೩೬ ರಾಯರುಪಿಚಯ ಆ ಕಾಗದವನ್ನು ಓದಿಕೊಂಡ ಬಳಿಕ ವಿಜಯಸಿಂಹನಿಗೆ ಆದ ಆನಂದ ವನ್ನು ವರ್ಣಿಸಲು ಶಕ್ಯವಲ್ಲ. ಯಾವ ಏಕಾಂಕ್ಷಿಯೆಂಬ ಸುಕ್ಷೇತ್ರದಲ್ಲಿ ಅನುರಾಗಬೀಜವು ಹಿಂದೆಯೇ ಆವಾಪನವಾಗಿ ಕ್ರಮಕ್ರಮವಾಗಿ ವರ್ಧಿಸು ತಿದ್ದು ಆಪದಾ ತೂಲದಿಂದ ಉನ್ನೂರಿತವಾಗಿದ್ದಿತೋ, ಆ ಅನುರಾಗಬಾಲ ತರುವು ಈ ಪತ್ರದ ದೆಸೆಯಿಂದ ಪುನಃ ರೂಢಮಲವಾಯಿತು. ಆದುದ ರಿಂದ ವಿಜಯಸಿಂಹನು ಆ ಪತ್ರಿಕೆಯನ್ನು ಪುನಃ ಪುನಃ ಓದಿಕೊಂಡು ಸಂತು ಸ್ವಸಂತನಾಗಿದ್ದನು, ಸಾರಭೌತುರಿಂದ ತನಗೆ ಆದ ಗೌರವಕ್ಕೂ, ಚಿರ ಕಾಲದಿಂದ ಕೇಳಬೇಕೆಂದಿದ್ದ ತನ್ನ ಪ್ರೇಯಸಿಯ ವೃತ್ತಾಂತವು ತಿಳಿದು ದಕ್ಕೂ ಒಂದು ಕ್ಷಣದಲ್ಲಿ ಸಂತೋಷವನ್ನು ಅನುಭವಿಸುತ್ತಲೂ ಮರು ಕ್ಷಣದಲ್ಲಿ ತನ್ನ ಪ್ರಿಯೆಯು ತನ್ನ ಸವಿಾಪಕ್ಕೆ ಬಂದಿದ್ದಾಗಲಾದರೂ ಅಕ ಯನ್ನು ಕಣ್ಣಾರನೋಡಲು ಆಗದಿದ್ದುದಕ್ಕಾಗಿ ಪಶ್ಚಾತ್ತಾಪವನ್ನು ಪಟ್ಟು ಕೊಳ್ಳುತ್ತಲೂ ಇದ್ದನು. ಇರು. ನಾಲ್ಕನೆಯ ಪ್ರಕರಣ ಆನೆಗೊಂದಿ, ರಾತ್ರಿರ್ಗಮಿಷ್ಯತಿ ಭವಿಷ್ಯತಿ ಸುಪ್ರಭಾತಂ || ಭಾಸ್ವಾನು ದೇಷ್ಯತಿ ಹಸಿಷ್ಯತಿ ಪಜಂ ಚ || ಇತ್ಥಂ ವಿಚಿನ್ತಯತಿ ಕೋಶಗತೇ ದ್ವಿರೇಥೇ | ಹಾ ! ಹಂತ ! ಹಂತ ! ನಲನೀಂ ಗಜ ಉಜ್ಜಹಾರ | ದಕ್ಷಿಣ ಹಿಂದೂಸ್ತಾನದಲ್ಲಿ ಕಾಕತೇಯವಂಶದ ದೊರೆಗಳಿಗೆ ರಾಜ ಧಾನಿಯಾಗಿದ್ದ ಓರುಗಲ್ಲಿನ ವೈಭವವು ತಗ್ಗಿದ ಬಳಿಕವೂ, ವಿಜಯನಗರದ ವಿಭವವು ವೃದ್ಧಿ ಹೊಂದುವುದಕ್ಕಿಂತ ಹಿಂದೆಯ, ಪ್ರಖ್ಯಾತಿಯನ್ನು ಪಡೆ ದಿದ್ದ ನಗರವು ಆನೆಗೊಂದಿಯು, ಕೆಲವರು ಇತಿಹಾಸಲೇಖಕರು ಈ ಆನೆ ಗೊಂದಿಯೇ ಪೂರ ಕಾಲದಲ್ಲಿ ವಾಲಿಸುಗ್ರೀವರು ಇದ್ದ ಕಿಕ್ಕಿಂಧಾ ಪಟ್ಟಣ
ಪುಟ:ರಾಯಚೂರು ವಿಜಯ ಭಾಗ ೧ .djvu/೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.