೩೪ ರಾಯಚಿರುವಿಜಯ wwwx ಕೊಳ್ಳುವುದಕ್ಕೋಸ್ಕರ ಅವರು ಇಲ್ಲಿಗೆ ಬಂದಿರುವರಂತೆ, ನಮ್ಮ ರಾಜ ಕುಮರಿಗಳಿಗೂ ಆ ಯುವತಿಗೂ ಪ್ರಾಣಸ್ನೇಹವೆಂದು ಹೇಳಿಕೊಳ್ಳುವರು.” ವಿಜಯಸಿಂಹನು ಈ ಮಾತುಗಳನ್ನು ಕೇಳಿ ಏನೇನನ್ನೂ ಯೋಚಿಸಿ ಕೊಳ್ಳುತ್ತಿರಲು ಪುನಃ ಆ ಸಂಗೀತಧ್ವನಿಯು ಕೇಳಿಸಿತು, ಅದನ್ನು ಕೇಳಿ ವಿಜಯಸಿಂಹನು ಅದು ಯಾರಧ್ವನಿಯೆಂದು ಪ್ರಶ್ನಿಸಲು ಆ ಸೇವಕನು“ ಮಹನೀಯರೇ ! ಅದು ಆ ಯುವತಿಯ ಕಂಠಧ್ವನಿ, ನಮ್ಮ ರಾಜ ಕುಮಾರಿಯವರ ಕಂಠಧ್ವನಿಯ ಸ್ವಲ್ಪ ಹೆಚ್ಚು ಕಡಿಮೆ ಹಾಗೆಯೇ ಇರು ವುದು ; ಆದರೆ ಅವರಿಗೆ ಅಭ್ಯಾಸವು ಹೆಚ್ಚಾಗಿಲ್ಲವಾದುದರಿಂದ ಅವರ ಧ್ವನಿಯು ಇಷ್ಟು ಶ್ರವಣಾನಂದಕರವಾಗಿರಲಾರದು ?” ಎಂದು ಪ್ರತ್ಯುತ್ತರ ಹೇಳಿದನು. ವಿಜಯಸಿಂಹನು ಆ ಮಾತನ್ನು ಕೇಳಿ ಆ ಗಾನಸುಖವನ್ನು ಮತ್ತೊಮ್ಮೆ ಅನುಭವಿಸಬೇಕೆಂದು ಬಯಸಿದನು, ಆದರೆ ಪುನಃ ಗಾನವು ಕೇಳಿಸಲಿಲ್ಲ. ಅಷ್ಟು ಹೊತ್ತಿಗೆ ರಾತ್ರಿಯ ಮೊದಲನೆಯ ಜಾವವು ಕಳೆದುಹೋಗಿದ್ದಿತು. ಸೇವಕನು ನಿದಾವಶನಾದನು. ವಿಜಯಸಿಂಹನಿಗೆ ಮಾತ್ರ ನಿದ್ದೆ ಹತ್ತಲಿಲ್ಲ. ಆತನ ಮನಸ್ಸು ದೀರ್ಘಾಲೋಚನಾಮಗ್ನವಾಗಿದ್ದಿತು, ಹೀಗಿರುವಲ್ಲಿ ಆತನಿಗೆ ನಿದ್ರೆಯು ಹೇಗೆ ಹಿಡಿದೀತು ? ಸ್ತ್ರೀಯ ಕಂಠಧ್ವನಿಯ ಮೂಲಕ ವಿಜಯಸಿಂಹನಿಗೆ ತಾನು ಪೂರದಲ್ಲಿ ಒಲಿದಿದ್ದ ಯುವತೀಮಣಿಯ ಜ್ಞಾಪಕವು ಬರಲು ಆಕೆಯನ್ನು ಕುರಿತು ಏನೇನನ್ನೋ ಯೋಜಿಸಿಕೊಳ್ಳುತ್ತಾ ಅತಿ ಕಷ್ಟದಿಂದ ಆ ರಾತ್ರಿಯನ್ನು ಕಳದನು, ಬೆಳಗಾದಮೇಲೆ ಆತನು ಕಯ್ಯಾತಲವನ್ನು ಬಿಟ್ಟು ನಿತ್ಯ ಕೃತ್ಯಗಳನ್ನು ನೆರವೇರಿಸಿ ಕುಳಿತುಕೊಂಡು, ಆ ಯುವತೀ ಮಣಿಯ ವಿಷಯವಾಗಿ ಸೇವಕನನ್ನು ಕೇಳಿ ಹೆಚ್ಚು ಸಂಗತಿಗಳನ್ನು ತಿಳಿದುಕೊಳ್ಳಬೇಕೆಂದು ಯೋಚಿಸಿದನು, ಆದರೆ ಇದರಿಂದ ಏನಾದರೂ ಅಖಾಯವಾದೀತೆಂದು ಸುಮ್ಮನಾದನು. ಹೀಗೆ ದೊ೪ಂದೊಳಿತಮಾನಸ ನಾಗಿ, ಕಡೆಗೆ ಸೇವಕನ ಸಹಾಯವನ್ನು ಪಡೆದು ಆ ಆರಾಮದಲ್ಲಿ ಸ್ವಲ್ಪ ಕಾಲ ತಿರುಗಾಡಬೇಕೆಂದು ಉದ್ಯಾನವನವನ್ನು ಪ್ರವೇಶಿಸಿ ಅಲ್ಲಿ ಸುತ್ತಾಡು ತಿದ್ದನು. ಸ್ವಲ್ಪ ಹೊತ್ತಿನಲ್ಲಿಯೇ ಆ ಸೌಧದ ಮೇಲ್ಬಾಗದಲ್ಲಿ ಸಂಚರಿಸು
ಪುಟ:ರಾಯಚೂರು ವಿಜಯ ಭಾಗ ೧ .djvu/೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.