷಯದಲ್ಲಿ ಶತ್ರುತ್ವವನ್ನು ಆಚರಿಸಿದರೂ ನಿಮ್ಮ ವಿಷಯದಲ್ಲಿ ನನಗೆ ಒಂದು ಬಗೆಯ ಸಂತೋಷವೆ: ಇರುವುದು, ಅನೇಕ ವರ್ಷಗಳಿಂದಲೂ ಮಂತ್ರಿ ಸ್ಥಾನದಲ್ಲಿದ್ದು ಬಹಳ ಅನುಭವವನ್ನು ಸಂಪಾದಿಸಿಕೊಂಡಿದ್ದ
ಪುಟ:ರಾಯಚೂರು ವಿಜಯ ಭಾಗ ೧ .djvu/೩೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.