ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಬತ್ತನೆಯ ಪ್ರಕರಣ ಇಂತಹ ಕುವು' ಪುನಃ ಉಳಿದುಕೊಂಡನಲ್ಲಾ ಎಂದು ಅವರ ವ್ಯಸನವು ಮಿತಿಮೀರಿತು, ವಿಜಯಸಿಂಹನು ಧರಿಸಿದ್ದ ಆಭರಣಗಳಲ್ಲಿ ರಾಯರು ಅವ ನಿಗೆ ಕೊಟ್ಟಿದ್ದ ಪದಕವನ್ನು ಪ್ರಹರೇಶ್ವರನು ತೆಗೆದುಕೊಂಡು, ರುದ್ರ ದೇವನನ್ನು ಕುರಿತು ಇಗೋ ! ನಿನಗೆ ನ್ಯಾಯವಾಗಿ ಸಲ್ಲಬೇಕಾಗಿದ್ದ ಪದಕವನ್ನು ಆ ದುರ್ಮಾರ್ಗಿಯು ಅಪಹರಿಸಿದ್ದನು. ಈಗಲಾದರೂ ಅದು ನ್ಯಾಯವಾದ ಭಾಧ್ಯಸ್ಥನಿಗೆ ದೊರೆಯಿತಲ್ಲಾ ಎಂದು ಸಂತೋಷವಾಯಿತು. ಇದನ್ನು ಧರಿಸು " ಎಂದು ಹೇಳಿ ಕೊಟ್ಟನು. ಉಳಿದ ಆಭರಣಗಳನ್ನೂ ಇತರರಿಗೆ ವಿನಿಯೋಗಮಾಡಿದನು. ಆ ರೀತಿಯಲ್ಲಿ ಆದ ಆಕಾಭಂಗವನ್ನು ಮನಸ್ಸಿನಲ್ಲಿಡಬೇಕಾಗಿಲ್ಲವಂತ, ವಿಜಯಸಿಂಹನು ಮತ್ತೊಂದು ವೇಳೆ ತನ್ನ ಕೈಗೆ ಸಿಕ್ಕದೆ ಇರಲಾರನೆಂತಲೂ ರಾಮಯನು ಸಮಾಧಾನ ಮಾಡಿದನು, ಆ ಬಳಿಕ ಅವರೆಲ್ಲರೂ ತಮ್ಮ ತಮ್ಮ ನಿವಾಸಸ್ಥಾನಗಳಿಗೆ ಹೋಗಿ ರಾತ್ರಿಯನ್ನು ಕಳದರು. . ಒಂಬತ್ತನೆಯ ಪ್ರಕರಣ, ಹುಳ ; ಕೂತಿ. ಕ್ವಚಿಃ' ಸೃಫ್ರೀಶಯ್ಯ ಕ್ವಚಿದಪಿ ಚ ಪಠ್ಯಂಕಶಯನಃ | ಕ್ವಚಿತ್ ಶಾಕಾಹಾರಃ ಕ್ವಚಿದಪಿಚ ಶುಲ್ನೋದನರುಚಿಃ || ಕ್ವಚಿತ್ ಕಂಥಾಧಾರೀ ಕ್ವಚಿದಪಿ ಚ ದಿವ್ಯಾಂಬರಧರೋ | ಮನಸ್ವೀ ಕಾತ್ಯಾರ್ಥಿ ಗಣಯತಿ ನ ದುಃಖಂ ನ ಚ ಸುಖಂ || ಭರ್ತ್ನಹರಿ ಸೂಚ್ಯನು ಮಂಡಲಿನಲ್ಲಿ ತಲೆದೋರಿದನು. ಎಳಬಿಸಿಲು ಎಲ್ಲ ದಿಕ್ಕುಗಳಲ್ಲಿಯ ಹರಡಿಕೊಳ್ಳುತ್ತಿದ್ದಿತು, ಸೋಮಾರಿಗಳಲ್ಲದವರೆಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಶರಂಭಿಸುತ್ತಿದ್ದರು. ಈ ಸಮಯದಲ್ಲಿ ವಿಜಯನಗರದ ರಾಜಬೀದಿಯಲ್ಲಿ, ಹಿಂದೆ ನಮಗೆ ಪರಿಚಿತನಾದ ಹುಚ್ಚು