రియు రువిజయ ೬೩ ಕಾಯಕವಾಚಕವ್ಯಾಪಾರಗಳಿಗೆ ತಡೆಯನ್ನು ಕಲ್ಪಿಸಬಹುದು; ಮಾನಸಿಕ ಪ್ರವೃತ್ತಿಗೆ ನಿರೋಧವನ್ನುಂಟುಮಾಡುವುದಕ್ಕೆ ಮನುಷ್ಯನಿಂದ ಸಾಧ್ಯವಲ್ಲ. ವಿಜಯಸಿಂಹನು ಈ ಅವಸ್ಥೆಯಲ್ಲಿದ್ದಾಗ ಅವನ ಮನಃಪ) ವೃತ್ತಿಯು ಸ್ಪೇಚ್ಛೆಯಾಗಿ ವರ್ತಿಸತೊಡಗಿತು. ಹಿಂದೆ ಅಷ್ಟು ಹಿತಚಿಂತಕ ನಂತ ತೋರ್ಪಡಿಸಿಕೊಂಡಿದ್ದ ದುರ್ಬುದ್ಧಿ ಯು, ಆಪತ್ಕಾಲದಲ್ಲಿ ತಲೆ ಮರೆಸಿಕೊಳ್ಳುವ ಕಸಟಸ್ನೇಹಿತನಂತೆ, ತಲೆದೋರಿಸದೆ ಹೋಯಿತು. ಮುಕ್ತಾಂಬೆಯ ಮಾತುಗಳನ್ನು ಮಾರಿದುದರಿಂದ ತನಗೆ ಸಂಭವಿಸಿದ್ದ . ಆಪತ್ತಿಗಾಗಿ ಪಶ್ಚಾತ್ತಾಪಪಟ್ಟು ಕೊಂಡು ತನ್ನ ಮೂರ್ಖತನವೇ ತನ್ನ ಸರ್ವ ನಾಶಕ್ಕೆ ಕಾರಣವಾಯಿತಂದು ಅವನು ತಿಳಿದುಕೊಂಡನು. ಸ್ವಯಂಕೃತಾಪ ರಾಧದ ದುಷ್ಪರಿಣಾಮವನ್ನು ಅನುಭವಿಸುವಾಗ ಉಂಟಾಗುವ ದುಃಖಾನುಭ ವವು ಪ್ರಾರಂಭವಾಯಿತು. ಇಷ್ಟರಲ್ಲಿ ರಾಜದ್ರೋಹಿಗಳು ವಿಜಯಸಿಂಹ ನನ್ನು ಸೈನಮಠಕ್ಕೆ ಹೊತ್ತುಕೊಂಡು ಹೋಗಲು ಉದ್ಯುಕ್ತರಾದರು. ಈ ಸಂಗತಿಗಳು ನಡೆದಕಾಲದಲ್ಲಿ ಶಿವಮಠವು ಶಿಥಿಲವಾಗಿದ್ದರೂ, ಆಂಧ್ರದೇಶದಲ್ಲಿ ಶೈವಮತವು ಪ್ರಬಲವಾಗಿದ್ದಾಗ ಮಠವು ಅತ್ಯಂತವೈಭವ • ಆಶ್ರಯಸ್ಥಾನವಾಗಿದ್ದಿತು. ಯಾವ ಮಂದಿರವು ಬಂದಾನೊಂದು ಕಾಲ ದಲ್ಲಿ ಕೈವಾಗಮಜ್ಞರ ಶಾಸ್ತ್ರ ವಿಚಾರಗಳಿಗೂ, ಶೈವಪೂಜಾ ಸಂವಿಧಾನ ಕೋಲಾಹಲಗಳಿಗೂ ಶೈವಪುರಾಣಕಥನಗಳಿಗೂ ಆಸರೆಯಾಗಿದ್ದಿತೂ ಅದೇ ಮಂದಿರವು ಕಾಲಮಾಹಾತ್ಮದಿಂದ ಈಗ ಬಹು ಕಂಟಕಾವೃತ ಗಳಾದ ತರುಲತೆಗಳಿಗೂ, ಮಂಪಿಕಾದಿ ಕ್ಷುದಜಂತುಗಳಿಗೂ, ಫಕ ಜಂಬುಕಾದಿಗಳ ಭಯಂಕರವಾದ ಕೂಗುಗಳಿಗೂ ಆಕರವಾಗಿದ್ದಿತು. ಇಂತಹ ನಿರ್ಜನವಾದ, ಭಯಂಕರಸ್ಥಳದಲ್ಲಿ ತಮ್ಮ ಕೆಲಸವನ್ನು ಕೈ ಗೂಡಿಸಿಕೊಳ್ಳಬೇಕೆಂದು ಅವರು ವಿಜಯಸಿಂಹನನ್ನು ಹೊತ್ತುಕೊಂಡು ಬಂದಿದ್ದರು. ರಾಮಯನು ಇತರರನ್ನು ಸಂಬೋಧಿಸಿ (ಇನ್ನು ನಿರಾತಂಕ ಜಾಗಿ ನಿಮ್ಮ ಹಗೆಯನ್ನು ಚಿತ್ರವಿಚಿತ್ರವಾಗಿ ಪೀಡಿಸಿ ಕೊಂದುಬಿಡಿ” ಎಂಬು ದಾಗಿ ಹೇಳಿದನು. ರಾಮಯನ ಸಂಗಡಿಗರು ಅತ್ಯಂತಹರ್ಷಿತರಾಗಿ ವಿಜಯ ಬಂಕನ ಸುತ್ತಲೂ ನಿಂತು ಹೀಯಾಳಿಸಲಾರಂಭಿಸಿದರು, ಅವರುಗಳಲ್ಲಿ
ಪುಟ:ರಾಯಚೂರು ವಿಜಯ ಭಾಗ ೧ .djvu/೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.