ಕಾಯರುಎಜಯ ೬೫ ಪುರುಷ~* ನನ್ನನ್ನು ಮರೆತುಬಿಟ್ಟೆಯೇನು ? ನಾನು ಪ್ರಹರೇಶ್ವರ ಕತ್ರನು. ಇದೇನು ! ನೀನು ಎಲ್ಲಿಂದ ಬರುತ್ತಿದ್ದೀಯ ? ಎಲ್ಲಿ ಇಳಿದು ಕೊಂಡಿರುವೆ? ಈ ಹೊತ್ತು ಇಷ್ಟು ಸುದಿನವೆಂದು ನಾನು ನಂಬಿರಲಿಲ್ಲ. `ನೀನು ನಮ್ಮ ಊರಿಗೆ ಬಂದರೂ ನನ್ನನ್ನು ನೋಡದೆಯೇ ಹೊರಡುತ್ತಿ ರುವೆಯಲ್ಲಾ ! ವಿಜಯ- ಪಹರೇಶ್ವರಪುತ್ರರೇ ! ತಮ್ಮ ಸಂದರ್ಶನಕ್ಕಾಗಿಯೆ ಇಲ್ಲಿಗೆ ಬಂದುದು, ತಾವು ಮನೆಯಲ್ಲಿ ಇಲ್ಲದಿದ್ದುದರಿಂದ ವಿಜಯನಗರಕ್ಕೆ ಹಿಂದಿರುಗಿ ಹೋಗುತ್ತಿದ್ದೆನು, ಈಗಲಾದರೂ ತಮ್ಮ ದರ್ಶನಲಾಭವಾದುದ ರಿಂದ ಅತ್ಯಂತ ಸಂತುಷ್ಟನಾದೆನು, ಮತ್ತೊಂದುಸಾರಿ ಇಲ್ಲಿಗೆ ಬಂದು ಸಾವಕಾಶವಾಗಿ ತನ್ನೊಡನೆ ಮಾತನಾಡುವೆನು. ಈಗ ನನಗೆ ಅಪ್ರಣೆ ಯಾಗಲಿ, ಹೋಗಿಬರುವೆನು. " ಪ್ರಹರೇ-“ ಇದೇನು ! ಈ ಹೊತ್ತು ಹೊಸ ವಿಷಯವನ್ನು ಕೇಳು ಅದೇನೆ! ಇಷ್ಟರಲ್ಲಿಯೇ ನಾವು ದೂರದವರಾದೆವೋ ? ನಿಮ್ಮ ತಂದೆಯು ನನಗೆ ಪರಮಾಪ್ತನು. ನಮ್ಮಿಬ್ಬರ ಪರಸ್ಪರಮನೋಧಮ್ಮಗಳು ಹೇಗಿದ್ದು ಬೆಂಬುದನ್ನು ಆ ಭಗವಂತನೇ ಬಲ್ಲನು. ಸಾಮಾನ್ಯರಿಗೆ ಎಂದಿಗೂ ತಿಳಿಯ ಲಾರವು, ನನ್ನ ಆ ಮಿತ್ರನು ಕಾಲಧರವನ್ನು ಹೊಂದಿದ ಸಮಾಚಾರವನ್ನು ಕೇಳಿದಾಗ ನನಗೆ ಆದ ವ್ಯಥೆಯು ಆ ಭಗವಂತನಿಗೇ ಅರ್ಪಿತವು, ನನ್ನ ಆಪ್ತ ಮಿತ್ರನ ಮಗನಾದ ನಿನ್ನನ್ನು ಕಂಡು ಈ ದಿನ ನನಗೆ ಪರಮಸಂತೋಷ ವಾಯಿತು, ಇದರಮೇಲೆ ನನ್ನನ್ನು ನೋಡುವುದಕ್ಕೆ ಬಂದಿರುವೆಯಾದುದ ರಿಂದ ನನ್ನ ಮನಸ್ಸಿಗೆ ಸಂತೋಷವನ್ನುಂಟುಮಾಡು, ಬಂಧುಕೋಟೆಯಲ್ಲಿ ಒಬ್ಬನಾಗಿರುವ ನೀನು ಇಷ್ಟು ಹೊತ್ತಿನಮೇಲೆ ಹಾಗೆಯೇ ಹೊರಟ್ಟ ಹೋಗುವುದು ಉಚಿತವಲ್ಲ ; ಬಂದು ನನ್ನ ಆತಿಥ್ಯವನ್ನು ಅಂಗೀಕರಿಸಿ ನನ್ನ ಮನಸ್ಸಿಗೆ ತೃಪ್ತಿಯನ್ನುಂಟುಮಾಡಪ್ಪಾ ! ) ವಿಜಯು-“ ಮಹನೀಯರೇ ! ತಮ್ಮ ಅಮೃತೋಪಮವಾದ ಮಾತು ಗಳಿಂದ ಅತ್ಯಂತ ಸಂತುಷ್ಟನಾಗಿರುವೆನು. ತಾವು ಮಾಡುವ ಉಪಚಾರಗಳು ತಮ್ಮ ಮಧುರವಾಕ್ಯಗಳನ್ನು ತೃಪ್ತಿಯನ್ನುಂಟುಮಾಡಲಾರವು. ಇದ ರಿಂದಲೇ ನನಗೆ ತೃಪ್ತಿಯಾಯಿತು, ನನಗಿರುವ ಕಾರಭಾರದಿಂದ ಇಲ್ಲಿ
ಪುಟ:ರಾಯಚೂರು ವಿಜಯ ಭಾಗ ೧ .djvu/೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.