ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ - ವತ್ಸರಾಜನ ಕಥೆ. -- ಕೊಂಡು, ಕಣ್ಣುಗಳಿಗೆ ಒತ್ತಿಕೊಂಡು, ಕುಶಲಪ್ರಶ್ನೆ ಯಂ ಬೆಸಗೊಂಡು, ಒತ್ತಿನಲ್ಲಿ ಕುಳ್ಳಿರಿಸಿಕೊಂಡು ಅಯ್ಯಾ ಪುರೋಹಿತರೇ, ನೀವು ತೀರಯಾತ್ರೆಗೆ ಹೋಗಿ ಬಹುದಿವಸವಾದುದು, ಯಾವಯಾವ ದೇಶದಲ್ಲಿ ಯಾವಯಾವ ದೊರೆಗಳು ಎಂತು ರಾಜ್ಯ ವಂ ಪರಿಪಾಲಿಸುತ್ತಿರುವರು, ಅವರ ಗುಣಂಗಳನ್ನೂ, ಅಲ್ಲಲ್ಲಿರುವಂಥ ಮತ ಮೆಗಳನ್ನೂ ಹೇಳುವರಾಗುವಿರಿ ಎಂದು ಪಿಸಿಗೊಳಲ ಪುರೋಹಿತನು ಸಮಸ್ಯವಾದ ದೊರೆಗಳ ವೃತ್ತಾಂತವನ್ನು ಹೇಳುವ ಕಾಲದಲ್ಲಿ ವತ್ಸ ರಾಜನ ದೇಶಸಂಪತ್ತನ್ನೂ ಅವನ ಗುಣಾತಿಶಯಗಳನ್ನೂ ಸಹ ಕೊನೆಯಿಲ್ಲದಂತೆ ಹೆಕ್ಕಾಗಿ ವಿಸ್ತರಿಸಿ ಪೇಳಲಾ ರಾಯನು- ಅಯ್ಯಾ, ಪುರೋಹಿತರೇ, ವತ್ಸ ರಾಜನನ್ನು ಕಂಡಿದ್ದೀರಾ ? ಕುಶಲ ದಲ್ಲಿರುವನೆ ? ಎಂದು ನುಡಿಯಲಾಪುರೋಹಿತನು-: ಎಲೈ, ಸ್ವಾಮಿಯೇ, ಆ ವತ್ಸ ರಾಜನ ದೇಶದಲ್ಲೇ ಬಂದೆನಲ್ಲದೆ, ಅವನ ಪಟ್ಟಣಕ್ಕೆ ಪೋಗಿ ಸಂದರ್ಶನವಂ ಗೈದು ಬರಲಿಲ್ಲ. ಈಗ ನಾನು ಸ್ವಾಮಿಯವರ ಸಂದರ್ಶನಕ್ಕೆ ಬರುವಾಗ ಅರಮ ನೆಯ ಬಾಗಿಲಲ್ಲಿ ಒಬ್ಬಾನೊಬ್ಬ ಕಾರನು ಪತ್ರಿಕೆಯನ್ನು ಕರದಲ್ಲಿ ಸಿಡಿದು ನಿಂದು ಎನ್ನ೦ ಕುರಿತು-ಎಲ್ವೆ ಬಾ ರ್ಹ್ಮದೋಮನೇ, ನಾನು ನಿದಿಶಾಧಿಪತಿಯಾದ ವತ್ಸರಾ ಜನ ಮಂತ್ರಿಯಾದ ಗಂಧರಾಯಣನ, ಬರೆದುಕೊಟ್ಟ ಪತಿಕೆಯಂ ತಂದು ವಿಕನುಬಾಹುರಾಜೇಂದ್ರನ ಚರಣ ನಂ ಕಾಣಬೇಕೆಂದು ಇರುವೆನು, ಈ ವ್ಯ ತಾಂತವನ್ನು ರಾಜೇಂದ್ರನಿಗೆ ಪಿಸಬೇಕೆಂದು ಹೇಳಿದನು. ಆಪ ಸುತ ಬಂದುದ ರಿಂದ ವಿಜ್ಞಾಪನೆಯಂ ಗೈದೆನು ?” ಎನ್ನಲ.; ರಾಯನು ವಸುಭೂತಿಯಾದ ಮಂತ್ರಿ ಯಂ ಕುರಿತು ಅಯ್ಯಾ ಮಂತ್ರಿಯೇ, ವಿದಿಶಾದೇಶದಿಂದ ಬಂದಿರುವ ಚಾರನಂ ಕರೆಯಿಸುವನಾಗು. ಎಂದು ನುಡಿದನು. ಎಂಬಲ್ಲಿಗೆ ಶಿ ಕೃಷ್ಣರಾಜ ೦ಕರವರಿಂ ಲೋಕೋಪಕಾರಾದ್ಧಮಾಗಿ ನವರಸಭರಿತವಾಗಿ ಕರ್ನಾಟಕಭಾಷೆಯಿಂದ ಏರಚಿಸಲ್ಪಟ್ಟ ಶ್ರೀಕೃಷ್ಣರಾಜಸೂಕ್ತಿಮುಕ್ತಾವಳಿಯೆಂಬ ಗ್ರಂಥದೊಳೆ ಪ್ರಥವ ಗುಚ್ಛಂ ಸಂಪೂರ್ಣ ೦. Sh